ಪಟಿವಾಡಾ ಮತ್ತು ತೆರೆಗಾರಿ ಗ್ರಾಮಗಳಲ್ಲಿನ ಮಕ್ಕಳು ತಿಂಬೋಳಿ ಪ್ರಾಥಮಿಕ ಶಾಲೆಗೆ ಹೋಗುತ್ತಾರೆ. ಶಾಲೆಗೆ ಹಗಲು ಪ್ರಸ್ತುತ ನಾಶಗೊಂಡಿರುವ ಸೇತುವೆಯನ್ನು ಬಳಕೆ ಮಾಡುತ್ತಿದ್ದರು. ಆದರೆ, ಕಳೆದೊಂದು ವಾರದಿಂದ ಸುರಿದ ಭಾರೀ ಮಳೆಗೆ ಸೇತುವೆ ನಾಶಗೊಂಡಿದೆ. ಇದರಿಂದ ಮಕ್ಕಳು ತಮ್ಮ ಮನೆಗಳಿಗೆ ತೆರಳು ಸಾಧ್ಯವಾಗದೆ, ಯಾವುದೇ ದಾರಿಗಳಿಲ್ಲದೆ ಶಾಲೆಯಲ್ಲಿಯೇ 2 ರಾತ್ರಿ ಕಾಲ ಕಳೆದಿದ್ದಾರೆ.