ಬೃಹತ್ ತಡೆಗೋಡೆಯಲ್ಲಿ ಬಿರುಕು: ಶೃಂಗೇರಿಯಲ್ಲೂ ಭೂಕುಸಿತದ ಆತಂಕ; ಅಂಗಡಿ, ಮನೆ ಖಾಲಿ ಮಾಡಲು ಸೂಚನೆ

ಬೃಹತ್ ತಡೆಗೋಡೆಯಲ್ಲಿನ ಬಿರುಕು ಕ್ಷಣ ಕ್ಷಣಕ್ಕೂ ಹೆಚ್ಚುತ್ತಿದ್ದು, ಅದರ ಕೆಳಭಾಗದಲ್ಲಿರುವ ಮನೆಗಳನ್ನು ಮತ್ತು 18ಕ್ಕೂ ಹೆಚ್ಚು ಅಂಗಡಿಗಳನ್ನು ಖಾಲಿ ಮಾಡುವಂತೆ ಅಧಿಕಾರಿಗಳು ಸೂಚನೆ ನೀಡಿದ್ದಾರೆ.
Major cracks in retaining wall spark landslide fears in Sringeri
ಬೃಹತ್ ತಡೆಗೋಡೆಯಲ್ಲಿ ಬಿರುಕು
Updated on

ಚಿಕ್ಕಮಗಳೂರು: ಚಿಕ್ಕಮಗಳೂರು ಜಿಲ್ಲೆಯ ಶೃಂಗೇರಿ ತಾಲೂಕು ಕಚೇರಿಯ ಮುಂಭಾಗದಲ್ಲಿ ನಿರ್ಮಿಸಲಾಗಿರುವ ಬೃಹತ್​ ತಡೆಗೋಡೆಯಲ್ಲಿ ಬಿರುಕು ಕಾಣಿಸಿಕೊಂಡಿದ್ದು, ಧಾರಾಕಾರ ಮಳೆಗೆ ತಡೆಗೋಡೆ ಸಂಪೂರ್ಣ ಕುಸಿದು ಬೀಳುವ ಆತಂಕ ಎದುರಾಗಿದೆ.

ಬೃಹತ್ ತಡೆಗೋಡೆಯಲ್ಲಿನ ಬಿರುಕು ಕ್ಷಣ ಕ್ಷಣಕ್ಕೂ ಹೆಚ್ಚುತ್ತಿದ್ದು, ಅದರ ಕೆಳಭಾಗದಲ್ಲಿರುವ ಮನೆಗಳನ್ನು ಮತ್ತು 18ಕ್ಕೂ ಹೆಚ್ಚು ಅಂಗಡಿಗಳನ್ನು ಖಾಲಿ ಮಾಡುವಂತೆ ಅಧಿಕಾರಿಗಳು ಸೂಚನೆ ನೀಡಿದ್ದಾರೆ.

ಸುಮಾರು 50 ಅಡಿ ಎತ್ತರ ಹಾಗೂ 120 ಅಡಿ ಅಗಲವಿರುವ ಈ ಬೃಹತ್ ತಡೆಗೋಡೆಯಲ್ಲಿನ ಬಿರುಕು ಕಾಣಿಸಿಕೊಂಡಿದ್ದು, ಪ್ರಸ್ತುತ ಮಳೆಗಾಲವಾಗಿರುವುದರಿಂದ ಮಳೆ ಮತ್ತಷ್ಟು ಹೆಚ್ಚಾದರೆ ತಡೆಗೋಡೆ ಸಂಪೂರ್ಣವಾಗಿ ಕುಸಿದು ಬೀಳುವ ಅಪಾಯವಿದೆ.

ಒಂದು ವೇಳೆ ತಡೆಗೋಡೆ ಕುಸಿದರೆ ಕೆಳಗಿರುವ ಮನೆ ಹಾಗೂ ಅಂಗಡಿಗಳು ನೇರವಾಗಿ ಭದ್ರಾ ನದಿ ಪಾಲಾಗುವ ಆತಂಕ ಇದೆ. ಇದು ಶೃಂಗೇರಿ ಶಾರದಾ ಮಠಕ್ಕೆ ತೆರಳುವ ಪ್ರಮುಖ ಮಾರ್ಗದಲ್ಲೇ ಇರುವುದರಿಂದ ನಿರಂತರ ಸಾರ್ವಜನಿಕ ಸಂಚಾರವೂ ಇದೆ.

Major cracks in retaining wall spark landslide fears in Sringeri
Mangaluru-Madikeri Highway: ಮತ್ತೊಂದು ತಡೆಗೋಡೆಯಲ್ಲಿ ಬಿರುಕು; ಸ್ಥಳೀಯರಲ್ಲಿ ಆತಂಕ!

2024ರ ಮಳೆಗಾಲದಲ್ಲಿ ಕುಸಿತ ಸಂಭಿಸಿದ್ದ ಇದೇ ಜಾಗದಲ್ಲಿ, ಸುಮಾರು 2 ಕೋಟಿ ರೂ. ವೆಚ್ಚದಲ್ಲಿ ಈ ಹೊಸ ತಡೆಗೋಡೆಯನ್ನು ನಿರ್ಮಿಸಲಾಗಿತ್ತು. ಆದರೆ, ಕಾಮಗಾರಿ ಪೂರ್ಣಗೊಂಡು ಕೇವಲ ಕೆಲವೇ ತಿಂಗಳು ಕಳೆಯುವುದರೊಳಗಾಗಿ ತಡೆಗೋಡೆಯಲ್ಲಿ ಬಿರುಕು ಬಿಟ್ಟಿದೆ. ಗೋಡೆಯ ಒಳಗೆ ಕೇವಲ ಮಣ್ಣು ತುಂಬಿ ಕಳಪೆ ಕಾಮಗಾರಿ ನಡೆಸಿರುವುದೇ ಇದಕ್ಕೆ ಕಾರಣ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇನ್ನು ಜಿಲ್ಲಾಡಳಿತ ಮಾತ್ರ ಇದುವರೆಗೆ ಯಾವುದೇ ಮುಂಜಾಗ್ರತಾ ಕ್ರಮಕೈಗೊಳ್ಳದಿರುವುದು ಸಾರ್ವಜನಿಕರ ಕೆಂಗಣ್ಣಿಗೆ ಗುರಿಯಾಗಿದೆ.

ಇನ್ನು ಈ ಬಗ್ಗೆ ಪ್ರತಿಕ್ರಿಯಿಸಿದ ತಹಶೀಲ್ದಾರ್​ ಅನುಪ್ ಅವರು, ತಡೆಗೋಡೆಯಲ್ಲಿ ಬಿರುಕು ಕಾಣಿಸಿಕೊಂಡಿದೆ. ಕೆಳಭಾಗದಲ್ಲಿರುವ ಅಂಗಡಿಗಳು ಮತ್ತು ಮನೆಗಳನ್ನ ಖಾಲಿ ಮಾಡಲು ಸೂಚನೆ ನೀಡಿದ್ದೇವೆ. ತಾಲೂಕು ಆಡಳಿತದಿಂದ ಕಾಳಜಿ ಕೇಂದ್ರ ತರೆಯುತ್ತೇವೆ. ಆ ಮೂಲಕ ಮುಂಜಾಗ್ರತಾ ಕ್ರಮಕೈಗೊಳ್ಳಲು ಸೂಚನೆ ನೀಡಿದ್ದೇವೆ. ಇನ್ನು ತಜ್ಞರ ತಂಡ ಬೆಂಗಳೂರಿನಿಂದ ಶೃಂಗೇರಿಗೆ ಬರುತ್ತಿದ್ದು, ಅವರ ಅಭಿಪ್ರಾಯ ಪಡೆದು ಮುಂದಿನ ಕ್ರಮಕೈಗೊಳ್ಳುವುದಾಗಿ ಹೇಳಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com