ಕಾರಿನ ಒಳಗೆ ಮತ್ತು ಹೊರಗೆ ಬಳಸಬಹುದಾದ ಪಯೊನೀರ್ ಡಿಟ್ಯಾಚಬಲ್ ಟ್ಯಾಬ್ಲೆಟ್ ಬಿಡುಗಡೆ!

ಇನ್-ಕಾರ್ ಎಂಟರ್ಟೈನ್ಮೆಂಟ್ ಸಿಸ್ಟಮ್ ತಯಾರಕರಾದ ಪಯೊನೀರ್ ಇಂಡಿಯಾ, ಡಿಟ್ಯಾಚಬಲ್ ಬಹುಪಯೋಗಿ ಟ್ಯಾಬ್ಲೆಟ್ ಕಾಂಬೊವನ್ನು ಬಿಡುಗಡೆ ಮಾಡಿದೆ.
ಪಯೊನೀರ್ ಡಿಟ್ಯಾಚಬಲ್ ಟ್ಯಾಬ್ಲೆಟ್
ಪಯೊನೀರ್ ಡಿಟ್ಯಾಚಬಲ್ ಟ್ಯಾಬ್ಲೆಟ್
Updated on: 

ಇನ್-ಕಾರ್ ಎಂಟರ್ಟೈನ್ಮೆಂಟ್ ಸಿಸ್ಟಮ್ ತಯಾರಕರಾದ ಪಯೊನೀರ್ ಇಂಡಿಯಾ, ಡಿಟ್ಯಾಚಬಲ್ ಬಹುಪಯೋಗಿ ಟ್ಯಾಬ್ಲೆಟ್ ಕಾಂಬೊವನ್ನು ಬಿಡುಗಡೆ ಮಾಡಿದೆ. ಇದರ ಬೆಲೆ 33,890 ರೂ. ಆಗಿರುತ್ತದೆ.

ಸ್ಮಾರ್ಟ್ ಯೂನಿಟ್ ರಿಸೀವರ್ ಎಸ್‌ಡಿಎ -835TAB ಮತ್ತು SPH-T20BT ಕಾಂಬೋನಲ್ಲಿ ನಿಜವಾದ ಆಂಡ್ರಾಯ್ಡ್ ಓಎಸ್‌ಗೆ ಪ್ರಮಾಣೀಕರಿಸಿದ ಆಕ್ಸಸ್ ಇರುತ್ತದೆ ಮತ್ತು ಇದರಲ್ಲಿ ಗೂಗಲ್ ಮ್ಯಾಪ್ಸ್, ಯೂಟ್ಯೂಬ್, ಜಿಮೇಲ್ ಮತ್ತು ಪಯೊನೀರ್‌ನ ಪ್ರತ್ಯೇಕ ಅಪ್ಲಿಕೇಶನ್ "ಪಯೊನೀರ್ ಸ್ಮಾರ್ಟ್ ಸಿಂಕ್ ಆ್ಯಪ್" ಗಳನ್ನು ಮೊದಲೇ ಇನ್ ಸ್ಟಾಲ್ ಮಾಡಲಾಗಿದೆ.

ಎಸ್‌ಡಿಎ -835TAB ಟ್ಯಾಬ್ಲೆಟ್, 8 ಇಂಚಿನ ಹೈ-ರೆಸಲ್ಯೂಶನ್ ಸ್ಕ್ರೀನ್ ಡಿಸ್ಪ್ಲೇ ಮತ್ತು ಪಯೊನೀರ್‌ನ ಆಡಿಯೊಫೈಲ್ ಧ್ವನಿ ಗುಣಮಟ್ಟವನ್ನು ಹೊಂದಿದೆ.

ಕಂಪನಿಯ ಪ್ರಕಾರ, ಈ ಬಹುಪಯೋಗಿ ಟ್ಯಾಬ್ಲೆಟ್ ಅನ್ನು ವಾಹನದ ಒಳಗೆ ಮತ್ತು ಹೊರಗೆ ಬಳಸಬಹುದು.

ಆಡಿಯೊ ರಿಸೀವರ್, ಎಸ್‌ಪಿಹೆಚ್-T20BT, ಟ್ಯಾಬ್ಲೆಟ್ ಮೌಂಟ್ ಕ್ರ್ಯಾಡಲ್ ನೊಂದಿಗೆ 2-ಡಿಐಎನ್ ರಿಸೀವರ್ ಅನ್ನು ಹೊಂದಿದೆ. ಜೊತೆಗೆ, ಮೊಸ್ಫೆಟ್ 50Wx4 ಆಂಪ್ಲಿಫೈಯರ್, 3 ಆರ್‏ಸಿಎ ಪ್ರಿ-ಔಟ್, ರಿಯರ್ ಕ್ಯಾಮರಾ ಇನ್ಪುಟ್ ಮತ್ತು ಬ್ಲೂಟೂತ್ ಹೊಂದಿದೆ.

ಹಿಂಭಾಗದ ಸ್ಕ್ರೀನ್ ಗಳನ್ನು ಸಂಪರ್ಕಿಸಲು ಇದು ವೀಡಿಯೊ ಔಟ್‌ಪುಟ್, ಸ್ಟೀರಿಂಗ್ ವೀಲ್ ಕಂಟ್ರೋಲ್ ಮತ್ತು ಆಡಿಯೊ ಟ್ಯೂನಿಂಗ್ ಸೆಟ್ಟಿಂಗ್‌ಗಳನ್ನು ಸಂಪರ್ಕಿಸಲು ವೈರ್ಡ್ ರಿಮೋಟ್ ಅನ್ನು ಸಹ ಹೊಂದಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com