ಗ್ಯಾಡ್ಜೆಟ್ ರಿವ್ಯೂ: ಥಾಮ್ಸನ್ ಬಿಬಿಎಕ್ಸ್ 01 ಬೂಮ್‌ಬಾಕ್ಸ್

ಥಾಮ್ಸನ್‌ನ ಯೂತ್ ಮೆಷಿನ್ ಬೂಮ್‌ಬಾಕ್ಸ್ ಪೋರ್ಟಬಲ್ ಸ್ಪೀಕರ್ ಆಗಿದ್ದು, ಸ್ವಲ್ಪ ಮೋಜು ಮಾಡ ಬಯಸುವವರಿಗೆ ಇದು ಹೇಳಿಮಾಡಿಸಿದ್ದಾಗಿದೆ. ಹೆಚ್ಚುವರಿ ನಿಯಾನ್ ಹಸಿರು ಭುಜದ ಪಟ್ಟಿಯನ್ನು ಹೊಂದಿರುವ ಸ್ಪೀಕರನ್ನು ಆರಾಮವಾಗಿ ಜೊತೆಯಲ್ಲೇ ತೆಗೆದುಕೊಂಡು ಹೋಗಬಹುದಾಗಿದೆ.
ಥಾಮ್ಸನ್ ಬಿಬಿಎಕ್ಸ್ 01 ಬೂಮ್‌ಬಾಕ್ಸ್
ಥಾಮ್ಸನ್ ಬಿಬಿಎಕ್ಸ್ 01 ಬೂಮ್‌ಬಾಕ್ಸ್
Updated on: 

ಥಾಮ್ಸನ್‌ನ ಯೂತ್ ಮೆಷಿನ್ ಬೂಮ್‌ಬಾಕ್ಸ್ ಪೋರ್ಟಬಲ್ ಸ್ಪೀಕರ್ ಆಗಿದ್ದು, ಸ್ವಲ್ಪ ಮೋಜು ಮಾಡ ಬಯಸುವವರಿಗೆ ಇದು ಹೇಳಿಮಾಡಿಸಿದ್ದಾಗಿದೆ.  ಹೆಚ್ಚುವರಿ ನಿಯಾನ್ ಹಸಿರು ಭುಜದ ಪಟ್ಟಿಯನ್ನು ಹೊಂದಿರುವ ಸ್ಪೀಕರನ್ನು ಆರಾಮವಾಗಿ ಜೊತೆಯಲ್ಲೇ ತೆಗೆದುಕೊಂಡು ಹೋಗಬಹುದಾಗಿದೆ. ಬೂಮ್‌ಬಾಕ್ಸ್ 2x3 ಇಂಚಿನ ವೂಫರ್‌ಗಳು ಮತ್ತು ಡ್ಯುಯಲ್ ಪ್ಯಾಸಿವ್ ರೇಡಿಯೇಟರ್‌ಗಳೊಂದಿಗೆ ಮಧ್ಯಮ ಗಾತ್ರದ ಫಾರ್ಮ್ ಫ್ಯಾಕ್ಟರ್‌ನಲ್ಲಿ ಸಿಗುತ್ತದೆ. ಇದು ಸಾಮಾನ್ಯ ನೀರಿನ ಪ್ರತಿರೋಧ ಮತ್ತು ಧೂಳು ನಿರೋಧಕಕ್ಕಾಗಿ ಐಪಿಎಕ್ಸ್ 5 ರೇಟಿಂಗ್ ಹೊಂದಿದೆ.

ಔಟ್‌ಪುಟ್ ಅನ್ನು 20 ವ್ಯಾಟ್‌ಗಳಿಗೆ ದ್ವಿಗುಣಗೊಳಿಸಲು ಎರಡು ಬಿಬಿಎಕ್ಸ್ 01 ಗಳನ್ನು ಸಹ ಜೋಡಿಸಬಹುದು. ಸ್ಪೀಕರ್ ನ ಬಾಸ್, ವೋಕಲ್ ಮತ್ತು ಲೌಡ್ನೆಸ್ ಈ ವರ್ಗದಲ್ಲಿಯೇ ಅತ್ಯುತ್ತಮವಾಗಿದ. ಒಂದೇ ಚಾರ್ಜ್‌ನಲ್ಲಿ ಸುಮಾರು ಆರು ಗಂಟೆಗಳ ಕಾಲ ಯಶಸ್ವಿಯಾಗಿ ಉಪಯೋಗಿಸಬಹುದು.

ನೀವು ಸ್ಪೀಕರ್ ಅನ್ನು ಎಲ್ಲಿ ಇರಿಸಿದರೂ ಸೌಂಡ್ ಸ್ಟೇಜ್ ಎಲ್ಲಾ ದಿಕ್ಕುಗಳಲ್ಲಿಯೂ ಸಮಾನವಾಗಿರುವುದರಿಂದ ಉತ್ತಮ ಅನುಭವವನ್ನು ಆನಂದಿಸಬಹುದು.

ನೇರವಾಗಿ ಬ್ಲೂಟೂತ್ ಜೋಡಣೆ ಮಾಡಬಹುದು ಮತ್ತು ಫೋನ್‌ನಲ್ಲಿ ಬಿಟಿಯನ್ನು ಬದಲಾಯಿಸುವಾಗಲೆಲ್ಲಾ ಸಾಧನವು ಸ್ವಯಂ ಜೋಡಣೆಗೊಳ್ಳುತ್ತದೆ. ಮೈಕ್ರೊ ಎಸ್ಡಿ ಸ್ಲಾಟ್, ಯುಎಸ್ಬಿ ಸ್ಲಾಟ್ ಮತ್ತು ಎಯುಎಕ್ಸ್ ಮೂಲಕ ಸುಲಭವಾಗಿ ಫೈಲ್ ಗಳನ್ನು ಸ್ಪೀಕರ್ ನಲ್ಲಿ ಕೇಳಬಹುದು. ಎಫ್ಎಂ ರೇಡಿಯೋ ಯಾವುದೇ ಅಚಣೆ ಇಲ್ಲದೆ ಸ್ಪಷ್ಟವಾಗಿದೆ. ಬೆಲೆ ಸುಮಾರು ರೂ.1,999.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com