ಲಖನೌ: ಉತ್ತರ ಪ್ರದೇಶ ವಿಧಾನಸಭೆಗೆ ಸೋಮವಾರ ನಡೆದ ಐದನೇ ಹಂತದ ಚುನಾವಣೆಯಲ್ಲಿ ಸಂಜೆ ಐದು ಗಂಟೆಯವರೆಗೆ ಶೇ.57.36ರಷ್ಟು ಮತದಾನವಾಗಿದೆ.
ರಾಜ್ಯದ 11 ಜಿಲ್ಲೆಗಳ 51 ವಿಧಾಸಭೆ ಕ್ಷೇತ್ರಗಳಲ್ಲಿ ಇಂದು ಬೆಳಗ್ಗೆ 7ಗಂಟೆಯಿಂದ ಸಂಜೆ 5 ಗಂಟೆಯವರೆಗೆ ಶಾಂತಿಯುತ ಮಾತದಾನ ನಡೆದಿದ್ದು, ಇದುವರೆಗೆ ಶೇ.57.36ರಷ್ಟು ಮತದಾನವಾಗಿದೆ. ಇನ್ನು ಕೆಲವು ಕಡೆ ಜನ ಕ್ಯೂನಲ್ಲಿ ನಿಂತಿರುವುದರಿಂದ ಮತದಾನ ಹೆಚ್ಚಳವಾಗಬಹುದು ಎಂದು ಉತ್ತರ ಪ್ರದೇಶ ಚುನಾವಣಾ ಅಧಿಕಾರಿ ಟಿ.ವೆಂಕಟೇಶ್ ಅವರು ಹೇಳಿದ್ದಾರೆ.
ಈ ಹಿಂದೆ ನಡೆದ ನಾಲ್ಕು ಹಂತದ ಚುನಾವಣೆಯಲ್ಲಿ ಶೇ.64, ಶೇ.65, ಶೇ.61.16 ಹಾಗೂ ಶೇ.61ರಷ್ಟು ಮತದಾನವಾಗಿತ್ತು.
ಅಮೆಥಿ, ಸುಲ್ತಾನಪುರ, ಫೈಜಾಬಾದ್, ಬಾರಾಬಂಕಿ ಬಹರೈಚ್, ಬಸ್ತಿ, ಗೊಂದಾ, ಸಿದ್ಧಾರ್ಥನಗರ್, ಸಂತ್ ಕಬೀರ್ ನಗರ್, ಶ್ರವಸ್ತಿ ಸೇರಿದಂತೆ 51 ಕ್ಷೇತ್ರಗಳ 617 ಅಭ್ಯರ್ಥಿಗಳ ಭವಿಷ್ಯ ಇಂದು ಮತಪೆಟ್ಟಿಗೆಯಲ್ಲಿ ಭದ್ರವಾಗಿದೆ.