ಇನ್ನು ಈ ವಿಚಾರ ಮಾಧ್ಯಮಗಳಲ್ಲಿ ವ್ಯಾಪಕ ಸುದ್ದಿಗೆ ಗ್ರಾಸವಾಗುತ್ತಿದ್ದಂತೆಯೇ ಮಾಧ್ಯಮವೊಂದಕ್ಕೆ ಪ್ರತಿಕ್ರಿಯೆ ನೀಡಿರುವ ನಟ ಹುಚ್ಚಾ ವೆಂಕಟ್, "ಯಾವುದೋ ಒಂದು ಸಣ್ಣ ವಿಚಾರಕ್ಕೆ ಸಂಬಂಧಿಸಿದಂತೆ ನಮ್ಮಿಬ್ಬರ ನಡುವೆ ಗಲಾಟೆ ಶುರುವಾಯ್ತು. ಅವರು ಕುಡಿದಿದ್ದರು. ಆ ಬಳಿಕ ಮಾತುಕತೆ ಮೂಲಕ ಬಗೆಹರಿಸಿಕೊಂಡಿದ್ದೇವೆ ಎಂದು ಹೇಳಿದ್ದಾರೆ. ಅಲ್ಲದೆ "ಗಲಾಟೆಗಳು ನನಗೆ ಮಾಮೂಲಿಯಾಗಿದೆ. ಕುಡಿದ ಹಿನ್ನಲೆಯಲ್ಲಿ ಆತ ನನ್ನ ಮೇಲೆ ಹಲ್ಲೆ ಮಾಡಿದ್ದಾನೆ. ಹಲ್ಲೆ ಬಳಿಕ ಯುವಕ ಸಾರಿ ಕೂಡ ಕೇಳಿದ್ದಾನೆ. ಈ ವಿಚಾರವನ್ನು ದೊಡ್ಡದು ಮಾಡಬೇಡಿ. ಗಲಾಟೆ, ಹಲ್ಲೆಗಳು ನಮಗೆ ದೊಡ್ಡ ವಿಚಾರವಲ್ಲ. ಒಂದು ಸಮಾಜ ಅಂತ ಹೋದಾಗ ಇದೆಲ್ಲ ಮಾಮೂಲಿ, ಹಲ್ಲೆಗಳು ನಡೆಯುತ್ತವೆ. ಅದನ್ನು ಎದುರಿಸಬೇಕು ಎಂದು ಹೇಳಿದರು.