ರಷ್ಯಾ ದಿನಕ್ಕೆ ಟ್ವೀಟ್ ಮೂಲಕ ಪ್ರಧಾನಿ ಶುಭಾಷಯ

ಮುಂದಿನ ತಿಂಗಳಲ್ಲಿ ರಷ್ಯಾ ಪ್ರವಾಸ ಕೈಗೊಳ್ಳಲಿರುವ ಪ್ರಧಾನಿ ನರೇಂದ್ರ ಮೋದಿ ಜೂ.12 ರಂದು ರಷ್ಯಾ ದಿನದ ಅಂಗವಾಗಿ ರಷ್ಯಾಗೆ ಶುಭಾಶಯ ಕೋರಿದ್ದಾರೆ.
ರಷ್ಯಾ ದಿನಕ್ಕೆ ಟ್ವೀಟ್ ಮೂಲಕ ಪ್ರಧಾನಿ ಶುಭಾಷಯ
ರಷ್ಯಾ ದಿನಕ್ಕೆ ಟ್ವೀಟ್ ಮೂಲಕ ಪ್ರಧಾನಿ ಶುಭಾಷಯ
Updated on: 

ನವದೆಹಲಿ: ಮುಂದಿನ ತಿಂಗಳಲ್ಲಿ ರಷ್ಯಾ ಪ್ರವಾಸ ಕೈಗೊಳ್ಳಲಿರುವ ಪ್ರಧಾನಿ ನರೇಂದ್ರ ಮೋದಿ ಜೂ.12 ರಂದು ರಷ್ಯಾ ದಿನದ ಅಂಗವಾಗಿ ರಷ್ಯಾಗೆ ಶುಭಾಶಯ ಕೋರಿದ್ದು  ಮುಂದಿನ ದಿನಗಳಲ್ಲಿ ಉಭಯ ದೇಶಗಳ ನಡುವೆ ವಿಶೇಷ ಮತ್ತು ಸವಲತ್ತುಗಳುಳ್ಳ ಒಪ್ಪಂದಗಳು ನಡೆಯಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಇಂಗ್ಲೀಶ್ ಹಾಗೂ ರಷ್ಯಾ ಭಾಷೆಗಳಲ್ಲಿ ರಷ್ಯಾದ ಜನತೆಗೆ ಟ್ವೀಟ್ ಮೂಲಕ ಶುಭಾಶಯ ಕೋರಿರುವ ಪ್ರಧಾನಿ ನರೇಂದ್ರ ಮೋದಿ,  ಉಭಯ ದೇಶಗಳೂ ದೀರ್ಘಕಾಲದ ದ್ವಿಪಕ್ಷೀಯ ಸಂಬಂಧ ಹೊಂದಿದ್ದು, ಕಠಿಣ ಸಂದರ್ಭಗಳಲ್ಲೂ ಭಾರತ ಹಾಗೂ ರಷ್ಯಾ ಪರಸ್ಪರ ಉತ್ತಮ ಸಂಬಂಧವನ್ನು ಕಾಯ್ದುಕೊಂಡಿದೆ ಎಂದು ಮೋದಿ ತಿಳಿಸಿದ್ದಾರೆ. 

ಮುಂದಿನ  ದಿನಗಳಲ್ಲಿ ಭಾರತ-ರಷ್ಯಾದ  ನಡುವಿನ ವಿಶೇಷ ಒಪ್ಪಂದಗಳು  ಮಹತ್ವ ಪಡೆಯಲಿವೆ ಎಂಬುದು ತಮ್ಮ ವಿಶ್ವಾಸ ಎಂದು ಪ್ರಧಾನಿ ಮೋದಿ ತಿಳಿಸಿದ್ದಾರೆ. ಮುಂದಿನ ತಿಂಗಳು ರಷ್ಯಾ ಪ್ರವಾಸ ಕೈಗೊಳ್ಳಲಿರುವ ಪ್ರಧಾನಿ ನರೇಂದ್ರ ಮೋದಿ, ಬ್ರಿಕ್ಸ್ ಹಾಗೂ ಶಾಂಘೈ ಸಹಕಾರ ಸಂಸ್ಥೆ ಶೃಂಗಸಭೆಗಳಲ್ಲಿ ಭಾಗವಹಿಸಲಿದ್ದಾರೆ. ಈ ವೇಳೆ ಪ್ರಧಾನಿ ನರೇಂದ್ರ ಮೋದಿ ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್  ಅವರೊಂದಿಗೆ ದ್ವಿಪಕ್ಷೀಯ ಮಾತುಕತೆ ನಡೆಸಲಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com