ಗಂಗೂಬಾಯಿ ಹಾನಗಲ್ ಸೋದರ ಶೇಷಗಿರಿ ವಿಧಿವಶ

ಪ್ರಸಿದ್ಧ ಹಿಂದೂಸ್ತಾನಿ ಗಾಯಕಿ ದಿವಂಗತ ಗಂಗೂಬಾಯಿ ಹಾನಗಲ್ ಅವರ ಸೋದರ ಖ್ಯಾತ ತಬಲ ವಾದಕ ಶೇಷಗಿರಿ ಹಾನಗಲ್ ಅವರು ನಿಧನರಾಗಿದ್ದಾರೆ...
ಶೇಷಗಿರಿ ಹಾನಗಲ್
ಶೇಷಗಿರಿ ಹಾನಗಲ್

ಬೆಂಗಳೂರು: ಪ್ರಸಿದ್ಧ ಹಿಂದೂಸ್ತಾನಿ ಗಾಯಕಿ ದಿವಂಗತ ಗಂಗೂಬಾಯಿ ಹಾನಗಲ್ ಅವರ ಸೋದರ ಖ್ಯಾತ ತಬಲ ವಾದಕ ಶೇಷಗಿರಿ ಹಾನಗಲ್ ಅವರು ನಿಧನರಾಗಿದ್ದಾರೆ.

95 ವರ್ಷದ ಶೇಷಗಿರಿ ಹಾನಗಲ್ ಅವರು ಬೆಂಗಳೂರಿನ ರಾಘವೇಂದ್ರ ಲೇಔಟ್ ನ ನಿವಾಸದಲ್ಲಿ ಕೊನೆಯುಸಿರೆಳೆದರು. ಇಂದು ಬೆಳಗ್ಗೆ ಅವರ ನಿವಾಸದಲ್ಲಿ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ. ಬೆಳಗ್ಗೆ 9 ಗಂಟೆಗೆ ಬನಶಂಕಿಯ ರುದ್ರಭೂಮಿಯಲ್ಲಿ ಅಂತ್ಯಕ್ರಿಯೆ ನೆರವೇರಿಸಲಾಗುತ್ತದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com