ಸಮಾಧಿಯಿಂದ ಹೊರತೆಗೆದು ಮೃತದೇಹದೊಂದಿಗೆ ಸೆಕ್ಸ್: ವ್ಯಕ್ತಿ ಬಂಧನ

ಸ್ಮಶಾನದಲ್ಲಿ ಸಮಾಧಿ ಮಾಡಲಾಗಿದ್ದ 50 ವರ್ಷದ ಮಹಿಳೆಯ ಮೃತದೇಹವನ್ನು ಹೊರತೆಗೆದು ರಾಸಲೀಲೆ ನಡೆದ ಆರೋಪದ ಮೇಲೆ ವ್ಯಕ್ತಿಯೊರ್ವನನ್ನು ಪೊಲೀಸರು ಬಂಧಿಸಿದ್ದಾರೆ...
ರಾಸಲೀಲೆ
ರಾಸಲೀಲೆ
Updated on

ಆಗ್ರ: ಸ್ಮಶಾನದಲ್ಲಿ ಸಮಾಧಿ ಮಾಡಲಾಗಿದ್ದ 50 ವರ್ಷದ ಮಹಿಳೆಯ ಮೃತದೇಹವನ್ನು ಹೊರತೆಗೆದು ರಾಸಲೀಲೆ ನಡೆಸಿದ ಆರೋಪದ ಮೇಲೆ ವ್ಯಕ್ತಿಯೊರ್ವನನ್ನು ಪೊಲೀಸರು ಬಂಧಿಸಿದ್ದಾರೆ.

ಬಂಧಿತನನ್ನು 40 ವರ್ಷದ ರಾಜೇಂದ್ರ ಎಂದು ಹೇಳಲಾಗಿದ್ದು, ಆತ ಮದ್ಯಪಾನ ಮಾಡಿ ಬಳಿಕ ತಾನು ಈ ಕೃತ್ಯವನ್ನು ಮಾಡಿರುವುದಾಗಿ ಒಪ್ಪಿಕೊಂಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

ಆಗ್ರದ ಪುತೇಪುರ್ ಸಿಕ್ರಿಯ ಲಾಲ್ ದರ್ವಾಜಾ ರುದ್ರಭೂಮಿಯಲ್ಲಿ ಮಹಿಳೆಯ ಮೃತದೇಹವೊಂದು ಸಮಾಧಿಯಿಂದ ಹೊರತೆಗೆಯಲಾಗಿತ್ತು. ಮೊದಮೊದಲು ಮಾಂಸದಾಸೆಗೆ ನಾಯಿಗಳು ದೇಹವನ್ನು ಹೊರಗೆ ತೆಗೆದಿವೆ ಎಂದು ಶಂಕಿಸಲಾಗಿತ್ತು. ಆದರೆ ಮೃತದೇಹದ ಮೇಲೆ ಆಗಿರುವ ಗಾಯದ ಕುರುಹುಗಳ ಹಿನ್ನೆಲೆಯಲ್ಲಿ ಅತ್ಯಾಚಾರವಾಗಿದೆ ಎಂದು ಪೊಲೀಸರು ಶಂಕಿಸಿದ್ದರು.

ಮೃತಪಟ್ಟಿದ್ದ ಮಹಿಳೆಯ ಮೃತದೇಹವನ್ನು ಶುಕ್ರವಾರ ಸಮಾಧಿ ಮಾಡಲಾಗಿತ್ತು. ಶನಿವಾರ ಆಕೆಯ ದೇಹ ಸಮಾಧಿಯಿಂದ ಹೊರಗೆ ಬಿದ್ದಿತ್ತು. ಮಹಿಳೆಯ ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಪೊಲೀಸರು ಸಲಹೆ ನೀಡಿದರು. ಆದರೆ ಇದಕ್ಕೆ ಒಪ್ಪದ ಕುಟುಂಬಸ್ಥರು ಮಹಿಳೆಯ ಮೃತದೇಹವನ್ನು ಮತ್ತೆ ಸಮಾಧಿ ಮಾಡಿದರು.

ಮಹಿಳೆ ಹತ್ರಾಸ್ ನ ಶದಬಾದ್ ನ ಮೂಲದವರಾಗಿದ್ದು, ಆಕೆ ಪತ್ತೇಪುರ್ ಸಿಕ್ರಿ ಮೂಲದ ವ್ಯಕ್ತಿಯನ್ನು ಮದುವೆಯಾಗಿದ್ದರು. ಆರೋಪಿ ರಾಜೇಂದ್ರ ಮಧ್ಯವೆಸನಿಯಾಗಿದ್ದು, ಅವಿವಾಹಿತನಾಗಿದ್ದ ಆತ ಕಾಯಿಲೆಯಿಂದ ಬಳಲುತ್ತಿದ್ದ ಎಂದು ಕುಟುಂಬಸ್ಥರು ಹೇಳಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com