ಘಾಜಿಯಾಬಾದ್: ಉತ್ತರಪ್ರದೇಶದ ಬಿಜೆಪಿ ಮುಖಂಡ ಬ್ರಿಜ್ಪಾಲ್ ತೆವತಿಯಾ ಅವರ ಕಾರಿನ ಮೇಲೆ ದುಷ್ಕರ್ಮಿಗಳು ಎಕೆ-47 ನಿಂದ ಹೆಚ್ಚು ಕಡಿಮೆ 100 ಭಾರಿ ಗುಂಡು ಹಾರಿಸಿದ್ದಾರೆ.
ಕಳೆದ ರಾತ್ರಿ ಬ್ರಿಜ್ಪಾಲ್ ಹಾಗೂ ಅವರ ಬೆಂಬಲಿಗರು ಪ್ರಯಾಣಿಸುತ್ತಿದ್ದ ಕಾರಿನ ಮೇಲೆ ದಾಳಿ ಮಾಡಿದ್ದು, ದಾಳಿಯಿಂದಾಗಿ ಬ್ರಿಜ್ಪಾಲ್ ಸೇರಿ ಇನ್ನಿಬ್ಬರ ಸ್ಥಿತಿ ಚಿಂತಾಜನಕವಾಗಿದ್ದು ಘಾಜಿಯಾಬಾದ್ ನ ಫೋರ್ಟಿಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಬ್ರಿಜ್ಪಾಲ್ ಅವರ ಚಲನವಲನದ ಮೇಲೆ ಕಣ್ಣಿಟ್ಟು ಈ ದಾಳಿ ನಡೆಸಲಾಗಿದೆ. ಇನ್ನು ಘಟನಾ ಸ್ಥಳದಲ್ಲಿ ಸ್ಫೋಟಕ ಮತ್ತು ಮಾರಕಾಸ್ತ್ರಗಳು, ಎಕೆ-47, 9 ಪಿಸ್ತೂಲ್ಗಳು ಸಿಕ್ಕಿವೆ ಅವುಗಳನ್ನು ವಶ ಪಡೆಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಕೇಂದ್ರ ರಾಜ್ಯ ಸಚಿವ ಮಹೇಶ್ ಶರ್ಮ ಆಸ್ಪತ್ರೆಗೆ ಭೇಟಿ ನೀಡಿ ಬ್ರಿಜ್ಪಾಲ್ ಅವರ ಆರೋಗ್ಯ ವಿಚಾರಿಸಿದ್ದು, ಬ್ರಿಜ್ಪಾಲ್ ಅವರು ಚಿಂತಾಜನಕ ಸ್ಥಿತಿಯಲ್ಲಿದ್ದಾರೆ ಎಂದು ತಿಳಿಸಿದ್ದಾರೆ.