ದೇಶ ಬಿಟ್ಟ 61 ಸಾವಿರ ಶ್ರೀಮಂತರು

14 ವರ್ಷಗಳಲ್ಲಿ ಭಾರತ 61ಸಾವಿರ ಕೋಟ್ಯಧೀಶರು ದೇಶ ತೊರೆದು ವಿದೇಶಗಳಿಗೆ ವಲಸೆ ಹೋಗಿದ್ದಾರೆ. ಹೀಗೆ ವಲಸೆ ಹೋಗುವವರ ಸಂಖ್ಯೆಯಲ್ಲಿ ಭಾರತಕ್ಕೆ ಎರಡನೇ ಸ್ಥಾನ...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
ನವದೆಹಲಿ: 14 ವರ್ಷಗಳಲ್ಲಿ ಭಾರತ 61ಸಾವಿರ ಕೋಟ್ಯಧೀಶರು ದೇಶ ತೊರೆದು ವಿದೇಶಗಳಿಗೆ ವಲಸೆ ಹೋಗಿದ್ದಾರೆ. ಹೀಗೆ ವಲಸೆ ಹೋಗುವವರ ಸಂಖ್ಯೆಯಲ್ಲಿ ಭಾರತಕ್ಕೆ ಎರಡನೇ ಸ್ಥಾನ.  ಮೊದಲನೇ ಸ್ಥಾನ ಚೀನಾಕ್ಕೆ. ತೆರಿಗೆ, ಭದ್ರತೆ, ಮಕ್ಕಳ ಶಿಕ್ಷಣ ಇವೇ ಮುಂತಾದ ಕಾರಣಗಳಿಗಾಗಿ ಕೋಟ್ಯಧೀಶರು ದೇಶ ತೊರೆದಿದ್ದಾರೆ ಎಂದು ಅಧ್ಯಯನ ವರದಿಯೊಂದು ಹೇಳಿದೆ.
`ನ್ಯೂವರ್ಲ್ಡ್ ವೆಲ್ತ್' ಮತ್ತು `ಲಿಯೋ ಗ್ಲೋಬಲ್' ಎಂಬ ಎರಡು ಸಂಸ್ಥೆಗಳು ನಡೆಸಿರುವ ಅಧ್ಯಯನದಿಂದ ಈ ಮಾಹಿತಿ ಹೊರಬಿದ್ದಿದೆ. ``ಹೊರದೇಶಗಳಲ್ಲಿ ಪೌರತ್ವ ಪಡೆಯುವ ಸಲುವಾಗಿ ಸಲ್ಲಿಕೆಯಾಗುತ್ತಿರುವ ಅರ್ಜಿಗಳು ಒಂದು ದಶಕದ ಅವಧಿಯಲ್ಲಿ ಸಾಕಷ್ಟು ವೃದ್ಧಿಯಾಗಿದೆ'' ಎಂದು ಅಧ್ಯಯನದ ವರದಿ ಹೇಳಿದೆ. ಕಳೆದ ಒಂದು ದಶಕದಲ್ಲಿ (2000- 2014) ಭಾರತದ 61ಸಾವಿರ  ಶ್ರೀಮಂತರು ವಿದೇಶಕ್ಕೆ ತೆರಳಿ, ಅಲ್ಲಿಯೇ ನೆಲೆ ಕಂಡು ಕೊಂಡಿದ್ದಾರೆ. ಇದೇ ಅವಧಿಯಲ್ಲಿ ಚೀನಾ ದ 91 ಸಾವಿರ ಸಿರಿವಂತರು ವಿದೇಶದಲ್ಲಿ ನೆಲೆ ಕಂಡುಕಂಡುಕೊಂಡಿದ್ದಾರೆ.
ಭಾರತದ ಶ್ರೀಮಂತರು, ಅರಬ್, ಅಮೆರಿಕ, ಇಂಗ್ಲೆಂಡ್, ಆಸ್ಟ್ರೇಲಿಯಾಗಳಿಗೆ ಹೆಚ್ಚಾಗಿ ವಲಸೆ ಹೋಗಿದ್ದಾರೆ. ಚೀನಾದ ಶ್ರೀಮಂತರು, ಅಮೆರಿಕ, ಹಾಂಕಾಂಗ್, ಸಿಂಗಾಪುರ ಮತ್ತು ಇಂಗ್ಲೆಂಡ್‍ಗೆ ಹೆಚ್ಚಾಗಿ ತೆರಳಿದ್ದಾರೆ ಎಂದು ವರದಿ ಹೇಳಿದೆ. ಇಂಗ್ಲೆಂಡ್ ಅತಿ ಹೆಚ್ಚು ವಲಸಿಗರಿಗೆ ತನ್ನಲ್ಲಿ ಜಾಗ ನೀಡಿದ್ದು, ಒಂದು ದಶಕದಲ್ಲಿ 1.25 ಲಕ್ಷ ಜನರಿಗೆ ಪೌರತ್ವ ನೀಡಿದೆ. ಇನ್ನುಳಿದಂತೆ, ಪ್ರಾನ್ಸ್‍ನ  42 ಸಾವಿರ, ಇಟಲಿ 23 ಸಾವಿರ, ರಷ್ಯ 20 ಸಾವಿರ, ಇಂಡೋನೇಷ್ಯ 12 ಸಾವಿರ, ದಕ್ಷಿಣ ಆಫ್ರಿಕ 8 ಸಾವಿರ, ಈಜಿಪ್ಟ್ ನ 7 ಸಾವಿರ ಶ್ರೀ ಮಂತರು ದೇಶ ತೊರೆದು ಬೇರೆಡೆ ನೆಲೆ  ಕಂಡುಕೊಂಡುಕೊಂಡಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com