ಆಂಬುಲೆನ್ಸ್ ಗೆ ಬೆಂಕಿ: ನವಜಾತ ಶಿಶು ಸಾವು

ಆಂಬ್ಯುಲೆನ್ಸ್​ಗೆ ಬೆಂಕಿ ತಲುಲಿದ ಕಾರಣ ನವಜಾತ ಶಿಶುವೊಂದು ಮೃತಪಟ್ಟು, ಇಬ್ಬರು ಗಾಯಗೊಂಡ ಘಟನೆ ಮುಂಬೈನ ಥಾಣೆಯಲ್ಲಿ ನಡೆದಿದೆ....
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಥಾಣೆ: ಆಂಬ್ಯುಲೆನ್ಸ್​ಗೆ ಬೆಂಕಿ ತಲುಲಿದ ಕಾರಣ ನವಜಾತ ಶಿಶುವೊಂದು ಮೃತಪಟ್ಟು, ಇಬ್ಬರು ಗಾಯಗೊಂಡ ಘಟನೆ ಮುಂಬೈನ ಥಾಣೆಯಲ್ಲಿ  ನಡೆದಿದೆ.

ಆಂಬ್ಯುಲೆನ್ಸ್​ನ ಸಿಎನ್​ಜಿ ಕಿಟ್ ಸ್ಪೋಟಗೊಂಡ ಕಾರಣ ಬೆಂಕಿ ಹೊತ್ತಿಕೊಂಡಿದೆ. ಗುರುವಾರ ಜನಿಸಿದ್ದ ಮಗುವನ್ನು ಅನಾರೋಗ್ಯದ ಕಾರಣ ಚಿಕಿತ್ಸೆಗಾಗಿ ಥಾಣೆಯ ಬಿವಂಡಿ ಬಡಾವಣೆಯಲ್ಲಿರುವ ಖಾಸಗಿ ಆಸ್ಪತ್ರೆಗೆ ಕರೆ ದಾಖಲಿಸಲಾಗಿತ್ತು.

ಮಗುವಿನ ಸ್ಥಿತಿ ಗಂಭೀರವಾಗಿದ್ದ ಕಾರಣ ಮುಂಬೈನ ಖಾಸಗಿ ಆಸ್ಪತ್ರೆಗೆ ಮಗುವನ್ನು ಕರೆದುಕೊಂಡು ಹೋಗಲಾಗುತ್ತಿತ್ತು. ಮಗುವನ್ನು ಆಂಬ್ಯುಲೆನ್ಸ್​ನಲ್ಲಿ ಮಲಗಿಸುತ್ತಿದ್ದಾಗ ವಾಹನದ ಸಿಎನ್​ಜಿ ಕಿಟ್ ಸ್ಫೋಟ ಸಂಭವಿಸಿದೆ. ಈ ಸಂದರ್ಭದಲ್ಲಿ ಆಂಬ್ಯುಲೆನ್ಸ್​ನಲ್ಲಿದ್ದ ಡಾಕ್ಟರ್ ಮತ್ತು ನರ್ಸ್​ಗೆ ಗಂಭೀರ ಗಾಯಗಳಾಗಿವೆ. ಆದರೆ ಮಗುವನ್ನು ಸೂಕ್ತ ಸಮಯದಲ್ಲಿ ರಕ್ಷಿಸಲು ಸಾಧ್ಯವಾಗದ ಕಾರಣ ಮಗು ಮೃತಪಟ್ಟಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com