ಮಾನಸಿಕ ಆರೋಗ್ಯ, ಸಂತೋಷ ವೃದ್ಧಿಗೆ ಸಹಕಾರಿ ಕ್ಯರೋಲ್ ಗಾಯನ

ವರ್ಷದ ಕೊನೆಯ ಭಾಗದಲ್ಲಿ ಆಚರಿಸುವ ಸಂಭ್ರಮದ ಹಬ್ಬ ಕ್ರಿಸ್ ಮಸ್ ಗೆ ಕೆಲವೇ ದಿನಗಳಿವೆ. ಕ್ರಿಸ್ ಮಸ್ ಎಂದರೆ ತಕ್ಷಣವೇ ನೆನಪಾಗೋದು ಕೇಕ್, ವೈನ್, ಕೋರಸ್ ಗಾಯನ.
ಕ್ಯಾರೋಲ್ ಗಾಯನ
ಕ್ಯಾರೋಲ್ ಗಾಯನ
Updated on: 
ಲಂಡನ್: ವರ್ಷದ ಕೊನೆಯ ಭಾಗದಲ್ಲಿ ಆಚರಿಸುವ ಸಂಭ್ರಮದ ಹಬ್ಬ ಕ್ರಿಸ್ ಮಸ್ ಗೆ ಕೆಲವೇ ದಿನಗಳಿವೆ. ಕ್ರಿಸ್ ಮಸ್ ಎಂದರೆ ತಕ್ಷಣವೇ ನೆನಪಾಗೋದು ಕೇಕ್, ವೈನ್, ಕೋರಸ್ ಗಾಯನ. ಹೊಸ ವಿಷಯ ಏನಪ್ಪಾ ಅಂದರೆ ಕ್ರಿಸ್ ಮಸ್ ನ ಕ್ಯರೋಲ್ ಗಾಯನದಿಂದ ಸಂತೋಷ ಹೆಚ್ಚಾಗುವುದರೊಂದಿಗೆ ಮಾನಸಿಕ ಆರೋಗ್ಯವೂ ಉತ್ತಮಗೊಳ್ಳುತ್ತದಂತೆ. 
ಹೊಸ ಸಂಶೋಧನೆಯ ಪ್ರಕಾರ ಕ್ಯರೋಲ್ ಗಾಯನದಲ್ಲಿ ಭಾಗವಹಿಸಿದವರಿಗೆ ಆತಂಕ ಮತ್ತು ಖಿನ್ನತೆಯಿಂದ ಹೊರಬರುವುದು ಸಾಧ್ಯವಾಗುತ್ತಿದ್ದು, ಸಮೂಹ ಗಾಯನ ಅಥವಾ ಕೋರಸ್ ಜನರ ಮಾನಸಿಕ ಆರೋಗ್ಯದ ಮೇಲೆ ಸಕಾರಾತ್ಮಕವಾದ ಪರಿಣಾಮ ಬೀರುತ್ತದೆ ಎಂದು ಯೂನಿವರ್ಸಿಟಿ ಆಫ್ ಈಸ್ಟ್ ಆಂಗ್ಲಿಯಾದ ಸಂಶೋಧಕರು ಹೇಳಿದ್ದಾರೆ. 
ಕ್ಯರೋಲ್ ಗಾಯನದಿಂದ ಹಾಡು ಹೇಳುವುದು ಹಾಗೂ ಸಮಾಜದೊಂದಿಗೆ ಬೆರೆಯುವುದು ಒಟ್ಟಿಗೆ ಸಾಧ್ಯವಾಗುತ್ತದೆ, ಓರ್ವ ವ್ಯಕ್ತಿಯ ಮಾನಸಿಕ ಆರೋಗ್ಯ ಉತ್ತಮಗೊಳ್ಳಲು ಇದು ಸಹಕಾರಿಯಾಗಿದೆ ಎನ್ನುತ್ತಾರೆ ಅಧ್ಯಯನ ನಡೆಸಿರುವ ತಜ್ಞ ಟಾಮ್ ಶೇಕ್ಸ್ಪಿಯರ್.  
ಸಿಂಗ್ ಯುವರ್ ಹಾರ್ಟ್ ಔಟ್ ಯೋಜನೆಯ ಮೂಲಕ ಮಾನಸಿಕ ಆರೋಗ್ಯ ಸಮಸ್ಯೆಗಳನ್ನು ಎದುರಿಸುತ್ತಿರುವ ಜನರಿಗಾಗಿಯೇ ಕಾರ್ಯಗಾರವನ್ನು ಆಯೋಜಿಸುವ ತಂಡದ ಅಧ್ಯಯನ ವರದಿಯನ್ನು ಬಿಎಂಜೆ ಜರ್ನಲ್ ಮೆಡಿಕಲ್ ಹ್ಯುಮ್ಯಾನಿಟೀಸ್ ನಲ್ಲಿ ಪ್ರಕಟಿಸಲಾಗಿದೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com