ಯಲಹಂಕದಲ್ಲಿ ಭೀಕರ ಅಪಘಾತ, ಟ್ಯಾಂಕರ್ ಢಿಕ್ಕಿ,: ಶಾಲೆಗೆ ಮೊಮ್ಮಕ್ಕಳ ಬಿಡಲು ಹೋಗಿದ್ದ ವೃದ್ಧ ದಾರುಣ ಸಾವು! Video

ವೆಂಕಣ್ಣ ಅವರು ಮೊಮ್ಮಕ್ಕಳನ್ನು ಶಾಲೆಗೆ ಬಿಡಲು ದ್ವಿಚಕ್ರ ವಾಹನದಲ್ಲಿ ಶುಕ್ರವಾರ ಬೆಳಿಗ್ಗೆ ಹೋಗುತ್ತಿದ್ದರು. ಈ ವೇಳೆ ದುರ್ಘಟನೆ ನಡೆದಿದೆ.
elderly man was fatally struck by a tanker hits him in Yelahanka
ವೃದ್ಧನ ಮೇಲೆ ಹರಿದ ನೀರಿನ ಟ್ಯಾಂಕರ್
Updated on

ಬೆಂಗಳೂರು: ಯಲಹಂಕ ನ್ಯೂಟೌನ್‌ನ ಹೊಯ್ಸಳ ಗ್ರೌಂಡ್‌ ರಸ್ತೆಯಲ್ಲಿ ಗುರುವಾರ ಬೆಳಿಗ್ಗೆ ನೀರಿನ ಟ್ಯಾಂಕರ್ ಸಾಗಿಸುವ ವಾಹನ ಹಾಗೂ ದ್ವಿಚಕ್ರ ವಾಹನದ ನಡುವೆ ಸಂಭವಿಸಿದ ಅಪಘಾತದಲ್ಲಿ ವೃದ್ಧರೊಬ್ಬರು ಮೃತಪಟ್ಟಿದ್ದಾರೆ.

ಮೃತರನ್ನು ನ್ಯಾಯಾಂಗ ಬಡಾವಣೆ ನಿವಾಸಿ ವೆಂಕಣ್ಣ (70) ಎಂದು ಗುರುತಿಸಲಾಗಿದ್ದು, ವೆಂಕಣ್ಣ ಅವರ ಮೊಮ್ಮಕ್ಕಳಾದ ಶ್ರಾವಣಿ (12) ಹಾಗೂ ಚರಿತ್‌ (5) ಕೂದಲೆಳೆ ಅಂತರದಲ್ಲಿ ಪ್ರಾಣಾಯದಿಂದ ಪಾರಾಗಿದ್ದಾರೆ.

ಮೂಲಗಳ ಪ್ರಕಾರ ವೆಂಕಣ್ಣ ಅವರು ಮೊಮ್ಮಕ್ಕಳನ್ನು ಶಾಲೆಗೆ ಬಿಡಲು ದ್ವಿಚಕ್ರ ವಾಹನದಲ್ಲಿ ಶುಕ್ರವಾರ ಬೆಳಿಗ್ಗೆ ಹೋಗುತ್ತಿದ್ದರು. ಈ ವೇಳೆ ದುರ್ಘಟನೆ ನಡೆದಿದೆ.

ರಸ್ತೆ ತಿರುವಿನಲ್ಲಿ ವೆಂಕಣ್ಣ ಮತ್ತು ಅವರ ಮೊಮ್ಮಕ್ಕಳು ಸಾಗುತ್ತಿದ್ದ ದ್ವಿಚಕ್ರವಾಹನ ಟ್ಯಾಂಕರ್ ಹಿಂದಿಕ್ಕಿ ಮುಂದಕ್ಕೆ ಸಾಗಲು ಯತ್ನಿಸಿದಾಗ ಹಿಂದಿನಿಂದ ಬಂದ ನೀರಿನ ಟ್ಯಾಂಕರ್ ದ್ವಿಚಕ್ರವಾಹನಕ್ಕೆ ಢಿಕ್ಕಿಯಾಗಿದೆ.

elderly man was fatally struck by a tanker hits him in Yelahanka
ಕರ್ನಾಟಕದಲ್ಲಿ ಮತ್ತೆ ನೈತಿಕ ಪೊಲೀಸ್ ಗಿರಿ: ವ್ಯಕ್ತಿ ಜೊತೆ ಕುಳಿತಿದ್ದ ಮುಸ್ಲಿಂ ಯುವತಿಗೆ ಬುರ್ಖಾ ತೆಗೆಯುವಂತೆ ಒತ್ತಾಯ!

ಈ ವೇಳೆ ವೆಂಕಣ್ಣ ಮತ್ತು ಅವರ ಮೊಮ್ಮಕ್ಕಳು ನಿಯಂತ್ರಣ ತಪ್ಪಿ ಕೆಳಗೆ ಬಿದ್ದಿದ್ದಾರೆ. ಅದೇ ಸಂದರ್ಭದಲ್ಲಿ ವೆಂಕಣ್ಣ ಅವರ ಮೇಲೆ ನೀರಿನ ಟ್ಯಾಂಕರ್ ಹರಿದಿದೆ. ಘಟನೆಯಲ್ಲಿ ತೀವ್ರವಾಗಿ ಗಾಯಗೊಂಡ ವೆಂಕಣ್ಣ ಅವರನ್ನು ಆಸ್ಪತ್ರೆಗೆ ದಾಖಲಿಸಲಾಯಿತು.

ಅಲ್ಲಿ ಅವರು ಮೃತಪಟ್ಟಿದ್ದಾರೆ. ಮೊಮ್ಮಕ್ಕಳಿಗೆ ಸಣ್ಣಪುಟ್ಟ ಗಾಯಗಳಾಗಿವೆ. ವಾಹನದಲ್ಲಿದ್ದ ವೆಂಕಣ್ಣ ಅವರ ಇಬ್ಬರು ಮೊಮ್ಮಕ್ಕಳು ಪವಾಡ ಸದೃಶ ಪರಾಗಿದ್ದಾರೆ ಎಂದು ಪೊಲೀಸರು ತಿಳಿಸಿದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

X
Kannada Prabha
www.kannadaprabha.com