ಮೆದುಳಿಗೆ ಮೇವು

'ನಿನ್ ತಲೇಲಿ ಸಗಣಿ ತುಂಬಿಕೊಂಡಿದ್ಯಾ' ಅಂತ ಮೇಷ್ಟ್ರು ಮಕ್ಕಳಿಗೆ ಬಯ್ಯೋದು ಕಾಮನ್. ಅದರರ್ಥ, ಆ ವಿದ್ಯಾರ್ಥಿ ತನ್ನ ಬುದ್ಧಿಸಾಮರ್ಥ್ಯ ಬಳಸುತ್ತಿಲ್ಲ...
ಮೆದುಳಿಗೆ ಮೇವು
Updated on: 

'ನಿನ್ ತಲೇಲಿ ಸಗಣಿ ತುಂಬಿಕೊಂಡಿದ್ಯಾ' ಅಂತ ಮೇಷ್ಟ್ರು ಮಕ್ಕಳಿಗೆ ಬಯ್ಯೋದು ಕಾಮನ್. ಅದರರ್ಥ, ಆ ವಿದ್ಯಾರ್ಥಿ ತನ್ನ ಬುದ್ಧಿಸಾಮರ್ಥ್ಯ ಬಳಸುತ್ತಿಲ್ಲ, ಮೆದುಳಿಗೆ ಕೆಲಸ ಕೊಡ್ತಿಲ್ಲ ಎಂದು. ಆದರೆ, ಕೆಲವರು ಏನೋ ಹೊಸದು ಕಲಿಯಬೇಕು, ಏನಾದರೂ ಮಾಡಬೇಕು ಎಂದುಕೊಳ್ಳುತ್ತಾರೆ. ಅದಕ್ಕೆ ಅವರ ತಲೆ ಸಾಥ್ ಕೊಡುವುದಿಲ್ಲ, ಮೆದುಳು ಕೆಲಸ ಮಾಡುವುದಿಲ್ಲ. ಇದಕ್ಕೆ ಮುಖ್ಯ ಕಾರಣವೆಂದರೆ ನಾವು ಚುಟುವಟಿಕೆಯಿಂದ ಇರುವುದಿಲ್ಲ. ಮೆದುಳಿಗೆ ಕೆಲಸ ಕೊಟ್ಟಷ್ಟೂ ಅದು ಚುರುಕಾಗುತ್ತದೆ ಎಂದು ವೈದ್ಯ ವಿಜ್ಞಾನವೂ ದೃಢಪಡಿಸಿದೆ. ಹೀಗಿದ್ದಾಗ್ಯೂ, ನಮ್ಮ ಬುದ್ಧಿಮತ್ತೆಯನ್ನು ಮತ್ತಷ್ಟು ಚುರುಕುಗೊಳಿಸಲು ಇಲ್ಲಿವೆ ಕೆಲವೊಂದು ಟಿಪ್ಸ್. ಓದಿ ಟ್ರೈ ಮಾಡಿ...

  • ಪ್ರತಿನಿತ್ಯ ಬಾದಾಮಿ ಸೇವಿಸಿ.
  • ಕಿತ್ತಳೆ ಹಣ್ಣಿನ ರಸ ಸೇವಿಸುವುದರಿಂದ ಜ್ಞಾಪಕ, ಬುದ್ಧಿಮತ್ತೆ ಹೆಚ್ಚಾಗುತ್ತದೆ.
  • ನಿದ್ರಾಭಂಗವಾಗದಂತೆ ನೋಡಿಕೊಳ್ಳಿ. ಹಾಗಂತ ಕುಂಭಕರ್ಣ ನಿದ್ರೆ ಬೇಡ. ನಿಮಗೆ ಸಾಕಾಗುವಷ್ಟು ನಿದ್ದೆ ಮಾಡಿ.
  • ವಾರದಲ್ಲಿ ಒಂದು ದಿನವಾದರೂ ಉಪವಾಸವಿರಿ. ಹೀಗೆ ಮಾಡುವುದರಿಂದ ನಿಮ್ಮ ದೇಹಕ್ಕೆ ಮಾತ್ರವಲ್ಲದೆ ಮನಸ್ಸಿನ ಆರೋಗ್ಯವೂ ಸುಧಾರಿಸುತ್ತದೆ.
  • 'ಎಮ್ಟಿ ಮೈಂಡ್ ಡೆವಿಲ್ಸ್ ವರ್ಕ್ಸ್‌ಶಾಪ್‌' ಎಂದು ಹೇಳುತ್ತಾರೆ. ಅದರರ್ಥ ನೀವು ಮೆದುಳಿಗೆ ಕೆಲಸ ಕೊಡದಿದ್ದರೆ, ಅದು ಸೋಮಾರಿಯಾಗುತ್ತದೆ. ಹಾಗಾಗಿ ಮೆದುಳಿಗೆ ಕೆಲಸ ಕೊಡುತ್ತಿರಿ.
  • ಯೋಗ ಮತ್ತು ಧ್ಯಾನ ಮಾಡಿ.
  • ರಾತ್ರಿ ಹೆಚ್ಚಿಗೆ ತಿನ್ನಬೇಡಿ. ಇನ್ನಷ್ಟು ತಿನ್ನಬೇಕು ಅನ್ನಿಸುತ್ತಿರುವಾಗಲೇ ನಿಲ್ಲಿಸಿಬಿಡಿ.
  • ಕಲ್ಪನಾಶಕ್ತಿ ಬೆಳೆಸಿಕೊಳ್ಳಿ. ನೆನಪಿರಲಿ, ಟಿವಿ ನೋಡೋದರಿಂದ ಕಲ್ಪನಾ ಶಕ್ತಿ ಬೆಳೆಯೋದಿಲ್ಲ. ಅದಕ್ಕಾಗಿ ಪುಸ್ತಕಗಳನ್ನು ಓದುವುದನ್ನು ರೂಢಿಸಿಕೊಳ್ಳಿ. ರೇಡಿಯೋ ಕೇಳಿ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com