

ಕಾಫಿ, ಟೀ ಅತಿಯಾದ ಅಭ್ಯಾಸ ಆರೋಗ್ಯಕ್ಕೆ ಹಾನಿಕರ ಎಂದು ಇಷ್ಟು ದಿನ ಕೇಳಿದ್ದವರಿಗೆ ಚಹಾ ಸೇವನೆಯಿಂದ ಸೌಂದರ್ಯವೃದ್ಧಿಯಾಗುತ್ತದೆ, ಆರೋಗ್ಯ ವೃದ್ಧಿಸುತ್ತದೆ ಎಂದರೆ ಕುತೂಹಲದ ಜೊತೆಗೆ ಅಬ್ಬಾ ಇನ್ನಾದರೂ ಮನಸೋಇಚ್ಛೆ ತಮ್ಮ ಪ್ರೀತಿಯ ಪಾನೀಯ ಕುಡಿಯಬಹುದೆನ್ನುವ ನೆಮ್ಮದಿ. ಆದರೆ ಅದು ಗ್ರೀನ್ ಟೀ ಆಗಿದ್ದರೆ ಮಾತ್ರ ನಿಮ್ಮ ಸಂತಸ ಹಾಗೆಯೇ ಮುಂದುವರೆಯುತ್ತದೆ. ಮೊದಲ ಬಾರಿಗೆ ಸೇವಿಸಿದಾಗ ಕಸಿವಿಸಿಯಾದರೂ ಒಂದು ಬಾರಿ ಇದರ ಚಟಕ್ಕೆ ಅಂಟಿಕೊಂಡರೆ ನೀವೇ ಅದನ್ನು ದೈನಂದಿನ ಅಭ್ಯಾಸವಾಗಿ ರೂಢಿಸಿಕೊಂಡು ಬಿಡುತ್ತೀರಿ. ಇದರಲ್ಲಿ ಆ್ಯಂಟಿಆಕ್ಸಿಡೆಂಟ್ಸ್ ಹೆಚ್ಚಾಗಿರುವುದರಿಂದ ನಿಮ್ಮ ಶರೀರದಲ್ಲಿ ಕೆಫಿನ್ ಮತ್ತು ತಂಬಾಕಿನಿಂದ ಶೇಖರಣೆಯಾದ ವಿಷಕಾರಕಗಳನ್ನು ಹೊರಹಾಕುವಲ್ಲಿ ಹೆಚ್ಚಿನ ಪಾತ್ರವನ್ನು ವಹಿಸುತ್ತದೆ.
ದೇಹಕ್ಕೆ ಚೈತನ್ಯ
ಗ್ರೀನ್ ಟೀ ಅಭ್ಯಾಸವಿರುವವರು ಇಳಿವಯಸ್ಸಿನಲ್ಲೂ ಕೂಡ ಚಟುವಟಿಕೆಯಿಂದ ಇರಬಹುದು. ಇದರಲ್ಲಿರುವ ಇಜಿಸಿಜಿ ಆ್ಯಂಟಿಆಕ್ಸಿಡೆಂಟ್ಸ್ ದೇಹದಲ್ಲಿರುವ ರೋಗಾಣುಗಳ ವಿರುದ್ಧ ಹೋರಾಡುತ್ತದೆ. ಕೊಲೆಸ್ಟರಾಲ್ ಹೆಚ್ಚಾಗದಂತೆ ತಡೆಯುವುದರ ಜೊತೆಗೆ ಕ್ಯಾನ್ಸರ್ ತಡೆಗಟ್ಟುವ ಔಷಧೀಯ ಗುಣವನ್ನೂ ಹೊಂದಿದೆ. ಇದರಲ್ಲಿರುವ ವಿಟಮಿನ್ ರಕ್ತ ಹೆಪ್ಪುಗಟ್ಟುವ ಸಮಸ್ಯೆಯಿಂದ ಮುಕ್ತಿಯನ್ನು ನೀಡುತ್ತದೆ. ಹಾಗೆಯೇ ನಿಮ್ಮ ದಿನನಿತ್ಯದ ಒತ್ತಡವನ್ನೂ ಕಡಿಮೆ ಮಾಡುವ ಶಕ್ತಿ ಹೊಂದಿದೆ. ಗ್ರೀನ್ ಟೀ ಸೇವನೆಯಿಂದ ಮನುಷ್ಯನ ಸ್ಮರಣಶಕ್ತಿ ಹೆಚ್ಚುತ್ತದೆ ಎನ್ನುವುದು ವಿಜ್ಞಾನಿಗಳ ಹೇಳಿಕೆ. ಇದರಿಂದ ದೇಹದಲ್ಲಿ ರೋಗ ನಿರೋಧಕ ಶಕ್ತಿ ಕೂಡ ಹೆಚ್ಚಿರುವುದರಿಂದ ಮೊಡವೆ, ಸುಕ್ಕುಗಳೂ ನಿಮ್ಮಿಂದ ದೂರವಾಗುತ್ತವೆ.
ಸೌಂದರ್ಯ ವೃದ್ಧಿ