ಆಗಸ್ಟ್ 15ರಂದು ಲಡಾಕ್‌ನಲ್ಲಿ ಭಾರತ-ಚೀನಾ ಯೋಧರ ನಡುವೆ ಜಟಾಪಟಿ ನಡೆದಿತ್ತು: ಭಾರತ

ಆಗಸ್ಟ್ 15 ಸ್ವಾತಂತ್ರ್ಯೋತ್ಸವ ದಿನದಂದೇ ಲಡಾಕ್ ನಲ್ಲಿನ ಪಾಂಗೋಂಗ್ ಸರೋವರ ಸಮೀಪ ಭಾರತ ಮತ್ತು ಚೀನಾ ಸೈನಿಕರು ಮಾತಿನ ಜಗಳ ನಡೆಸಿ, ಪರಸ್ಪರರ...
ಚೀನಾ-ಭಾರತ ಯೋಧರು
ಚೀನಾ-ಭಾರತ ಯೋಧರು
Updated on: 
ನವದೆಹಲಿ: ಆಗಸ್ಟ್ 15 ಸ್ವಾತಂತ್ರ್ಯೋತ್ಸವ ದಿನದಂದೇ ಲಡಾಕ್ ನಲ್ಲಿನ ಪಾಂಗೋಂಗ್ ಸರೋವರ ಸಮೀಪ ಭಾರತ ಮತ್ತು ಚೀನಾ ಸೈನಿಕರು ಮಾತಿನ ಜಗಳ ನಡೆಸಿ, ಪರಸ್ಪರರ ಮೇಲೆ ಕಲ್ಲೆಸೆದುಕೊಂಡಿದ್ದರು ಎಂದು ಭಾರತೀಯ ವಿದೇಶಾಂಗ ಸಚಿವಾಲಯ ವಕ್ತಾರ ರವೀಶ್ ಕುಮಾರ್ ಸ್ಪಷ್ಟಪಡಿಸಿದ್ದಾರೆ. 
ಸ್ವತಂತ್ರ ದಿನದಂದು ಉಭಯ ಸೈನಿಕರು ಪರಸ್ಪರರ ಮೇಲೆ ಕಲ್ಲೆಸೆದುಕೊಂಡು ಅದರಲ್ಲಿ ಕೆಲವು ಸೈನಿಕರು ಗಾಯಗೊಂಡಿದ್ದಾರೆ ಎಂದು ಕೆಲ ಮಾಧ್ಯಮಗಳು ವರದಿ ಮಾಡಿದ್ದವು. ಈ ಸಂಬಂಧ ಇಂದು ಪ್ರತಿಕ್ರಿಯಿಸಿರುವ ರವೀಶ್ ಕುಮಾರ್ ಅವರು ಅಂದು ಉಭಯ ಸೈನಿಕರ ನಡುವೆ ಜಟಾಪಟಿ ನಡೆದಿರುವುದು ಸತ್ಯ ಎಂದು ಹೇಳಿದ್ದಾರೆ. 
ಪ್ಯಾಂಗಾಂಗ್ ಸರೋವರದ ಬಳಿಯ 'ಫಿಂಗರ್ 4" ಹಾಗೂ 'ಫಿಂಗರ್ 5' ಭೂಭಾಗದಲ್ಲಿ ಆಗಸ್ಟ್ 15ರ ಬೆಳಗ್ಗೆ 6 ರಿಂದ 9ರವರೆಗೆ ವಾಸ್ತವ ಗಡಿ ರೇಖೆ (ಎಲ್ಎಸಿ) ದಾಟಿ ಬರಲು ಚೀನಾ ಸೈನಿಕರು 2 ಬಾರಿ ಯತ್ನಿಸಿದ್ದರು. ಈ ವೇಳೆ ಭಾರತೀಯ ಸೇನೆ ಮಾನವ ತಡೆಗೋಡೆ ನಿರ್ಮಿಸಿ ಅವರನ್ನು ತಡೆಯಲೆತ್ನಿಸಿದ್ದರು. ಈ ವೇಳೆ ಚೀನೀ ಸೈನಿಕರು ಭಾರತೀಯ ಯೋಧರ ಮೇಲೆ ಕಲ್ಲು ತೂರಾಟ ಕೂಡ ನಡೆಸಿದ್ದಾರೆ ಎಂದು ಹೇಳಿದ್ದಾರೆ. 
ಇಂತಹ ಘಟನೆಗಳಿಂದ ಗಡಿ ಭಾಗದಲ್ಲಿ ಶಾಂತಿ ಸ್ಥಾಪನೆ ಸಾಧ್ಯವಿಲ್ಲ. ಜತೆಗೆ ಅಂತಹ ಘಟನೆಗಳು ನಡೆಸಲು ಎರಡೂ ಕಡೆ ಆಸಕ್ತಿಯಿಲ್ಲವೆಂದು ನಾವು ಭಾವಿಸುತ್ತೇವೆ ಎಂದು ರವೀಶ್ ಕುಮಾರ್ ಹೇಳಿದ್ದಾರೆ. 
ಚೀನಾ ಯೋಧರು ಕಲ್ಲು ತೂರಾಟ ನಡೆಸಿದ್ದಾರೆ ಎಂದು ಮಾಧ್ಯಮಗಳು ಆಗಸ್ಟ್ 16ರಂದು ವರದಿ ಮಾಡಿದ್ದು ಈ ಸಂಬಂಧ ಪ್ರತಿಕ್ರಿಯಿಸಿದ್ದ ಚೀನಾ ವಿದೇಶಾಂಗ ಸಚಿವಾಲಯದ ವಕ್ತಾರ ಹು ಶುನ್ಯಾಂಗ್ ಈ ಬಗ್ಗೆ ನಮಗೇನೂ ಮಾಹಿತಿ ಇಲ್ಲ. ಗಡಿಯಲ್ಲಿನ ಚೀನೀ ಪಡೆಗಳು ಶಾಂತಿ ಕಾಯ್ದುಕೊಳ್ಳುವುದಕ್ಕೆ ಬದ್ಧವಾಗಿದೆ ಎಂದು ಹೇಳಿತ್ತು. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com