

ನವದೆಹಲಿ: ಭಾರತ ಹಾಗೂ ಫ್ರಾನ್ಸ್ ನಡುವಿನ ರಾಫೆಲ್ ಡೀಲ್ ಒಪ್ಪಂದ ಭಾರತಕ್ಕೆ ಸಿಕ್ಕಿರುವ ಅತ್ಯುತ್ತಮವಾದ ಒಪ್ಪಂದ ಎಂದು ಕೇಂದ್ರ ಸರ್ಕಾರ ಹೇಳಿದೆ.
ರಾಫೆಲ್ ಜೆಟ್ ಗಳನ್ನು ಖರೀದಿಸಲು ಕೇಂದ್ರ ಸರ್ಕಾರ ದುಪ್ಪಟ್ಟು ಹಣ ವ್ಯಯಿಸಿದೆ ಎಂಬ ಆರೋಪಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡಿರುವ ಕೇಂದ್ರ ಸರ್ಕಾರ ರಾಫೆಲ್ ಜೆಟ್ ಒಪ್ಪಂದ ಭಾರತಕ್ಕೆ ಸಿಕ್ಕಿರುವ ಅತ್ಯುತ್ತಮ ಒಪ್ಪಂದಗಳಲ್ಲಿ ಒಂದು ಎಂದು ಕೇಂದ್ರ ಸರ್ಕಾರ ಸ್ಪಷ್ಟನೆ ನೀಡಿದೆ.
ಭಾರತ ರಾಫೆಲ್ ಜೆಟ್ ಖರೀದಿಗೆ ದುಪ್ಪಟ್ಟು ಹಣ ವ್ಯಯಿಸುತ್ತಿದೆ ಎಂಬ ಸ್ವರಾಜ್ ಅಭಿಯಾನ್ ಪಕ್ಷದ ಆರೋಪಕ್ಕೆ ಪ್ರತಿಕ್ರಿಯೆ ನೀಡಿರುವ ರಕ್ಷಣಾ ಸಚಿವ ಮನೋಹರ್ ಪರಿಕ್ಕರ್ ಭಾರತ ಸಹಿ ಹಾಕಿರುವ ಅತ್ಯುತ್ತಮ ಒಪ್ಪಂದಗಳಲ್ಲಿ ರಾಫೆಲ್ ಜೆಟ್ ಒಪ್ಪಂದವು ಒಂದು, ಫ್ರಾನ್ಸ್ ಭಾರತವನ್ನು ಹೊರತುಪಡಿಸಿ ಬೇರೆ ಯಾವ ದೇಶಕ್ಕೂ ಇಂತಹ ಒಳ್ಳೆಯ ಒಪ್ಪಂದವನ್ನು ನೀಡಿರಲಿಲ್ಲ ಎಂದು ಸಮರ್ಥಿಸಿಕೊಂಡಿದ್ದಾರೆ.