ಮೆಂತ್ಯ ರೈಸ್

ರುಚಿಕರವಾದ ಮೆಂತ್ಯ ರೈಸ್ ಮಾಡುವ ವಿಧಾನ...
ಮೆಂತ್ಯ ರೈಸ್
ಮೆಂತ್ಯ ರೈಸ್

ಬೇಕಾಗುವ ಪದಾರ್ಥಗಳು...

  • ಹಸಿಮೆಣಸಿನ ಕಾಯಿ- 8-10

  • ಶುಂಠಿ, ಬೆಳ್ಳುಳ್ಳಿ-ಸ್ವಲ್ಪ

  • ಪುದೀನಾ- ಸ್ವಲ್ಪ

  • ಗಸಗಸೆ-ಸ್ವಲ್ಪ

  • ಕೊತ್ತಂಬರಿ ಸೊಪ್ಪು- ಸ್ವಲ್ಪ

  • ತೆಂಗಿನ ತುರಿ- 4-6 ಚಮಚ

  • ಗೋಂಡಬಿ- 8-10

  • ಈರುಳ್ಳಿ- ಸಣ್ಣಗೆ ಹೆಚ್ಚಿದ್ದು 2

  • ಕರಿಬೇವು-ಸ್ವಲ್ಪ

  • ಪಲಾವ್ ಎಲೆ- ಸ್ವಲ್ಪ

  • ಪಲಾವ್ ಸಾಮಾಗ್ರಿ- ಸ್ವಲ್ಪ

  • ಬಟಾಣಿ- ಅರ್ಧ ಬಟ್ಟಲು

  • ಗರಂ ಮಸಾಲಾ ಪುಡಿ- 1 ಚಮಚ

  • ಅರಿಶಿಣದ ಪುಡಿ- ಸ್ವಲ್ಪ

  • ಉಪ್ಪು- ರುಚಿಗೆ ತಕ್ಕಷ್ಟು

  • ಅಕ್ಕಿ- ಒಂದೂವರೆ ಬಟ್ಟಲು

  • ಮೆಂತ್ಯೆ ಸೊಪ್ಪು- 1 ಬಟ್ಟಲು

  • ಟೊಮೆಟೋ- ಸಣ್ಣಗೆ ಹೆಚ್ಚಿದ್ದು 3

  • ದನಿಯಾ ಪುಡಿ- ಒಂದು ಚಮಚ

  • ತುಪ್ಪ -ಸ್ವಲ್ಪ

  • ನಿಂಬೆ ರಸ- ಒಂದು ಚಮಚ

ಮಾಡುವ ವಿಧಾನ...

  • ಮೊದಲಿಗೆ ಮಿಕ್ಸಿ ಜಾರ್'ಗೆ ಹಸಿಮೆಣಸಿನ ಕಾಯಿ. ಶುಂಠಿ, ಬೆಳ್ಳುಳ್ಳಿ, ಪುದೀನಾ, ಗಸಗಸೆ, ಕೊತ್ತಂಬರಿ ಸೊಪ್ಪು, ತೆಂಗಿನ ತುರಿ, ಗೋಂಡಬಿಯನ್ನು ಹಾಕಿ ನುಣ್ಣಗೆ ರುಬ್ಬಿಕೊಳ್ಳಿ.

  • ಒಲೆಯ ಮೇಲೆ ಕುಕ್ಕರ್ ಇಟ್ಟು ಅದಕ್ಕೆ ಸ್ವಲ್ಪ ತುಪ್ಪ ಹಾಗೂ ಎಣ್ಣೆಯನ್ನು ಹಾಕಿ. ಕಾದ ನಂತರ ಪಲಾವ್ ಎಲೆ ಹಾಗೂ ಪಲಾವ್ ಸಾಮಾಗ್ರಿಗಳನ್ನು ಹಾಕಿ. ನಂತರ ಈರುಳ್ಳಿಯನ್ನು ಹಾಕಿ ಕೆಂಪಗೆ ಹುರಿದುಕೊಳ್ಳಿ.

  • ನಂತರ ಬಟಾಣಿ, ಗರಂ ಮಸಾಲಾ ಪುಡಿ. ಅರಿಶಿಣದ ಪುಡಿ ಹಾಗೂ ರುಬ್ಬಿಕೊಂಡ ಮಸಾಲೆಯನ್ನು ಹಾಕಿ ಚೆನ್ನಾಕಿ ಮಿಶ್ರಣ ಮಾಡಿ. ಇದೀಗ ಮೆಂತ್ಯೆ ಸೊಪ್ಪು, ಟೊಮೆಟೋ, ದನಿಯಾ ಪುಡಿ ಹಾಕಿ ಟೊಮೆಟೋ ಮೆತ್ತಗಾಗುವವರೆಗೆ ಕೈಯಾಡಿಸುತ್ತಿರಿ.

  • ನಂತರ ರುಚಿಗೆ ತಕ್ಕಷ್ಟು ಉಪ್ಪು, ಅಕ್ಕಿ ಹಾಗೂ ಅಳತೆ ನೀರು ಹಾಕಿ ಚೆನ್ನಾಗಿ ಮಿಶ್ರಣ ಮಾಡಿ, ತುಪ್ಪ ಹಾಗೂ ನಿಂಬೆ ರಸವನ್ನು ಸೇರಿಸಿ ಮುಚ್ಚಳ ಮುಚ್ಚಿ, 2 ಕೂಗು ಕೂಗಿಸಿದರೆ ರುಚಿಕರವಾದ ಮೆಂತ್ಯೆ ರೈಸ್ ಸವಿಯಲು ಸಿದ್ಧ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com