LPG Cylinder Shortage: ಯಲಹಂದಲ್ಲಿ ಗ್ಯಾಸ್ ಆಧಾರಿತ ವಿದ್ಯುತ್ ಘಟಕ ಬಂದ್, ಆದರೂ ವಿದ್ಯುತ್ ಸರಬರಾಜಿಗೆ ತೊಂದರೆ ಇಲ್ಲ..!

ಗುರುವಾರ ಬೆಳಿಗ್ಗೆ 10.30ರವರೆಗೆ ರಾಜ್ಯದಲ್ಲಿ ಕಳೆದ ಎರಡು ವರ್ಷಗಳಲ್ಲಿ ಅತಿ ಹೆಚ್ಚು 18,800 ಮೆಗಾವಾಟ್ ವಿದ್ಯುತ್ ಬೇಡಿಕೆ ದಾಖಲಾಗಿದೆ. ಕಳೆದ ವರ್ಷ ಮಾರ್ಚ್ 7 ಮತ್ತು 19ರಂದು 18,395 ಮೆಗಾವಾಟ್ ಬೇಡಿಕೆ ದಾಖಲಾಗಿತ್ತು.
File photo
ವಿದ್ಯುತ್ ಪೂರೈಕೆ (ಸಂಗ್ರಹ ಚಿತ್ರ)online desk
Updated on

ಬೆಂಗಳೂರು: ಯಲಹಂಕದಲ್ಲಿರುವ 350 ಮೆಗಾವಾಟ್ ಗ್ಯಾಸd ಆಧಾರಿತ ವಿದ್ಯುತ್ ಸ್ಥಾವರ ಬಂದ್ ಆದರೂ ಬೇಸಿಗೆ ವೇಳೆಯಲ್ಲಿ ರಾಜ್ಯದ ವಿದ್ಯುತ್ ಬೇಡಿಕೆಯನ್ನು ಪೂರೈಸುವಲ್ಲಿ ಯಾವುದೇ ಸಮಸ್ಯೆ ಉಂಟಾಗುವುದಿಲ್ಲ ಎಂದು ರಾಜ್ಯ ಇಂಧನ ಇಲಾಖೆ ಗುರುವಾರ ತಿಳಿಸಿದೆ.

ಗುರುವಾರ ಬೆಳಿಗ್ಗೆ 10.30ರವರೆಗೆ ರಾಜ್ಯದಲ್ಲಿ ಕಳೆದ ಎರಡು ವರ್ಷಗಳಲ್ಲಿ ಅತಿ ಹೆಚ್ಚು 18,800 ಮೆಗಾವಾಟ್ ವಿದ್ಯುತ್ ಬೇಡಿಕೆ ದಾಖಲಾಗಿದೆ. ಕಳೆದ ವರ್ಷ ಮಾರ್ಚ್ 7 ಮತ್ತು 19ರಂದು 18,395 ಮೆಗಾವಾಟ್ ಬೇಡಿಕೆ ದಾಖಲಾಗಿತ್ತು.

ಪಶ್ಚಿಮ ಏಷ್ಯಾದ ಸಂಘರ್ಷದ ಹಿನ್ನೆಲೆಯಲ್ಲಿ Gas Authority of India Limited (GAIL) ಯಲಹಂಕ ಗ್ಯಾಸ್ ವಿದ್ಯುತ್ ಸ್ಥಾವರಕ್ಕೆ ಗ್ಯಾಸ್ ಸರಬರಾಜು ನಿಲ್ಲಿಸಿದೆ ಎಂದು ಕರ್ನಾಟಕ ಪವರ್ ಕಾರ್ಪೊರೇಷನ್ ಲಿಮಿಟೆಡ್ (KPCL) ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಈ ಸಂದರ್ಭದಲ್ಲಿ ಇತರ ಕ್ಷೇತ್ರಗಳಿಗೆ ಗ್ಯಾಸಿನ ಬೇಡಿಕೆ ಹೆಚ್ಚಿರುವುದರಿಂದ ಯಲಹಂಕ ವಿದ್ಯುತ್ ಸ್ಥಾವರವನ್ನು ತಾತ್ಕಾಲಿಕವಾಗಿ ಬಂದ್ ಮಾಡಲಾಗಿದೆ. ಆದರೆ, ಇದರಿಂದ ವಿದ್ಯುತ್ ಉತ್ಪಾದನೆಗೆ ದೊಡ್ಡ ಮಟ್ಟದ ಪರಿಣಾಮ ಉಂಟಾಗುವುದಿಲ್ಲ ಎಂದು ಅಧಿಕಾರಿಗಳು ಹೇಳಿದ್ದಾರೆ.

File photo
ವಿದ್ಯುತ್ ದರ ಏರಿಕೆ: ಮುಂದಿನ ತಿಂಗಳಿನಿಂದ ಒಂದೇ ಬಿಲ್, ಸಮಸ್ಯೆ ಪರಿಹಾರ- ಸಿಎಂ ಸಿದ್ದರಾಮಯ್ಯ 

ರಾಜ್ಯದಲ್ಲಿ ಸೌರಶಕ್ತಿ ಉತ್ಪಾದನೆಯೂ ಹೆಚ್ಚಾಗಿದೆ. ಜೊತೆಗೆ ಇತರ ಮೂಲಗಳಿಂದಲೂ ವಿದ್ಯುತ್ ಪೂರೈಕೆ ಲಭ್ಯವಿರುವುದರಿಂದ ಬೇಸಿಗೆ ಸಮಯದಲ್ಲಿ ಹೆಚ್ಚುತ್ತಿರುವ ಬೇಡಿಕೆಯನ್ನು ಪೂರೈಸಲು ಸಾಧ್ಯವಾಗುತ್ತದೆ ಎಂದು ತಿಳಿಸಿದ್ದಾರೆ.

ಪ್ರಸ್ತುತ ರಾಜ್ಯದ ಒಟ್ಟು ವಿದ್ಯುತ್ ಉತ್ಪಾದನಾ ಸಾಮರ್ಥ್ಯ ಸುಮಾರು 36,000 ರಿಂದ 37,000 ಮೆಗಾವಾಟ್ ಇದ್ದು, ಅದರಲ್ಲಿ ಸುಮಾರು ಶೇ.56ರಷ್ಟು ವಿದ್ಯುತ್ ನವೀಕರಿಸಬಹುದಾದ ಇಂಧನ ಮೂಲಗಳಿಂದ ಬರುತ್ತಿದೆ ಎಂದು ತಿಳಿದುಬಂದಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com