ಪಾಸ್ತಾ ಬಟರ್ ಮಸಾಲಾ

ರುಚಿಕರವಾದ ಪಾಸ್ತಾ ಬಟರ್ ಮಸಾಲಾ ಮಾಡುವ ವಿಧಾನ...
ಪಾಸ್ತಾ ಬಟರ್ ಮಸಾಲಾ
ಪಾಸ್ತಾ ಬಟರ್ ಮಸಾಲಾ
Updated on: 

ಬೇಕಾಗುವ ಪದಾರ್ಥಗಳು

  • ಪಾಸ್ತಾ- ಬಟ್ಟಲು
  • ಬೆಣ್ಣೆ- ಸ್ವಲ್ಪ
  • ಶುಂಠಿ-ಬೆಳ್ಳುಳ್ಳಿ- 1 ಚಮಚ
  • ಟೊಮ್ಯಾಟೋ- 1
  • ಈರುಳ್ಳಿ-2
  • ಖಾರದ ಪುಡಿ- 1 ಚಮಚ
  • ಗರಂ ಮಸಾಲಾಪುಡಿ- 1 ಚಮಚ
  • ಜೀರಿಗೆ ಪುಡಿ- ಸ್ವಲ್ಪ
  • ಕಸೂರಿ ಮೇಥಿ- ಸ್ವಲ್ಪ
  • ಹಾಲು- 2 ಬಟ್ಟಲುು
  • ಎಣ್ಣೆ- 2 ಚಮಚ
  • ಕೊತ್ತಂಬರಿ ಸೊಪ್ಪು- ಸ್ವಲ್ಪ
  • ಉಪ್ಪು-ರುಚಿಗೆ ತಕ್ಕಷ್ಟು

ಮಾಡುವ ವಿಧಾನ...

  • ಒಂದು ಪ್ಯಾನ್ ಗೆ ಸ್ವಲ್ಪ ಉಪ್ಪು, 4-5 ಹನಿ ಎಣ್ಣೆ, ಪಾಸ್ತಾ ಮತ್ತು ನೀರನ್ನು ಹಾಕಿ ಬೇಯಿಸಿ. ಪಾಸ್ತಾ ಬೆಂದ ನಂತರ ಅದರಲ್ಲಿರುವ ನೀರನ್ನು ಬಸಿದು ಪಕ್ಕಕ್ಕಿಡಿ.
  • ಇನ್ನೊಂದು ಪ್ಯಾನ್ ನಲ್ಲಿ ಎಣ್ಣೆಯನ್ನು ಹಾಕಿ ಬಿಸಿಯಾಗಲು ಬಿಡಿ. ನಂತರ ಈರುಳ್ಳಿ, ಟೊಮೆಟೊ, ಶುಂಠಿ ಮತ್ತು ಬೆಳ್ಳುಳ್ಳಿ ಹಾಕಿ ಫ್ರೈ ಮಾಡಿ. ಅದು ತಣ್ಣಗಾದ ನಂತ್ರ ಮಿಶ್ರಣವನ್ನು ರುಬ್ಬಿಕೊಳ್ಳಿ.
  • ಅದೇ ಪ್ಯಾನ್ ಗೆ ಸ್ವಲ್ಪ ಬೆಣ್ಣೆ ಹಾಕಿ. ನಂತರ ರುಬ್ಬಿದ ಮಿಶ್ರಣ ಹಾಗೂ ಉಪ್ಪನ್ನು ಹಾಕಿ ಬೇಯಿಸಿ. ಬಳಿಕ ಖಾರದ ಪುಡಿ ಗರಂ ಮಸಾಲಾ ಪುಡಿ, ಜೀರಿಗೆ ಹಾಕಿ ಫ್ರೈ ಮಾಡಿ.
  • ಇದಕ್ಕೆ ಹಾಲನ್ನು ಹಾಕಿ ಮಿಶ್ರಣ ದಪ್ಪಗಾಗುವವರೆಗೆ ಬೇಯಿಸಿ. ಹಾಲಿನ ಜೊತೆ ಮಸಾಲೆ ಸರಿಯಾಗಿ ಬೆಂದ ನಂತರ ಅದಕ್ಕೆ ಕಸೂರಿ ಮೇಥಿ, ಕೊತ್ತಂಬರಿ ಸೊಪ್ಪು ಹಾಗೂ ಪಾಸ್ತಾ ಹಾಕಿ ಮಿಶ್ರಣ ಮಾಡಿದರೆ ರುಚಿಕರವಾದ ಪಾಸ್ತಾ ಬಟರ್ ಮಾಸಾಲ ಸವಿಯಲು ಸಿದ್ಧ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com