ಸೀಮಿತ ದಾಳಿ ನಡೆದಿದ್ದೇ ಆಗಿದ್ದರೆ, ಪಾಕ್ ದಿಟ್ಟ ಉತ್ತರ ನೀಡುತ್ತಿತ್ತು: ಅಬ್ದುಲ್ ಬಸಿತ್

ಪಾಕಿಸ್ತಾನ ಆಕ್ರಮಿತ ಕಾಶ್ಮೀರದಲ್ಲಿ ಭಾರತೀಯ ಸೇನೆ ಸೀಮಿತ ದಾಳಿ ನಡೆಸಿರುವುದು ನಿಜವಾಗಿದ್ದರೆ, ಪಾಕಿಸ್ತಾನ ಕೂಡಲೇ ಭಾರತಕ್ಕೆ ದಿಟ್ಟ ಉತ್ತರ ನೀಡುತ್ತಿತ್ತು ಎಂದು ಅಬ್ದುಲ್ ಬಸಿತ್ ಭಾರತದಲ್ಲಿರುವ ಪಾಕಿಸ್ತಾನ...
ಭಾರತದಲ್ಲಿರುವ ಪಾಕಿಸ್ತಾನ ಹೈಕಮಿಷನರ್ ಅಬ್ದುಲ್ ಬಸಿತ್
ಭಾರತದಲ್ಲಿರುವ ಪಾಕಿಸ್ತಾನ ಹೈಕಮಿಷನರ್ ಅಬ್ದುಲ್ ಬಸಿತ್
Updated on: 

ನವದೆಹಲಿ: ಪಾಕಿಸ್ತಾನ ಆಕ್ರಮಿತ ಕಾಶ್ಮೀರದಲ್ಲಿ ಭಾರತೀಯ ಸೇನೆ ಸೀಮಿತ ದಾಳಿ ನಡೆಸಿರುವುದು ನಿಜವಾಗಿದ್ದರೆ, ಪಾಕಿಸ್ತಾನ ಕೂಡಲೇ ಭಾರತಕ್ಕೆ ದಿಟ್ಟ ಉತ್ತರ ನೀಡುತ್ತಿತ್ತು ಎಂದು ಅಬ್ದುಲ್ ಬಸಿತ್ ಭಾರತದಲ್ಲಿರುವ ಪಾಕಿಸ್ತಾನ ಹೈಕಮಿಷನರ್ ಅಬ್ದುಲ್ ಬಸಿತ್ ಅವರು ಬುಧವಾರ ಹೇಳಿದ್ದಾರೆ.

ಸೀಮಿತ ದಾಳಿ ಕುರಿತಂತೆ ಖಾಸಗಿ ಮಾಧ್ಯಮವೊಂದರ ಸಂದರ್ಶನದಲ್ಲಿ ಮಾತನಾಡಿರುವ ಅವರು, ಸೀಮಿತ ದಾಳಿ ನಡೆಸಲಾಗಿದೆ. ಅದಕ್ಕೆ ವಿಡಿಯೋಗಳ ಸಾಕ್ಷಿಯೂ ಇದೆ ಎಂದು ಭಾರತ ವಿಶ್ವಕ್ಕೆ ಸುಳ್ಳು ಕಥೆಗಳನ್ನು ಹೇಳುತ್ತಿದೆ. ಭಾರತೀಯ ಖಾಸಗಿ ಚಾನೆಲ್ ವೊಂದು ಸೀಮಿತ ದಾಳಿ ಕುರಿತಂತೆ ಮೀರುತ್ ಪೊಲೀಸ್ ಅಧಿಕಾರಿಯೊಂದಿಗೆ ದೂರವಾಣಿ ಮೂಲಕ ಮಾತುಕತೆ ನಡೆಸಿದೆ. ಭಾರತೀಯ ಸೇನೆ ಗಡಿ ನುಸುಳಿರುವುದು ಇದರಿಂದ ಖಾತ್ರಿಯಾಗುತ್ತದೆ ಎಂದು ಹೇಳಿದ್ದಾರೆ.

ಸೆ.29 ರಂದು ಯಾವುದೇ ರೀತಿಯ ಸೀಮಿತ ದಾಳಿ ನಡೆದಿಲ್ಲ. ಭಾರತೀಯ ಸೇನೆ ಗಡಿ ನುಸುಳಿವಿಕೆಯಷ್ಟೇ ನಡೆದಿದೆ. ಪರಿಣಾಮ ಪಾಕಿಸ್ತಾನ ಇಬ್ಬರು ಸೈನಿಕರು ಮೃತಪಟ್ಟಿದ್ದಾರೆ. ಒಂದು ವೇಳೆ ಸೀಮಿತ ದಾಳಿ ನಡೆದಿದ್ದೇ ಆಗಿದ್ದರೆ, ಪಾಕಿಸ್ತಾನ ಕೂಡಲೇ ಭಾರತಕ್ಕೆ ದಿಟ್ಟ ಉತ್ತರ ನೀಡುತ್ತಿತ್ತು.

ಭಾರತ ಹೇಳುತ್ತಿರುವ ಕಟ್ಟಕಥೆಗಳನ್ನು ಪಾಕಿಸ್ತಾನ ಪ್ರಧಾನಮಂತ್ರಿ ಕಡಾಖಂಡಿತವಾಗಿ ತಳ್ಳಿಹಾಕಿದ್ದಾರೆ. ಕಾಶ್ಮೀರದ ವಿಚಾರ ಹಿಡಿದು ಪಾಕಿಸ್ತಾನವನ್ನು ಭಯೋತ್ಪಾದನಾ ರಾಷ್ಟ್ರವೆಂದೂ ದೂಷಿಸುವುದು ಸರಿಯಲ್ಲ. ಭಾರತ ಎಲ್ಲಾ ರೀತಿಯಲ್ಲಿಯೂ ನಮ್ಮ ಸಹಕಾರದ ಬಾಗಿಲನ್ನು ಮುಚ್ಚಿಸುತ್ತಿದೆ.

ಉರಿ ದಾಳಿ ನಂತರ ಸಾರ್ಕ್ ಶೃಂಗಸಭೆಯಲ್ಲಿ ಭಾಗವಹಿಸುವುದಕ್ಕೆ ನಕಾರ ಸೂಚಿಸಿತ್ತು. ಇದರ ಪರಿಣಾಮ ಬಾಂಗ್ಲಾದೇಶ, ಭೂತಾನ್ ಹಾಗೂ ಅಫ್ಘಾನಿಸ್ತಾನ ಕೂಡ ಶೃಂಗಸಭೆಯಲ್ಲಿ ಭಾಗವಹಿಸುವುದನ್ನು ರದ್ದು ಪಡಿಸಿತು. ಇದರಿಂದ ಎಲ್ಲಾ ದೇಶಗಳಿಗೂ ನಷ್ಟ ಹಾಗೂ ಹಿನ್ನಡೆಯುಂಟಾಗಿದೆ. ಮುಂದಿನ ವರ್ಷ ಪಾಕಿಸ್ತಾನ ಮತ್ತೆ ಶೃಂಗಸಭೆಯನ್ನು ನಡೆಸಲಿದೆ ಎಂಬ ವಿಶ್ವಾಸ ನಮಗಿದೆ. ಮುಂದಿನ ವರ್ಷ ಸಾಧ್ಯವಾಗದಿದ್ದರೆ, ಮತ್ತೆ ಮುಂದಿನ ವರ್ಷ ಪ್ರಯತ್ನ ಪಡುತ್ತೇವೆಂದು ಹೇಳಿಕೊಂಡಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com