ಬಾಲಿವುಡ್ ದೂರಿದ, ಶಿಕ್ಷೆಯಿಂದ ಬಚಾವಾದ!

ಮಹಿಳೆಯರನ್ನು ಹಿಂಬಾಲಿಸುತ್ತಿರುವ(ಸಾಂದರ್ಭಿಕ ಚಿತ್ರ)
ಮಹಿಳೆಯರನ್ನು ಹಿಂಬಾಲಿಸುತ್ತಿರುವ(ಸಾಂದರ್ಭಿಕ ಚಿತ್ರ)

ಆಸ್ಟ್ರೇಲಿಯಾ: ಆಸ್ಟ್ರೇಲಿಯಾದಲ್ಲಿ ಮಹಿಳೆಯರನ್ನು ಚುಡಾಯಿಸಿದರೆ ಹಾಗೂ ಲೈಂಗಿಕ ದೌರ್ಜನ್ಯ ಎಸಗಿದರೆ ಕಠಿಣ ಶಿಕ್ಷೆಗೆ ಗುರಿಯಾಗಬೇಕಾಗುತ್ತದೆ. ಆದರೆ ಇಲ್ಲೊಬ್ಬ ಮಹಾಶಯ ಬಾಲಿವುಡ್ ಚಿತ್ರಗಳ ಪ್ರಭಾವದಿಂದ ಮಹಿಳೆಯರನ್ನು ಹಿಂಬಾಲಿಸಿದೆ ಎಂದು ಕೋರ್ಟ್‌ಗೆ ಮನವರಿಕೆ ಮಾಡುವ ಮೂಲಕ ಶಿಕ್ಷೆಯಿಂದ ಪಾರಾಗಿದ್ದಾನೆ.

ಆಸ್ಟ್ರೇಲಿಯಾದಲ್ಲಿ ಮಹಿಳೆಯರಿಬ್ಬರನ್ನು ಹಿಂಬಾಲಿಸಿದ ಆರೋಪ ಮೇಲೆ ಬಂಧಿತನಾಗಿದ್ದ 32 ವರ್ಷದ ಭಾರತ ಮೂಲದ ಸಂದೇಶ್ ಬಲಿಂಗ, ಆಸ್ಟ್ರೇಲಿಯಾದ ಹೋಬಾರ್ಟ್ ಮ್ಯಾಜಿಸ್ಟ್ರೇಟ್ ಕೋರ್ಟ್ ಮುಂದೆ ನಾನು ಬಾಲಿವುಡ್ ಸಿನಿಮಾಗಳಿಂದ ಪ್ರೇರೇಪಿತನಾಗಿ ಪ್ರೇಮ ನಿವೇಧನೆಗಾಗಿ ಮಹಿಳೆಯರನ್ನು ಹಿಂಬಾಲಿಸಿದ್ದೆ ಎಂದು ಅಲವತ್ತುಕೊಂಡಿದ್ದಾನೆ. ಈತನ ಪೂರ್ವ ಪರ ವಿಚಾರಿಸಿದ ಕೋರ್ಟ್‌ನ ನ್ಯಾಯಾಧೀಶರಾದ ಮೈಕಲ್ ಹಿಲ್ ಅವರು ಬಾಲಿವುಡ್ ಚಿತ್ರಗಳಿಂದ ಪ್ರೇರೇಪಿತನಾಗಿ ಈ ರೀತಿ ಮಾಡಿದ್ದಾನೆ ಎನ್ನುವ ಮೂಲಕ ಪ್ರಕರಣವನ್ನು ಕೈಬಿಟ್ಟಿದ್ದಾರೆ.

ಸಂದೇಶ್ ಬಲಿಗ ಸುಮಾರು 18 ತಿಂಗಳಿನಿಂದ ಓರ್ವ ಮಹಿಳೆಯನ್ನು ಹಾಗೂ 4 ತಿಂಗಳಿನಿಂದ ಮತ್ತೋರ್ವ ಮಹಿಳೆಯನ್ನು ಹಿಂಬಾಲಿಸುತ್ತಿದ್ದ ಇದರಿಂದ ರೋಸಿ ಹೋಗಿದ್ದ ಮಹಿಳೆಯರಿಬ್ಬರು ಕೋರ್ಟ್ ಮೆಟ್ಟಿಲೇರಿದ್ದರು.

ಮಹಿಳೆಯರನ್ನು ಹಿಂಬಾಲಿಸುವುದು ಭಾರತೀಯ ಪುರುಷರ ಸಾಮಾನ್ಯ ವರ್ತನೆಯಾಗಿದೆ ಎಂದು ಬಲಿಂಗ ಪರ ವಕೀಲ ಗ್ರೇಗ್ ಬಾನ್ಸ್ ವಾದ ಮಂಡಿಸಿದ್ದರು.


ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com