ಕೇಸರಿ ಪಿಸ್ತಾ ಕೀರ್

ರುಚಿಕರವಾದ ಕೇಸರಿ ಪಿಸ್ತಾ ಕೀರ್ ಮಾಡುವ ವಿಧಾನ...
ಕೇಸರಿ ಪಿಸ್ತಾ ಕೀರ್
ಕೇಸರಿ ಪಿಸ್ತಾ ಕೀರ್

ಬೇಕಾಗುವ ಪದಾರ್ಥಗಳು...

  • ತುಪ್ಪ- ಅರ್ಧ ಬಟ್ಟಲು
  • ಬಾಸುಮತಿ ಅಕ್ಕಿ- ಒಂದು ಬಟ್ಟಲು
  • ಹಾಲು- ಅರ್ಧ ಲೀಟರ್
  • ದ್ರಾಕ್ಷಿ- ಸ್ವಲ್ಪ
  • ಗೋಡಂಬಿ-ಸ್ವಲ್ಪ
  • ಏಲಕ್ಕಿ 2-3
  • ಕೇಸರಿ- ಸ್ವಲ್ಪ
  • ಸಕ್ಕರೆ- ಒಂದೂವರೆ ಬಟ್ಟಲು
  • ಪಿಸ್ತಾ- 10-15

ಮಾಡುವ ವಿಧಾನ...

  • ಒಂದು ಪಾತ್ರೆಗೆ ತುಪ್ಪವನ್ನು ಹಾಕಿ ಬಿಸಿ ಮಾಡಿ. ಅದಕ್ಕೆ ಅಕ್ಕಿಯನ್ನು ಹಾಕಿ ಪ್ರೈ ಮಾಡಿ. ನಂತರ ಇದೇ ಪಾತ್ರೆಯಲ್ಲಿಯೇ ದ್ರಾಕ್ಷಿ ಹಾಗೂ ಗೋಡಂಬಿಯನ್ನು ಹುರಿದಿಟ್ಟುಕೊಳ್ಳಿ. ಮತ್ತೊಂದು ಪಾತ್ರೆಯಲ್ಲಿ ಹಾಲನ್ನು ಕುದಿಸಲು ಇಡಿ. ಅದಕ್ಕೆ ಸಕ್ಕರೆಯನ್ನು ಹಾಕಿ.
  • ಹಾಲು ತಳ ಹಿಡಿಯದಂತೆ ನೋಡಿಕೊಳ್ಳಿ. ಬಳಿಕ ಏಲಕ್ಕಿ ಪುಡಿ, ಕೇಸರಿ ಹಾಗೂ ಸಣ್ಣಗೆ ಕತ್ತರಿಸಿಕೊಂಡ ಪಿಸ್ತಾವನ್ನು ಹಾಕಿ. ನಂತರ ಹಾಲಿಗೆ ಅಕ್ಕಿಯನ್ನು ಹಾಕಿ ಬೇಯಿಸಿ. ಅಕ್ಕಿ ಬೆಂದ ನಂತರ ಸ್ವಲ್ಪ ತಣ್ಣಗಾಗಲು ಬಿಡಿ. ಬಳಿಕ ಫ್ರಿಡ್ಜ್ ನಲ್ಲಿಟ್ಟು, ತಣ್ಣನೆಯ ಕೀರನ್ನು ಸವಿಯಿರಿ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com