ನಾವೇನು ನೋಟುಬುಕ್ಕುಗಳಾ?

ಅಂದು ಬಸ್ ಸ್ಟ್ರೈಕ್. ಸ್ವಂತ ಗಾಡಿಯಿಲ್ಲದವರು ಆಫೀಸಿನಿಂದ ಮನೆಗೆ, ಮನೆಯಿಂದ ಆಫೀಸಿಗೆ ಹೋಗಲು ಆಟೋವನ್ನೇ ಅವಲಂಬಿಸಬೇಕಾದ ಸ್ಥಿತಿ. ಆ ಆಟೋ ಚಾಲಕರು ದುಪ್ಪಟ್ಟು ಹಣ ಕೇಳಿ 'ಹಗಲು' ದರೋಡೆ ನಡೆಸುತ್ತಿದ್ದರು. ಇದನ್ನು ಸಹಿಸಲಾಗದೆ ಒಬ್ಬ ಆಟೋ ಚಾಲಕನಿಗೆ ಕೇಳಿಯೇಬಿಟ್ಟೆ; 'ಏನ್ ಸರ್, ಇದ್ಯಾವ ನ್ಯಾಯ? ಒಂದಕ್ಕೆ ಎರಡರಷ್ಟು ಕೇಳೋದಾ?'. ಅವನು ಹೇಳಿದ, 'ನಿಮ್ಗೇನ್ ಕಮ್ಮಿ ಸಾರ್, ಸಾಫ್ಟ್ವೇರ್ ಎಂಜಿನಿಯರ್ಸು. ಇವತ್ತು ದುಡ್ಡು ಮಾಡೋದಿಕ್ಕೆ ನಮ್ಗೊಂದು ಚಾನ್ಸು'.
ನಾನು ಜಿಮ್ಗೆ ಹೋಗುತ್ತಿದ್ದ ಕಡೆ ಹುಡುಗನೊಬ್ಬ ಪರಿಚಿತನಾದ. ಕಷ್ಟ ಸುಖಗಳನ್ನು ಇಬ್ಬರೂ ಆಗಾಗ್ಗೆ ಹಂಚಿಕೊಳ್ಳುತ್ತಿದ್ದರಿಂದ ಸ್ವಲ್ಪ ಹತ್ತಿರವೂ ಆಗಿದ್ದ. ಒಂದಿನ ಅದೇನೋ ಸಮಸ್ಯೆ ಹೇಳಿ, 5 ಸಾವಿರ ರುಪಾಯಿಗಳನ್ನು ನನ್ನ ಹತ್ತಿರ ಸಾಲ ತೆಗೆದುಕೊಂಡ. ಒಂದು ತಿಂಗಳಲ್ಲಿ ಕೊಡ್ತೀನಿ ಅಂತ ಹೇಳಿದ ಆಸಾಮಿ, ಆಮೇಲೆ ಆ ವಿಷಯದ ಬಗ್ಗೆ ಮಾತೇ ಇಲ್ಲ. ಕೊನೆಗೆ ದುಡ್ದು ಬೇಕೇ ಬೇಕೂಂತ ತುಂಬಾ ಹೇಳಿದ ನಂತರ ಹಾಗೂ ಹೀಗೂ ಮಾಡಿ 4 ಸಾವಿರ ಕೊಟ್ಟು ಇನ್ನುಳಿದದ್ದನ್ನು ವಾರದ ನಂತರ ಕೊಡುವುದಾಗಿ ಹೇಳಿದ. ವಾರದ ನಂತರ ಅವನ ಹತ್ತಿರ ದುಡ್ಡು ಕೇಳಿದಾಗ ಆತನಂದ, 'ಸಾರ್, ನೀವು ಸಾಫ್ಟ್ವೇರ್ ಎಂಜಿನಿಯರ್ಸ್. ಅಷ್ಟೊಂದು ದುಡೀತೀರಾ, ಒಂದು ಸಾವಿರ ಅಲ್ವಾ? ಬಿಟ್ಟುಬಿಡಿ ಸಾರ್'.
=
ಅದು ಹೇಗೋ ಕಷ್ಟಪಟ್ಟು ಚೆನ್ನೈನಿಂದ ನಾನು ಮೈಸೂರಿಗೆ ವರ್ಗಾವಣೆ ಮಾಡಿಸಿಕೊಂಡೆ. ತುರ್ತಾಗಿ ಒಂದು ಮನೆ ಹುಡುಕಬೇಕಿತ್ತು. ನಾಲ್ಕೈದು ಕಡೆ 'ಮನೆ ಬಾಡಿಗೆಗೆ' ಅಂತ ಮನೆ ಮುಂದೆ ಬೋರ್ಡ್ ನೇತು ಹಾಕಿಕೊಂಡವರನ್ನು ವಿಚಾರಿಸಲು ಹೋದೆ. ಅವರು 'ಏನ್ ಕೆಲ್ಸ ಮಾಡ್ತೀರಾ?' ಅಂತ ಕೇಳಿದ್ದಕ್ಕೆ ನಾನು 'ಸಾಫ್ಟ್ವೇರ್ ಎಂಜಿನಿಯರ್' ಎಂದ ಕೂಡಲೇ ಅಭೂತಪೂರ್ವ ಸ್ವಾಗತ ಸಿಕ್ಕಿತು. ಮನಸ್ಸಿನೊಳಗೆ ಬೀಗಿದ ನಾನು, ಒಳಗೆ ಹೋಗಿ ಬಾಡಿಗೆ, ಮುಂಗಡ ಹಣ ಕೇಳಿದಾಗ ತಲೆತಿರುಗಿ ಬೀಳುವಂತಾಯಿತು. ಕುರಿ ಕಡಿಯುವ ಮುಂಚೆ ಹಾರ ಹಾಕಿ ಅಲಂಕಾರ ಮಾಡುವ ಆನುಭವ ಗೊತ್ತಾದುದ್ದೇ ಆಗ. ಒಂದಿನ ತಲೆಕೆಟ್ಟು ಒಂದು ಟೀ ಕುಡಿಯೋಣ ಅಂತ ಟೀ ಸ್ಟಾಲ್ಗೆ ಹೋಗಿ ಕೂತೆ. ಊರಿಗೆ ಹೊಸಬರಂತೆ ಕಂಡ ನನ್ನ ಟೀ ಮಾರುವವನು ಸಹಜವಾಗಿಯೇ ವಿಚಾರಿಸಿದ. 'ಟೀ ಯಾಕೆ ಇಷ್ಟು ದುಬಾರಿ?' ಅಂತ ಕೇಳಿದಾಗ ಅವನ ಉತ್ತರ ನನ್ನ ಮುಖಕ್ಕೆ ಹೊಡೆದ ಹಾಗಿತ್ತು. 'ಅಯ್ಯೋ ಮೊದಲೆಲ್ಲ ಇಲ್ಲಿ ಕೇಳೋರೇ ಇರಲಿಲ್ಲ. ಸಾಫ್ಟ್ವೇರ್ ಎಂಜಿನಿಯರ್ಸ್ ಬಂದಮೇಲೆ ಒಂದಕ್ಕೆ ಎರಡು ತಗೊಂಡು ಇಷ್ತು ಜಾಸ್ತಿ ಮಾಡಿದ್ದೀವಿ. ನಿಮ್ಮಿಂದ ಬದುಕೋದೆ ಇಲ್ಲಿ ಕಷ್ಟ' ಅಂತ ಹೇಳಿ ನಾನು ಕೊಟ್ಟ ಹತ್ತು ರುಪಾಯಿಗೆ ಚಿಲ್ಲರೆ ಇಲ್ಲ ಅಂತ ಹೇಳಿ ನುಣುಚಿಕೊಂಡ.
=
ಈ ಮೇಲಿನ ಉದಾಹರಣೆಗಳು ಯಾಕೆ ಕೊಡುತ್ತಿದ್ದೀನಿ ಅಂತ 'ಸಾಫ್ಟ್ವೇರ್ ಎಂಜಿನಿಯರ್ಸ್' ಅಂದಾಗಲೇ ಗೊತ್ತಾಗಿ ೆಹೋಗಿರಬಹುದು. ಉಳಿದವರಿಗೆ ಏನಿದು ಅನ್ನಿಸಬಹುದು. ಹೆಚ್ಚಿನವರಿಗೆ ಸಾಫ್ಟ್ವೇರ್ ಎಂಜಿನಿಯರ್ಸ್ ಅಂದರೆ 'ಹಣದ ಹೂ ಬಿಡುವ ಗಿಡಗಳು' ಎಂಬ ಭಾವ ಇದೆ. ಮೇಲೆ ನೋಡಿದ ಹಾಗೆ ಇನ್ನೂ ಕೆಲವರಿಗೆ ಹಣದುಬ್ಬರ ವಾಗಲೂ ಕಾರಣ ನಾವೇ ಎಂಬ ಅಭಿಪ್ರಾಯವೂ ಇದೆ. ಬೆಳಗ್ಗೆ ನಮ್ಮ ಹತ್ತಿರ ಆದಷ್ಟೂ ಹಣ ಕಸಿದುಕೊಳ್ಳಲು ಹೊಂಚು ಹಾಕುವ ಜನ, ರಾತ್ರಿ ಎಲ್ಲದಕ್ಕೂ ನಾವೇ ಕಾರಣ ಅಂತ ಹೇಳಿಕೊಂಡು ಮಲಗುತ್ತಾರೆ.
ನಮಗೆ ಕೈತುಂಬ ಸಂಬಳ ಬರುವುದೇನೋ ನಿಜ. ಸಂಬಳ ಅಂತ ಬಂದ ಮೇಲೆ ಮನೆ- ಮಠ, ಖರ್ಚು- ವೆಚ್ಚಗಳು ನಮಗೂ ಇರುತ್ತವೆ. ಆರು ಸಾವಿರ ತರುವವನು ಅವನ ಹಾಸಿಗೆ ಇದ್ದಷ್ಟು ಕಾಲು ಚಾಚಿಕೊಂಡರೆ, ಅರವತ್ತು ಸಾವಿರ ಬರುವವನು ಒಂದಿಷ್ಟು ಗೇಣು ಹೊರಲಾಡಿಕೊಳ್ಳಲು ಜಾಗ ಇರುವ ಹಾಗೆ ದೊಡ್ಡ, ಸ್ವಲ್ಪ ಐಷಾರಾಮಿ, ಒಳ್ಳೆಯ ಮೆತ್ತನೆ- ದುಬಾರಿ ಹಾಸಿಗೆ ತಂದುಕೊಳ್ಳುತ್ತಾನೆ. ಆದಾಯ ಜಾಸ್ತಿ ಆದ ಹಾಗೆ ಒಬ್ಬ ಮನುಷ್ಯನು ತನ್ನ ಆಸೆಗಳ ಸೀಮೆಯನ್ನು ಸ್ವಲ್ಪ ಸ್ವಲ್ಪವಾಗಿಯೇ ವಿಸ್ತರಿಸುತ್ತಾ ಹೋಗುತ್ತಾನೆ. ಈ ಮನುಷ್ಯನ ಸಹಜಗುಣವನ್ನು ನಾನು ಯಾಕೆ ಹೇಳುತ್ತಿದ್ದೇನೆ ಎಂದರೆ... ನೀವು ಆಂದುಕೊಂಡಿರುವ, ಕೈ ತುಂಬಿ ತುಳುಕುವಷ್ಟು ಸಂಬಳ ಬರುವ ಸಾಫ್ಟ್ವೇರ್ ಎಂಜಿನಿಯರ್ಗಳಿಗೂ ಅವರದ್ದೇ ಖರ್ಚು- ವೆಚ್ಚ ಇರುತ್ತದೆ, ಅವರದ್ದೇ ಜೀವನ ಇರುತ್ತದೆ ಎಂದು ಹೇಳಲು.
ಸಖತ್ತಾಗಿ ಸಂಬಳ ಬರುತ್ತದೆ, ಅರಾಮಾಗಿ ಬದುಕುತ್ತಿದ್ದಾರೆ, ನಮಗೂ ಒಂದಿಷ್ಟು ಇರಲಿ ಅಂತ ನಮ್ಮ ಹತ್ತಿರ ಅನವಶ್ಯ ಕಿತ್ತುಕೊಳ್ಳುವ ಜನರನ್ನು ನೋಡಿದಾಗ ಮನಸ್ಸಿಗೆ ನೋವಾಗುತ್ತದೆ. ದಯವಿಟ್ಟು ನಮ್ಮನ್ನು ಟಾಟಾ ಬಿರ್ಲಾ ಥರ ಕಾಣಬೇಡಿ. ನಮ್ಮಲ್ಲೂ ಬಹುತೇಕರು ಹೊಟ್ಟೆಪಾಡಿಗೆ ದುಡಿಯುವವರಿದ್ದಾರೆ.
ಅಂಥ ನಿಯತ್ತು ನಮಗೂ, ನಮ್ಮ ಸುತ್ತ ದುಡಿಯುವ ಜನರಿಗೂ ಬಂದರೆ ಚೆನ್ನ.
- ಆರ್. ಶ್ರವಣ್ ನಾರಾಯಣ್ ಐತಾಳ್
rshravan_Iithal@infosys.com
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


