ವೈಟ್ ಫೀಲ್ಡ್ ಪೊಲೀಸ್ ಠಾಣೆಯ ಡಿಸಿಪಿ ಅಬ್ದುಲ್ ಅಹದ್ ಅವರು ಮಾತನಾಡಿ, ಹೊಸ ವರ್ಷಾಚರಣೆ ದಿನದಂದು ಸಾಕಷ್ಟು ಜನರು ಕ್ಯಾಬ್ ಹಾಗೂ ಆಟೋಗಳು ದೊರಕದೆ ರಸ್ತೆಗಳಲ್ಲಿ ಸಂಕಷ್ಟ ಎದುರಿಸುತ್ತಿದ್ದರು. ಈ ಹಿನ್ನಲೆಯಲ್ಲಿ ಗಸ್ತು ವಾಹನಗಳಲ್ಲಿಯೇ ನಾಗರಿಕರನ್ನು ಅವರವರ ಮನೆಗಳಿಗೆ ಬಿಡಲಾಗಿತ್ತು. ಮಹಿಳೆಯರು, ಮಕ್ಕಳು ಹಾಗೂ ಹಿರಿಯ ನಾಗರೀಕರಿಗೆ ಹೆಚ್ಚಿನ ಪ್ರಾಮುಖ್ಯತೆಯನ್ನು ನೀಡಲಾಗಿತ್ತು ಎಂದು ಹೇಳಿದ್ದಾರೆ.