

ನವದೆಹಲಿ: ದೆಹಲಿಯ ಶಾಲೆಯೊಂದರಲ್ಲಿ ಹಿರಿಯ ವಿದ್ಯಾರ್ಥಿಯೊಬ್ಬ ಅದೇ ಶಾಲೆಯ ಕಿರಿಯ ವಿದ್ಯಾರ್ಥಿನ ಮೇಲೆ ಲೈಂಗಿಕ ದೌರ್ಜನ್ಯ ಎಸಗಿರುವ ಘಟನೆ ಬೆಳಕಿಗೆ ಬಂದಿದೆ.
15 ವರ್ಷದ ವಿದ್ಯಾರ್ಥಿನಿಗೆ ಮೇಲೆ 17 ವರ್ಷದ ವಿದ್ಯಾರ್ಥಿ ಲೈಂಗಿಕ ದೌರ್ಜನ್ಯ ನೀಡಿದ್ದಾನೆ ಎಂದು ದೆಹಲಿಯಲ್ಲಿರುವ ಪ್ರಶಾಂತ್ ವಿಹಾರ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
9ನೇ ತರಗತಿ ವ್ಯಾಸಂಗ ಮಾಡುತ್ತಿರುವ 17 ವರ್ಷದ ವಿದ್ಯಾರ್ಥಿ (ಆರೋಪಿ)ಯ ವಿರುದ್ಧ ಪೋಸ್ಕೋ ಅಡಿ ಎಫ್‌ಐಆರ್ ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಮಂಗಳವಾರ ಈ ಘಟನೆ ನಡೆದಿದೆ ಎಂದು ಅಪ್ರಾಪ್ತೆಯ ಪೋಷಕರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಪೊಲೀಸರು ಆರೋಪಿಯನ್ನು ಹುಡುಕುತ್ತಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಅಪ್ರಾಪ್ತೆ ಹೇಳಿಕೆ ಪ್ರಕಾರ, ಶಾಲೆಯಲ್ಲಿ ಮುಗಿಸಿ ಮನೆಗೆ ತೆರಳುವ ಸಂದರ್ಭದಲ್ಲಿ, ಆತ ತನ್ನನ್ನು ವಿದ್ಯಾರ್ಥಿನಿಯನ್ನು ಅಡ್ಡ ಗಟ್ಟಿ ಪ್ರಮುಖ ವಿಷಯದ ಬಗ್ಗೆ ಚರ್ಚಿಸಬೇಕು ಎಂದು ಹೇಳಿದ್ದಾನೆ. ತದ ನಂತರ ಯಾರು ಇಲ್ಲದನ್ನು ಗಮನಿಸಿದ ಆತ, ಶೌಚಾಲಯದೊಳಗೆ ಕರೆದೊಯ್ದು ನನ್ನ ಮೇಲೆ ಲೈಂಗಿಕ ದೌರ್ಜನ್ಯವೆಸಗಿದ್ದಾನೆ ಎಂದು ತಿಳಿಸಿದ್ದಾಳೆ.
ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಕೈಗೊಂಡಿದ್ದಾರೆ.