ನಮ್ಮ ಮೆಟ್ರೋ ನಿಲ್ದಾಣದಲ್ಲಿ ನಾಪತ್ತೆಯಾಗಿದ್ದ ಮಗು ಕೊನೆಗೂ ತಾಯಿಯ ಮಡಿಲಿಗೆ..!

ನ.1ರಂದು ಮಧ್ಯಾಹ್ನ ಸುಮಾರು 12.30ಕ್ಕೆ ಮೆಜೆಸ್ಟಿಕ್ ನಿಲ್ದಾಣದಲ್ಲಿ 6 ವರ್ಷದ ಹೆಣ್ಣು ಮಗು, ತಾಯಿಯಿಂದ ಬೇರ್ಪಟ್ಟಿದ್ದಳು. ಪ್ರಯಾಣಿಕರೊಬ್ಬರು ಮಗುವನ್ನು ಗುರುತಿಸಿ ಭದ್ರತಾ ಸಿಬ್ಬಂದಿಗೆ ಹಸ್ತಾಂತರಿಸಿದ್ದರು.
representative image
ಮಗು (ಸಾಂಕೇತಿಕ ಚಿತ್ರ)online desk
Updated on

ಬೆಂಗಳೂರು: ಬೆಂಗಳೂರಿನ ಕೆಂಪೇಗೌಡ ಮೆಟ್ರೊ ನಿಲ್ದಾಣದಲ್ಲಿ ತಾಯಿಯಿಂದ ತಪ್ಪಿ ಹೋದ 6 ವರ್ಷದ ಮಗುವನ್ನು ಸುರಕ್ಷಿತವಾಗಿ ಪತ್ತೆ ತಾಯಿಯ ಮಡಿಲಿಗೆ ಸೇರಿಸುವ ಘಟನೆಯೊಂದು ಶನಿವಾರ ನಡೆದಿದೆ.

ನ.1ರಂದು ಮಧ್ಯಾಹ್ನ ಸುಮಾರು 12.30ಕ್ಕೆ ಮೆಜೆಸ್ಟಿಕ್ ನಿಲ್ದಾಣದಲ್ಲಿ 6 ವರ್ಷದ ಹೆಣ್ಣು ಮಗು, ತಾಯಿಯಿಂದ ಬೇರ್ಪಟ್ಟಿದ್ದಳು. ಪ್ರಯಾಣಿಕರೊಬ್ಬರು ಮಗುವನ್ನು ಗುರುತಿಸಿ ಭದ್ರತಾ ಸಿಬ್ಬಂದಿಗೆ ಹಸ್ತಾಂತರಿಸಿದ್ದರು.

ಸಿಬ್ಬಂದಿ ಮೆಜೆಸ್ಟಿಕ್ ನಿಲ್ದಾಣದಲ್ಲಿಯೇ ಮಗುವನ್ನು ಕೂರಿಸಿ, ಎಲ್ಲಾ ನಿಲ್ದಾಣಗಳ ನಿಯಂತ್ರಕರಿಗೆ ಮಾಹಿತಿ ನೀಡಿದ್ದರು. ಕೂಡಲೇ ಕಾರ್ಯಪ್ರವೃತ್ತರಾದ ನಿಲ್ದಾಣದ ನಿಯಂತ್ರಕರು ತಾಯಿಯನ್ನು ಪತ್ತೆ ಹಚ್ಚಿ, ಮಗುವನ್ನು ಸುರಕ್ಷಿತವಾಗಿ ಒಪ್ಪಿಸಿದ್ದಾರೆ ಎಂದು ಬಿಎಂಆರ್ ಸಿಎಲ್ ಅಧಿಕಾರಿಗಳು ತಿಳಿಸಿದ್ದಾರೆ.

representative image
ಮೈಸೂರು: ಕಿಡ್ನಾಪ್ ಆದ 30 ನಿಮಿಷಗಳಲ್ಲಿಯೇ ಮಗುವನ್ನು ರಕ್ಷಿಸಿದ ರೈಲ್ವೆ ಸುರಕ್ಷತಾ ಪಡೆ! Video

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com