ಶಾಲೆ ಆರಂಭಿಸಲು ಉತ್ತಮ ವೇತನದ ಹುದ್ದೆ ತೊರೆದ ಸಾಫ್ಟ್ ವೇರ್ ಎಂಜಿನಿಯರ್

ಮುಂಬೈ ಮೂಲದ ಅಭಿಜಿತ್ ಸಿನ್ಹಾ 22ನೇ ವರ್ಷದಲ್ಲಿ ಇಂಜಿನಿಯರಿಂಗ್ ಪದವಿ ಮುಗಿಸಿ ಹೊರ ಬಂದಾಗ...
ಅಭಿಜಿತ್ ಸಿನ್ಹಾ ಶಾಲೆಯಲ್ಲಿ ಚಟುವಟಿಕೆಯಲ್ಲಿ ತೊಡಗಿರುವ ವಿದ್ಯಾರ್ಥಿಗಳು
ಅಭಿಜಿತ್ ಸಿನ್ಹಾ ಶಾಲೆಯಲ್ಲಿ ಚಟುವಟಿಕೆಯಲ್ಲಿ ತೊಡಗಿರುವ ವಿದ್ಯಾರ್ಥಿಗಳು
Updated on: 
ಬೆಂಗಳೂರು: ಮುಂಬೈ ಮೂಲದ ಅಭಿಜಿತ್ ಸಿನ್ಹಾ 22ನೇ ವರ್ಷದಲ್ಲಿ ಎಂಜಿನಿಯರಿಂಗ್ ಪದವಿ ಮುಗಿಸಿ ಹೊರ ಬಂದಾಗ ಎಲ್ಲರಂತೆಯೇ ಇದ್ದ.
ಸ್ವಾಂಕಿ ಐಟಿ ಸಂಸ್ಥೆಯೊಂದರಲ್ಲಿ ಕೈ ತುಂಬಾ ಸಂಬಳ ಬರುವ ಘನತೆಯ ಕೆಲಸ, ಬೆಳಗ್ಗೆ 9ರಿಂದ ಸಾಯಂಕಾಲ 5 ಗಂಟೆಯವರೆಗೆ ವಾರಗಳಲ್ಲಿ ದುಡಿದರೆ ವಾರಾಂತ್ಯದಲ್ಲಿ ಸ್ನೇಹಿತರ ಜೊತೆ ಪಾರ್ಟಿ, ಹೊರಗೆ ಸುತ್ತಾಡುವುದು, ಮೋಜು-ಮಸ್ತಿ. ಹೀಗೆ ಕೆಲ ತಿಂಗಳವರೆಗೆ ಅಭಿಜಿತ್ ಸಿನ್ಹಾನ ಕೆಲಸ ಸಾಗುತ್ತಿತ್ತು. ಆದರೆ ಆರು ತಿಂಗಳ ನಂತರ ಅಭಿಜಿತ್ ಗೆ ಈ 9ರಿಂದ 5 ಗಂಟೆಯವರೆಗಿನ ಕೆಲಸ ತನಗೆ ಹೊಂದಿಕೆಯಾಗುವುದಿಲ್ಲ, ನಾನು ಬೇರೇನೋ ಮಾಡಬೇಕು ಎಂದು ಅನ್ನಿಸತೊಡಗಿತು.
ಕೆಲಸಕ್ಕೆ ಸೇರಿ ಆರು ತಿಂಗಳಲ್ಲಿ ಬೆಂಗಳೂರು ಮೂಲದ ಸಾಫ್ಟ್ ವೇರ್ ಕಂಪೆನಿಯಲ್ಲಿ ಕೈ ತುಂಬಾ ವೇತನ ಬರುವ ಕೆಲಸವನ್ನು 2013ರಲ್ಲಿ ತೊರೆದ ಅಭಿಜಿತ್ ಸಿನ್ಹಾ, ತನ್ನ ನೆಚ್ಚಿನ ಶಿಕ್ಷಕ ವೃತ್ತಿಯನ್ನು ಆಯ್ಕೆ ಮಾಡಿಕೊಂಡರು. ಅಲ್ಲಿಂದ ಅಭಿಜಿತ್ ಸಿನ್ಹಾಗೆ ವೇತನ, ಸರಿಯಾದ ಉದ್ಯೋಗ ಎಂಬುದಿಲ್ಲ. 2014ರಲ್ಲಿ ಸಿನ್ಹಾ ಅಸಾಂಪ್ರದಾಯಿಕ ಶಾಲೆಯೊಂದನ್ನು ಬೆಂಗಳೂರು ದಕ್ಷಿಣಕ್ಕೆ ಹೊರವಲಯದಲ್ಲಿರುವ ಬಂಜರಪಾಳ್ಯ ಎಂಬ ಪುಟ್ಟ ಡಿಇಎಫ್ ವೈ(ಡಿಸೈನ್ ಎಜುಕೇಶನ್ ಫಾರ್ ಯುವರ್ ಸೆಲ್ಫ್) ಹಳ್ಳಿಯಲ್ಲಿ ಆರಂಭಿಸಿದರು. 
ಆದರೆ ಇದು ಇತರ ಶಾಲೆಗಳಂತೆ ಇರಲಿಲ್ಲ. ಈ ಶಾಲೆಗೆ ಶಿಕ್ಷಕರೇ ಇರಲಿಲ್ಲ. ಶಿಕ್ಷಣ ಕಲಿಕೆ ಪೀರ್-ಟು-ಪೀರ್ ಮಾದರಿಯಲ್ಲಿ ನಡೆಯುತ್ತದೆ. ಅಂದರೆ ಅಕ್ಕಪಕ್ಕದ ವಿದ್ಯಾರ್ಥಿಗಳಿಂದ, ಒಬ್ಬರಿಗೊಬ್ಬರು ಆಟವಾಡುತ್ತಾ, ಹರಟುತ್ತಾ ಕಲಿಯುವುದು. 
'' ಕಲಿಯುವುದು ಒಬ್ಬರಿಗೊಬ್ಬರು ಜ್ಞಾನವನ್ನು ಹಂಚಿಕೊಳ್ಳುವ ಮೂಲಕ. ಅಕ್ಕಪಕ್ಕದ ಮನೆ, ಪರಿಸರ, ನಮ್ಮ ಮನೆಗೆ ಭೇಟಿ ನೀಡುವವರು, ನೆಂಟರಿಷ್ಟರು, ಸ್ನೇಹಿತರು, ಇಂಟರ್ನೆಟ್ ಹೀಗೆ ಹಲವರಿಂದ ಮಕ್ಕಳು ಹಲವು ವಿಷಯಗಳನ್ನು ಕಲಿಯುತ್ತಾರೆ ಎನ್ನುತ್ತಾರೆ ಅಭಿಜಿತ್ ಸಿನ್ಹಾ.
ಅಭಿಜಿತ್ ಅವರ ಶಾಲೆಗೆ ಬರುವ ಮಕ್ಕಳು ಮತ್ತು ಅವರ ಪೋಷಕರು ಪೈಂಟಿಂಗ್, ಸಂಗೀತ, ಗಣಿತ, ವಿಜ್ಞಾನ, ತೋಟದ ಕೆಲಸ, ತಂತ್ರಜ್ಞಾನ ಹೀಗೆ ಏನು ಬೇಕಾದರೂ ಕಲಿಯಬಹುದು.
ನಮ್ಮ ದೇಶದ ಪುರಾತನ ಶಿಕ್ಷಣ ಪದ್ಧತಿಯಲ್ಲಿ 10 ವಿಷಯಗಳನ್ನು ಮಕ್ಕಳಿಗೆ ಕಲಿಯಲು ಹೇಳುತ್ತಾರೆ. ಅದರಲ್ಲಿ ಮಕ್ಕಳು ಕಲಿಯುವುದು ಶೇಕಡಾ 1ರಷ್ಟು ಮಾತ್ರ. ಅದರ ಬದಲು ಮಕ್ಕಳಿಗೆ ಏನು ಇಷ್ಟವೋ ಅದನ್ನು ಕಲಿಯಲಿ, ಅಥವಾ ಮಕ್ಕಳಿಗೆ ಯಾವುದು ಅಗತ್ಯವೋ ಅದನ್ನು ಕಲಿಸುವುದು ಒಳ್ಳೆಯದು ಎನ್ನುತ್ತಾರೆ.
ಇವರ ಶಾಲೆಯಲ್ಲಿನ ಅಸಂಪ್ರದಾಯಿಕ ಕಲಿಕೆ ವಿಧಾನದಿಂದಾಗಿ ಅನೇಕ ಮಕ್ಕಳು ಮತ್ತು ಪೋಷಕರಲ್ಲಿ ಹುದುಗಿರುವ ಹಲವು ಕ್ರಿಯಾಶೀಲ ಚಟುವಟಿಕೆಗಳು ಹೊರಬಂದಿದ್ದು, ಮಕ್ಕಳನ್ನು ಪ್ರತಿಭಾವಂತ ವಿದ್ಯಾರ್ಥಿಗಳನ್ನಾಗಿ ರೂಪಿಸಿದೆ.
'' ನಮ್ಮ ಶಾಲೆಯ ವಿದ್ಯಾರ್ಥಿಯೊಬ್ಬ ಮುರಿದ ಬ್ಯಾಟ್ ನಿಂದ ಎಲೆಕ್ಟ್ರಿಕ್ ಸೊಳ್ಳೆ ಬ್ಯಾಟ್ ನ್ನು ತಯಾರಿಸಿದ್ದಾನೆ. ಇದನ್ನು ಮನೆಗಳಲ್ಲಿ ಸೊಳ್ಳೆಗಳ ತೊಂದರೆಯಿಂದ ತಪ್ಪಿಸಲು ಬಳಸಬಹುದು. ಇದಕ್ಕೆ ಖರ್ಚು ಹೆಚ್ಚು ಇಲ್ಲ, ಕೇವಲ ಒಂದು ಮುರಿದ ಬ್ಯಾಟ್ ಬೇಕಾಗಿರುವುದು. ಅದನ್ನು ತಯಾರಿಸಿದ ಬಾಲಕ ಈಗ ಯುವ ಸಾಹಸೋದ್ಯಮಿ ಎಂದು ಹೆಮ್ಮೆಯಿಂದ ಹೇಳುತ್ತಾರೆ ಸಿನ್ಹಾ.
ನಮ್ಮ ಶಾಲೆಯಲ್ಲಿ ಮಕ್ಕಳನ್ನು ಬೈಯುವುದು, ಹೊಡೆಯುವುದು ಇಲ್ಲ,ಬೇರೆ ಶಾಲೆಗಳಲ್ಲಿ ಔಪಚಾರಿಕ ಶಿಕ್ಷಣ ಪಡೆಯುತ್ತಿರುವ ಮಕ್ಕಳು ಕೂಡ ಇವರ ಶಾಲೆಗೆ ಬರುತ್ತಾರಂತೆ.  
ಅಭಿಜಿತ್ ಸಿನ್ಹಾ ಕರ್ನಾಟಕದ ಎರಡು ಕಡೆ ಇಂತಹ ಶಾಲೆ ಆರಂಭಿಸಿದ್ದಾರೆ. ಕಗ್ಗಲಿಪುರ ಮತ್ತು ಮತ್ತು ಮಂಗಳೂರಿನ ಬಡ್ಜೆಯಲ್ಲಿ. ಸುಮಾರು 250 ಮಕ್ಕಳು ಇವರ ಶಾಲೆಗೆ ಈ ಅಸಂಪ್ರದಾಯಿಕ ಶಿಕ್ಷಣ ಕಲಿಯಲು ಬರುತ್ತಾರಂತೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com