ಹುಣಸೆ ಹಣ್ಣನ್ನು ತೊಳೆದು ನೆನೆಸಿಟ್ಟುಕೊಳ್ಳಬೇಕು. ಬಳಿಕ ನೆನೆಸಿಟ್ಟ ಹುಣಸೆಹಣ್ಣು ಹಾಗೂ ಉಪ್ಪನ್ನು ಮಿಕ್ಸಿ ಜಾರ್'ಗೆ ಹಾಕಿ ಪೇಸ್ಟ್ ರೀತಿ ರುಬ್ಬಿಕೊಳ್ಳಿ.
ಒಲೆಯ ಮೇಲೆ ಪ್ಯಾನ್ ಇಟ್ಟು ಬೆಲ್ಲ, ಒಂದು ಚಮಚ ನೀರು ಹಾಕಿ ಬೆಲ್ಲ ಕರಗಲು ಬಿಡಿ. ನಂತರ ರುಬ್ಬಿದ ಹುಣಸೆಹಣ್ಣು, ಉಪ್ಪು, ಖಾರದ ಪುಡಿ, ಚಾಟ್ ಮಸಾಲ ಪುಡಿ, ಜೀರಿಗೆ ಪುಡಿ ಎಲ್ಲವನ್ನೂ ಹಾಕಿ, ಹಲ್ವ ರೀತಿ ಬರುವವರೆಗೆ ಕೈಯಾಡಿಸುತ್ತಿರಿ. ಮಿಶ್ರಣ ತಣ್ಣಗಾದ ಬಳಿದ ಕ್ಯಾಂಡಿ ಅಥವಾ ಪ್ಲಾಸ್ಟಿಕ್ ಚಮಚಕ್ಕೆ ಹಾಕಿ, ಕವರ್ ನಿಂದ ಮುಚ್ಚಿದರೆ ರುಚಿಕರವಾದ ಹುಣಸೆ ಹಣ್ಣಿನ ಮಿಠಾಯಿ ಸವಿಯಲು ಸಿದ್ಧ.