ಬೆಂಗಳೂರು: ಚೆನ್ನಾಗಿ ಓದುತ್ತಿಲ್ಲ ಅಂತ 7 ವರ್ಷದ ಮಗುವಿನ ಬೆರಳನ್ನು ಕಟ್ಟಿಂಗ್ ಪ್ಲೇಯರ್‌ನಿಂದ ಕತ್ತರಿಸಿದ ಚಿಕ್ಕಮ್ಮ!

ಚೆನ್ನಾಗಿ ಓದುತ್ತಿಲ್ಲ ಎಂಬ ಕಾರಣಕ್ಕೆ ಏಳು ವರ್ಷದ ಹೆಣ್ಣು ಹುಡುಗಿಯ ಬೆರಳನ್ನು ಚಿಕ್ಕಮ್ಮ ಕಟ್ಟಿಂಗ್ ಪ್ಲೇಯರ್ ನಿಂದ ಕತ್ತರಿಸಿ ವಿಕೃತಿ ಮೆರೆದಿದ್ದಾರೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
Updated on
ಬೆಂಗಳೂರು: ಚೆನ್ನಾಗಿ ಓದುತ್ತಿಲ್ಲ ಎಂಬ ಕಾರಣಕ್ಕೆ ಏಳು ವರ್ಷದ ಹೆಣ್ಣು ಹುಡುಗಿಯ ಬೆರಳನ್ನು ಚಿಕ್ಕಮ್ಮ ಕಟ್ಟಿಂಗ್ ಪ್ಲೇಯರ್ ನಿಂದ ಕತ್ತರಿಸಿ ವಿಕೃತಿ ಮೆರೆದಿದ್ದಾರೆ. 
ಬಾಲಕಿಯ ಬೆರಳಿನ ತುದಿ ಗಂಭೀರವಾಗಿ ಗಾಯಗೊಂಡಿದೆ. ಕೂಡಲೇ ಬಾಲಕಿಯ ಅಜ್ಜಿ ಬಾಲಕಿಯನ್ನು ಆಸ್ಪತ್ರೆಗೆ ದಾಖಲಿಸಿದರು. ಈ ಸಂಬಂಧ ಚಿಕ್ಕಮ್ಮ ಹಾಗೂ ಆಕೆಯ ಗಂಡನನ್ನು ಪೊಲೀಸರು ಬಂಧಿಸಿದ್ದಾರೆ. 
ಬಾಲಕಿಯ ಬೆರಳಿನ ಗಾಯ ಕಂಡು ವೈದ್ಯರೇ ಗಾಬರಿಗೊಂಡರು. ಇದು ಸಣ್ಣ ಮಟ್ಟಿನ ಗಾಯವಲ್ಲ ತುಂಬಾ ತೀವ್ರತರವಾಗಿದ್ದು, ಈ ಹಿನ್ನೆಲೆಯಲ್ಲಿ ವೈದ್ಯರು ಪೊಲೀಸರಿಗೆ ದೂರು ನೀಡಿದ್ದರು. 
ದಂಪತಿಗಳ ವಿರುದ್ಧ ಮೆಡಿಕೋ ಕೇಸ್ ದಾಖಲಿಸಿದ್ದು ದಂಪತಿಗಳು ತನಗೆ ಚಿತ್ರಹಿಂಸೆ ನೀಡುತ್ತಿದ್ದರು ಎಂದು ಬಾಲಕಿ ಪೊಲೀಸರಿಗೆ ತಿಳಿಸಿದ್ದಾಳೆ. 
ಬಂಧಿತ ದಂಪತಿಗಳು ಇಬ್ಬರು ಖಾಸಗಿ ಸಂಸ್ಥೆಯೊಂದರಲ್ಲಿ ಕೆಲಸ ಮಾಡುತ್ತಿದ್ದರು. ಬಾಲಕಿ ತಾಯಿಯನ್ನು ಕಳೆದುಕೊಂಡಿದ್ದು ತಂದೆ ತುಮಕೂರಿನಲ್ಲಿ ವಾಸವಾಗಿದ್ದರು. ಹೀಗಾಗಿ ತಮ್ಮ ಮಗಳನ್ನು ಅಜ್ಜಿಯ ಮನೆಯಲ್ಲಿ ಬಿಟ್ಟಿದ್ದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com