ಬಾಗಿಲು ಒಡೆಯಲು ಯತ್ನಿಸುತ್ತಿದ್ದ ಕಳ್ಳರನ್ನು ಕಿರುಚಾಡಿ ಓಡಿಸಿದ ಗೃಹಿಣಿ!

ಮನೆಯಲ್ಲಿ ಯಾರೂ ಇಲ್ಲ ಎಂದುಕೊಂಡು ಬಂದು ಮನೆಯ ಬಾಗಿಲು ಒಡೆದು ಒಳನುಗ್ಗಲು ಯತ್ನಿ ನಡೆಸುತ್ತಿದ್ದ ಕಳ್ಳರನ್ನು ಕಿರುಚಾಡಿ ಗೃಹಿಣಿಯೊಬ್ಬಳು ಸ್ಥಳದಿಂದ ಕಾಲ್ಕಿತ್ತುವಂತೆ ಮಾಡಿರುವ ಘಟನೆಯೊಂದು ಹುಳಿಮಾವು ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ...
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
Updated on: 
ಬೆಂಗಳೂರು: ಮನೆಯಲ್ಲಿ ಯಾರೂ ಇಲ್ಲ ಎಂದುಕೊಂಡು ಬಂದು ಮನೆಯ ಬಾಗಿಲು ಒಡೆದು ಒಳನುಗ್ಗಲು ಯತ್ನಿ ನಡೆಸುತ್ತಿದ್ದ ಕಳ್ಳರನ್ನು ಕಿರುಚಾಡಿ ಗೃಹಿಣಿಯೊಬ್ಬಳು ಸ್ಥಳದಿಂದ ಕಾಲ್ಕಿತ್ತುವಂತೆ ಮಾಡಿರುವ ಘಟನೆಯೊಂದು ಹುಳಿಮಾವು ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. 
ರೂಪಾ ಮತ್ತು ದೇವರಾಜ್ ದಂಪತಿ ಕೆಲ ವರ್ಷಗಳಿಂದ ಬಂಡೆ ಪಾರ್ಕ್ ಸಮೀಪ ಸ್ವಂತ ಮನೆಯಲ್ಲಿ ನೆಲೆಸಿದ್ದಾರೆ. 
ಅ.8 ರಂದು ಮನೆಯ ಆವರಣದ ಗೇಟ್'ಗೆ ಬೀಗ ಹಾಕಿ ದಂಪತಿ ಮೇಲಿನ ಮಹಡಿಯಲ್ಲಿ ಮಲಗಿದ್ದರು. ಗೇಟ್'ಗೆ ಒಳಗಿನಿಂದ ಬೀಗ ಹಾಕಿದ್ದರಿಂದ ಮನೆಯಲ್ಲಿ ಯಾರೂ ಇಲ್ಲ ಎಂದು ದುಷ್ಕರ್ಮಿಗಳಿಬ್ಬರು ಮಧ್ಯಾಹ್ನ 2.30ರ ಸುಮಾರಿಗೆ ಬೀಗ ಒಡೆಯಲು ಮುಂದಾಗಿದ್ದಾರೆ. 
ಶಬ್ಧ ಕೇಳಿಸಿಕೊಂಡ ರೂಪಾ ಅವರು ಕೆಳಗೆ ಬಂದಿದ್ದು, ಬಾಗಿಲು ಒಡೆಯುತ್ತಿದ್ದುದ್ದನ್ನು ಕಂಡು ಜೋರಾಗಿ ಚೀರಾಡಿದ್ದಾರೆ. ಅದನ್ನು ಕೇಳಿ ಪತಿ ದೇವರಾಜ್ ಅವರು ಕೆಳಗೆ ಬಂದಿದ್ದು, ಇದರಿಂದ ಹೆದರಿದ ದುಷ್ಕರ್ಮಿಗಳು ಸ್ಥಳದಿಂದ ಕಾಲ್ಕಿತ್ತಿದ್ದಾರೆ. 
ಘಟನೆ ಕೃತ್ಯ ಸ್ಥಳೀಯ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಸಿಸಿಟಿವಿ ದೃಶ್ಯಾವಳಿಗಳನ್ನು ವಶಕ್ಕೆ ಪಡೆದುಕೊಂಡಿರುವ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com