ಮಕ್ಕಳ ಅಭಿವೃದ್ಧಿ ಅರಿಯಲು ಟ್ರಾಕಿಂಗ್ ವ್ಯವಸ್ಥೆ ಘೋಷಿಸಿದ ಸ್ಮೃತಿ ಇರಾನಿ

ಒಂದು ತರಗತಿಯಿಂದ ಮತ್ತೊಂದು ತರಗತಿಗೆ ಮಕ್ಕಳ ಅಭಿವೃದ್ಧಿಯನ್ನು ತಿಳಿಯಲು ರಾಷ್ಟ್ರಾದ್ಯಂತ 200 ದಶಲಕ್ಷ ಮಕ್ಕಳ ಗುರುತು ಪತ್ತೆ ವ್ಯವಸ್ಥೆಯನ್ನು...
ಸ್ಮೃತಿ ಇರಾನಿ
ಸ್ಮೃತಿ ಇರಾನಿ
Updated on: 
ನವದೆಹಲಿ: ಒಂದು ತರಗತಿಯಿಂದ ಮತ್ತೊಂದು ತರಗತಿಗೆ ಮಕ್ಕಳ ಅಭಿವೃದ್ಧಿಯನ್ನು ತಿಳಿಯಲು ರಾಷ್ಟ್ರಾದ್ಯಂತ 200 ದಶಲಕ್ಷ ಮಕ್ಕಳ ಗುರುತು ಪತ್ತೆ ವ್ಯವಸ್ಥೆಯನ್ನು ಪರಿಚಯಿಸಲಾಗುವುದು ಎಂದು ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವೆ ಸ್ಮೃತಿ ಇರಾನಿ ಅವರು ತಿಳಿಸಿದ್ದಾರೆ.
ಈ ಕುರಿತು ಸರಣಿ ಟ್ವೀಟ್ ಮಾಡಿರುವ ಸ್ಮೃತಿ ಇರಾನಿ, ದೇಶಾದ್ಯಂತ ಸುಮಾರು 200 ದಶಲಕ್ಷ ಮಕ್ಕಳು ಒಂದು ತರಗತಿಯಿಂದ ಮತ್ತೊಂದು ತರಗತಿಗೆ ಅಭಿವೃದ್ಧಿ ಹೊಂದಿದ ಬಗ್ಗೆ ಹಾಗೂ ಶಾಲೆ ತೊರೆದ ಮಕ್ಕಳನ್ನು ಪತ್ತೆ ಹಚ್ಚಲು ಮಕ್ಕಳ ಟ್ರಾಕಿಂಗ್ ವ್ಯವಸ್ಥೆ ಜಾರಿಗೆ ತರಲಾಗುವುದು ಎಂದಿದ್ದಾರೆ.
ಶಿಕ್ಷಣ ಹಕ್ಕು ಕಾಯ್ದೆಯಡಿ ಬ್ರಿಡ್ಜ್ ಸ್ಕೂಲ್ ಎಂಬ ವ್ಯವಸ್ಥೆಯನ್ನು ಕೈಬಿಡಲಾಗುವುದು ಎಂದಿರುವ ಸ್ಮೃತಿ ಇರಾನಿ, ಈ ಹಿಂದಿನ ಯುಪಿಎ ಸರ್ಕಾರ ಸರ್ವ ಶಿಕ್ಷಣ ಅಭಿಯಾನದಡಿ ಮಕ್ಕಳ ಅಭಿವೃದ್ಧಿಯ ಬಗ್ಗೆ ವಾರ್ಷಿಕವಾಗಿ ಮಾಹಿತಿ ನೀಡುತ್ತಿತ್ತು, ಆದರೆ ನಮ್ಮ ಸರ್ಕಾರ ಆನ್​ಲೈನ್ ಮುಖಾಂತರ ಪ್ರತಿ ದಿನವೂ ಸಿಗುವಂತೆ ಮಾಡುತ್ತದೆ ಎಂದಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com