ಮೇಥಿ ಪನ್ನೀರ್ ಕರ್ರಿ- Methi paneer curry recipe in Kannada

ರುಚಿಕರವಾದ ಮೇಥಿ ಪನ್ನೀರ್ ಕರ್ರಿ ಮಾಡುವ ವಿಧಾನ...
Methi paneer curry
ಮೇಥಿ ಪನ್ನೀರ್ ಕರ್ರಿ
Updated on: 

ಬೇಕಾಗುವ ಪದಾರ್ಥಗಳು...

  • ಪನ್ನೀರ್- 200 ಗ್ರಾಂ

  • ಚಕ್ಕೆ- ಸ್ವಲ್ಪ

  • ಲವಂಗ-ಸ್ವಲ್ಪ

  • ಕಾಳು ಮೆಣಸು- ಕಾಲು ಚಮಚ

  • ಶುಂಠಿ ಹಾಗೂ ಬೆಳ್ಳುಳ್ಳಿ-ಸ್ವಲ್ಪ

  • ಹಸಿಮೆಣಸಿನ ಕಾಯಿ- 9-10

  • ಈರುಳ್ಳಿ- 1

  • ಗೋಡಂಬಿ- ಅರ್ಧ ಹಿಡಿಯಷ್ಟು

  • ಜೀರಿಗೆ -ಸ್ವಲ್ಪ

  • ಮೆಂತ್ಯೆ ಸೊಪ್ಪು- 1 ಬಟ್ಟಲು

  • ಬಟಾಣಿ- ಒಂದು ಬಟ್ಟಲು (ಬೇಯಿಸಿಟ್ಟುಕೊಳ್ಳಿ)

  • ಗರಂ ಮಸಾಲಾ ಪುಡಿ- ಅರ್ಧ ಚಮಚ

  • ಉಪ್ಪು- ರುಚಿಗೆ ತಕ್ಕಷ್ಟು

  • ಕೊತ್ತಂಬರಿ ಸೊಪ್ಪು-ಸ್ವಲ್ಪ

ಮಾಡುವ ವಿಧಾನ...

  • ಮೊದಲಿಗೆ ಒಲೆಯ ಮೇಲೆ ಒಂದು ಪ್ಯಾನ್ ಇಟ್ಟು ಅದಕ್ಕೆ ಎಣ್ಣೆ ಹಾಕಿ ಕಾಯಲು ಬಿಡಿ. ಇದೀಗ ಚಕ್ಕೆ, ಲವಂಗ, ಕಾಳು ಮೆಣಸು, ಶುಂಠಿ-ಬೆಳ್ಳುಳ್ಳಿ, ಹಸಿಮೆಣಸಿನ ಕಾಯಿ, ಈರುಳ್ಳಿ, ಗೋಡಂಬಿ ಹಾಕಿ ಕೆಂಪಗೆ ಹುರಿಯಿರಿ. ಇದು ತಣ್ಣಗಾದ ಬಳಿಕ ಮಿಕ್ಸಿ ಜಾರಿಗೆ ಹಾಕಿ ನುಣ್ಣಗೆ ರುಬ್ಬಿಕೊಳ್ಳಿ.

  • ಬಳಿಕ ಒಲೆಯ ಮೇಲೆ ಬಾಣಲೆ ಇಟ್ಟು ಇದಕ್ಕೆ ಸ್ವಲ್ಪ ಎಣ್ಣೆ ಹಾಕಿ. ಕಾದ ನಂತರ ಜೀರಿಗೆ ಹಾಗೂ ಮೆಂತ್ಯೆ ಸೊಪ್ಪು ಹಾಕಿ, ಹಸಿ ವಾಸನೆ ಹೋಗುವವರೆಗೆ ಹುರಿಯಿರಿ. ಇದೀಗ ಬೇಯಿಸಿದ ಬಟಾಣಿ ಹಾಗೂ ರುಬ್ಬಿಕೊಂಡ ಮಸಾಲೆ ಹಾಗೂ ಕತ್ತರಿಸಿಕೊಂಡ ಪನ್ನೀರ್ ನ್ನು ಹಾಕಿ ಚೆನ್ನಾಗಿ ಮಿಶ್ರಣ ಮಾಡಿ. ಅಗತ್ಯವಿದ್ದಷ್ಟು ನೀರು ಹಾಕಿ, ಬಳಿಕ ಉಪ್ಪು, ಗರಂಮಸಾಲಾ ಪುಡಿ ಹಾಕಿ ಮಿಶ್ರಣ ಮಾಡಿ. 5-10 ನಿಮಿಷ ಕುದಿಯಲು ಬಿಡಿ. ಬಳಿಕ ಕೊತ್ತಂಬರಿ ಸೊಪ್ಪಿನೊಂದಿಗೆ ಅಲಂಕರಿಸಿದರೆ ರುಚಿಕರವಾದ ಮೇಥಿ ಪನ್ನೀರ್ ಕರ್ರಿ ಸವಿಯಲು ಸಿದ್ಧ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com