SSLC ಫಲಿತಾಂಶ ಪ್ರಕಟ: ಬಸ್ ಕಂಡಕ್ಟರ್ ಪುತ್ರ ರಾಜ್ಯಕ್ಕೆ ಟಾಪರ್; ತನ್ನ ಸಾಧನೆ ಬಗ್ಗೆ ಪ್ರೀತಮ್ ಹೇಳಿದ್ದೇನು?ಬಡ ಕುಟುಂಬದಿಂದ ಬಂದಿರುವ ಪ್ರೀತಮ್, ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ 625ಕ್ಕೆ 625 ಅಂಕಗಳಿಸಿದ ಏಳು ವಿದ್ಯಾರ್ಥಿಗಳಲ್ಲಿ ಒಬ್ಬರಾಗಿದ್ದಾರೆ.
ನನ್ನನ್ನು ಬೇಕಾದರೆ ನಿಂದಿಸಿ, ಕಲಬುರಗಿ ಮಕ್ಕಳನ್ನು ಅಪಹಾಸ್ಯ ಮಾಡಬೇಡಿ: ಪ್ರಿಯಾಂಕ್ ಖರ್ಗೆಪ್ರತಿ ಬಾರಿಯೂ ಕಲಬುರಗಿ ಜಿಲ್ಲೆಯ ಮಕ್ಕಳನ್ನು ಅವಮಾನಿಸುತ್ತಿರುವ ಬಿಜೆಪಿ ರಾಜಕೀಯ ದಿವಾಳಿತನದೊಂದಿಗೆ ನೈತಿಕ ಪ್ರಜ್ಞೆಯೂ ದಿವಾಳಿಯಾಗಿರುವುದನ್ನು ನಿರೂಪಿಸುತ್ತಿದೆ ಎಂದು ವಾಗ್ದಾಳಿ ನಡೆಸಿದ್ದಾರೆ.
Video: ಬೆಂಗಳೂರಿನಲ್ಲಿ ಭೀಕರ ಅಗ್ನಿ ದುರಂತ; 10 ಕಿ.ಮೀ ವರೆಗೂ ಗೋಚರಿಸಿದ ದಟ್ಟ ಹೊಗೆ!ಇಂದು ಸಂಜೆ ಕಾಡ ಅಗ್ರಹಾರ-ರಾಂಪುರ ರಸ್ತೆಯಲ್ಲಿರುವ ಪ್ರೆಸ್ಟೀಜ್ ಅಗಸ್ಟಾ ಗೋಲ್ಡ್ ಗ್ರಾಮದ ಹಿಂದೆ ಭಾರಿ ಬೆಂಕಿ ಕಾಣಿಸಿಕೊಂಡಿದೆ. ಪ್ಲಾಸ್ಟಿಕ್ ಮರುಬಳಕೆ ಗೋದಾಮಿನಿಂದ ಬೆಂಕಿ ಹೊತ್ತಿಕೊಂಡಿರಬಹುದು ಎಂದು ಶಂಕಿಸಲಾಗಿದೆ.
ಬೆಟ್ಟಿಂಗ್ ಪ್ರಕರಣಕ್ಕೆ ಹೈಕೋರ್ಟ್ ತಡೆ: ಗೃಹ ಸಚಿವ ಪರಮೇಶ್ವರಗೆ ಬಿಗ್ ರಿಲೀಫ್!ಪರಮೇಶ್ವರ ಅವರ ವಿರುದ್ಧ ಎಫ್ಐಆರ್ ದಾಖಲಿಸಿ ತನಿಖೆ ನಡೆಸುವಂತೆ ಬೆಂಗಳೂರಿನ 42ನೇ ಎಸಿಜೆಎಂ ನ್ಯಾಯಾಲಯ ಮಂಗಳವಾರ ಆದೇಶ ಹೊರಡಿಸಿತ್ತು. ಇದನ್ನು ಪ್ರಶ್ನಿಸಿ ಪರಮೇಶ್ವರ ಅವರು ಹೈಕೋರ್ಟ್ ಗೆ ಅರ್ಜಿ ಸಲ್ಲಿಸಿದ್ದರು.
'ಕರ್ನಾಟಕದಲ್ಲಿ ಹೂಡಿಕೆ ಮಾಡಲು ಹೆಚ್ಚಿನ ಸೌಲಭ್ಯ ಕೊಡಿ': ಸರ್ಕಾರಕ್ಕೆ 13 ಕಂಪೆನಿಗಳ ಬೇಡಿಕೆಮೂಲಗಳ ಪ್ರಕಾರ, ಸರ್ಕಾರದ ಮೇಲೆ ಹೆಚ್ಚಿನ ಹೊರೆಯಾಗದಂತೆ ಕಂಪೆನಿ ಮತ್ತು ಸರ್ಕಾರಕ್ಕೆ ಲಾಭವಾಗುವ (win-win) ಪರಿಹಾರ ಕಂಡುಹಿಡಿಯಲು ಪ್ರತಿಯೊಂದು ಕಂಪನಿಯೊಂದಿಗೆ ಅಧಿಕಾರಿಗಳು ಮಾತುಕತೆ ನಡೆಸಬೇಕು ಎಂದು ಉಪಸಮಿತಿ ಸೂಚಿಸಿದೆ.
SSLC Results: ಈ ಬಾರಿ ಮೂರನೇ ಪರೀಕ್ಷೆ ಇಲ್ಲ; ಮರುಮೌಲ್ಯಮಾಪನಕ್ಕೆ ಅರ್ಜಿ ಸಲ್ಲಿಕೆ ವಿವರ ಹೀಗಿದೆ...ಎಸ್ಎಸ್ಎಲ್ಸಿ ಪರೀಕ್ಷೆ ಬರೆದ 7,70,209 ವಿದ್ಯಾರ್ಥಿಗಳ ಪೈಕಿ 7,24,794 ಮಕ್ಕಳು ತೇರ್ಗಡೆಯಾಗಿದ್ದಾರೆ.
ಬೆಂಗಳೂರು: ಸಾಯಿ ಲೇಔಟ್ನಲ್ಲಿ ಪ್ರವಾಹ; ಮುಂಜಾಗ್ರತಾ ಕ್ರಮ ಪರಿಶೀಲಿಸಿದ ಮಹೇಶ್ವರ್ ರಾವ್ರೈಲ್ವೆ ಹಳಿಯ ಬಳಿ ಮಳೆನೀರು ಚರಂಡಿಯಲ್ಲಿ (ಎಸ್ಡಬ್ಲ್ಯೂಡಿ) ಹೆಚ್ಚುವರಿ ವೆಂಟ್ಗಳನ್ನು ಅಳವಡಿಸುವ ಕೆಲಸ ಪ್ರಗತಿಯಲ್ಲಿದ್ದು, ಇದರಿಂದಾಗಿ ನೀರು ಸರಾಗವಾಗಿ ಹರಿಯುತ್ತದೆ. ಬಾಕ್ಸ್ ಪುಶಿಂಗ್ ಕೆಲಸಕ್ಕೆ ರೈಲ್ವೆಯಿಂದ ಅನುಮತಿ ಪಡೆಯಲಾಗಿದೆ.
ತುಮಕೂರಿನಲ್ಲಿ 32 ನವಿಲುಗಳ ಮಾರಣಹೋಮ; ಸಾವಿಗೆ ಕಾರಣವೇನು..?ಸದ್ಯ ಮೃತ ನವಿಲುಗಳ ಮರಣೋತ್ತರ ಪರೀಕ್ಷೆಗಾಗಿ ಅಂಗಾಂಶಗಳ ಮಾದರಿಯನ್ನು ಪ್ರಯೋಗಾಲಯಕ್ಕೆ ರವಾನೆ ಮಾಡಲಾಗಿದ್ದು, ವರದಿ ಬಂದ ಬಳಿಕ ಸಾವಿನ ಕಾರಣ ಪತ್ತೆಯಾಗಲಿದೆ.
ಸಂಕೇಶ್ವರ: ನದಿಯಲ್ಲಿ ಮುಳುಗುತ್ತಿದ್ದ ಮಗನನ್ನು ರಕ್ಷಿಸಲು ಹೋದ ತಾಯಿ ಸಾವು; ಪುತ್ರನಿಗಾಗಿ ಶೋಧಹಿರಣ್ಯಕೇಶಿ ನದಿ ತೀರದಲ್ಲಿರುವ ಶಂಕರಲಿಂಗ ದೇವಸ್ಥಾನಕ್ಕೆ ತಾಯಿ, ಮಗ ಬಂದಿದ್ದರು. ಬಳಿಕ ಸುಪ್ರೀತ್ ದೇವಸ್ಥಾನದ ಪಕ್ಕದಲ್ಲೇ ಇರುವ ಹಿರಣ್ಯಕೇಶಿ ನದಿಗೆ ಈಜಲು ಹೋಗಿದ್ದ.
ತುಮಕೂರಿನಲ್ಲಿ ಕಾಂಗ್ರೆಸ್ ಭವನ ಟ್ರಸ್ಟ್ಗೆ ಎರಡು ಎಕರೆ ಭೂಮಿ ಅಕ್ರಮ ಮಂಜೂರು: ಸರ್ಕಾರಕ್ಕೆ ಹೈಕೋರ್ಟ್ ನೊಟೀಸ್ತುಮಕೂರು ನಗರದಲ್ಲಿ ಸಾರ್ವಜನಿಕ ಉಪಯೋಗ ಸೇವೆಗೆ ಮೀಸಲಿದ್ದ ಎರಡು ಎಕರೆ ಸರ್ಕಾರಿ ಭೂಮಿಯನ್ನು ಕಾಂಗ್ರೆಸ್ ಭವನ ನಿರ್ಮಾಣಕ್ಕೆ ಅಕ್ರಮವಾಗಿ ಮಾರಾಟ ಮಾಡಲಾಗಿದೆ ಎಂಬ ಆರೋಪ ಕುರಿತು ಪಿಐಎಲ್ ಗೆ ರಾಜ್ಯ ಸರ್ಕಾರಕ್ಕೆ ಮತ್ತು ತುಮಕೂರು ಜಿಲ್ಲಾಧಿಕಾರಿಗೆ ನೋಟಿಸ್ ನೀಡಲು ಆದೇಶಿಸಿದೆ.
2025-26ನೇ ಸಾಲಿನ SSLC ಪರೀಕ್ಷೆ ಫಲಿತಾಂಶ: ಶೇ.91.1 ರಷ್ಟು ತೇರ್ಗಡೆ; ದಕ್ಷಿಣ ಕನ್ನಡ ಜಿಲ್ಲೆ ಫಸ್ಟ್- ಕಲಬುರಗಿ ಲಾಸ್ಟ್!ಮಾರ್ಚ್ 18 ರಿಂದ ಏಪ್ರಿಲ್ 2ರ ವರೆಗೆ ನಡೆದಿದ್ದ ಈ ಪರೀಕ್ಷೆಯಲ್ಲಿ ರಾಜ್ಯಾದ್ಯಂತ ಸುಮಾರು 8 ಲಕ್ಷಕ್ಕೂ ಅಧಿಕ ವಿದ್ಯಾರ್ಥಿಗಳು ಹಾಜರಾಗಿದ್ದರು. ಶಿಕ್ಷಣ ಸಚಿವ ಮಧು ಬಂಗಾರಪ್ಪ ಇಂದು ಎಸ್ ಎಸ್ ಎಲ್ ಸಿ ಫಲಿತಾಂಶ ಬಿಡುಗಡೆ ಮಾಡಿದ್ದಾರೆ.
ಕಾಲೇಜು ಕ್ಯಾಂಪಸ್ ಚುನಾವಣೆಗೆ ಸರ್ಕಾರ ಗ್ರೀನ್ ಸಿಗ್ನಲ್: Lyngdoh ಸಮಿತಿ ಆಧಾರದಲ್ಲಿ ಮಹತ್ವದ ನಿರ್ಧಾರ..!ಲಿಂಗ್ಡೋ ಸಮಿತಿ ವರದಿ ಶಿಫಾರಸುಗಳ ಆಧಾರದಲ್ಲಿ ಚುನಾವಣೆಗಳನ್ನು ಈ ಶೈಕ್ಷಣಿಕ ವರ್ಷದಲ್ಲೇ ನಡೆಸಲು ನಿರ್ಧರಿಸಲಾಗಿದೆ ಎಂದು ರಾಜ್ಯ ಸರ್ಕಾರ ಸ್ಪಷ್ಟಪಡಿಸಿದೆ.
ಬೆಂಗಳೂರು: ಐಫೋನ್ ಫ್ಯಾಕ್ಟರಿ ಶೌಚಾಲಯದಲ್ಲಿ ಮಗುವಿಗೆ ಜನ್ಮ ನೀಡಿದ ಅವಿವಾಹಿತೆ; ಶಿಶುವಿನ ಗಂಟಲು ಸೀಳಿ ಕೊಲೆ!ಅವಿವಾಹಿತೆಯಾಗಿರುವ ರೇಣುಕಾ, ಅವಮಾನ ಮತ್ತು ಕಳಂಕಕ್ಕೆ ಹೆದರಿ ಮಗುವನ್ನು ಕೊಂದಿದ್ದಾಳೆ ಎಂದು ತನಿಖಾಧಿಕಾರಿಗಳು ತಿಳಿಸಿದ್ದಾರೆ.
ಕಲಬುರಗಿಯಲ್ಲಿ ಹೃದಯವಿದ್ರಾವಕ ಘಟನೆ: ಮಗನ ಚಿನ್ನದ ಪದಕ ಸಂಭ್ರಮ ನೋಡಲು ಬರುವಾಗಲೇ ಅಪಘಾತದಲ್ಲಿ ತಂದೆ ದುರಂತ ಅಂತ್ಯ..!ತಮ್ಮ ಮಗ ದಿವ್ಯಾಂಶು ಸಕ್ಸೇನಾ ಅವರ ಸಾಧನೆಯನ್ನು ಕಣ್ಣುಂಬಿಕೊಳ್ಳಲು ಬಹಳ ಉತ್ಸಾಹದಿಂದ ಬಂದಿದ್ದರು. ದಿವ್ಯಾಂಶು ಅವರು ಎರಡು ಚಿನ್ನದ ಪದಕಗಳನ್ನು ಗಳಿಸಿದ್ದು, ಕುಟುಂಬದಲ್ಲಿ ಸಂಭ್ರಮದ ವಾತಾವರಣ ನಿರ್ಮಾಣವಾಗಿತ್ತು.
ಒಂದು ಗಂಟೆ ಆಗಸದಲ್ಲಿ ಗಿರಕಿ: ಹುಬ್ಬಳ್ಳಿಯಲ್ಲಿ ಮತ್ತೊಮ್ಮೆ ಪ್ರಯಾಣಿಕರ ಎದೆ ನಡುಗಿಸಿದ 'ಫ್ಲೈ 91' ವಿಮಾನ; 3 ದಿನದಲ್ಲಿ ಎರಡನೇ ಘಟನೆ..!Fly91 ಸಂಸ್ಥೆಯ ಬೆಂಗಳೂರು–ಹುಬ್ಬಳ್ಳಿ ವಿಮಾನವು ಹವಾಮಾನ ವೈಪರೀತ್ಯದಿಂದಾಗಿ ಸುಮಾರು ಒಂದು ಗಂಟೆಗೂ ಹೆಚ್ಚು ಕಾಲ ಆಕಾಶದಲ್ಲೇ ಗಿರಕಿ ಹೊಡೆದಿದ್ದು, ಬಳಿಕ ಸುರಕ್ಷಿತವಾಗಿ ಲ್ಯಾಂಡ್ ಆಗಿದೆ.
ದೇಶಡಿಲಿಮಿಟೇಶನ್ ಮಸೂದೆ ಅಂಗೀಕಾರವಾದ್ರೆ ದೇಶದಲ್ಲಿ ಉಳಿದಿರುವ ಅಲ್ಪ-ಸ್ವಲ್ಪ ಪ್ರಜಾಪ್ರಭುತ್ವ ಸಂಪೂರ್ಣ ನಾಶ: ಕಪಿಲ್ ಸಿಬಲ್