ನೋಟು ಅಮಾನ್ಯ ನಿರ್ಧಾರ ಮೋದಿಯವರ ದಿಟ್ಟತವನ್ನು ತೋರುತ್ತದೆ: ಫ್ರಾನ್ಸ್

ಭಾರತದಲ್ಲಿ ಇತ್ತೀಚೆಗಷ್ಟೇ 500, 1000 ರೂ ಮುಖಬೆಲೆಯ ನೋಟುಗಳನ್ನು ಅಮಾನ್ಯಗೊಳಿಸಿದ ನಿರ್ಧಾರದ ಬಗ್ಗೆ ಫ್ರಾನ್ಸ್ ಮೆಚ್ಚುಗೆ ವ್ಯಕ್ತಪಡಿಸಿದ್ದು, ಪ್ರಧಾನಿ ನರೇಂದ್ರ ಮೋದಿ ಅವರ ದಿಟ್ಟತನವನ್ನು ತೋರುತ್ತದೆ ಎಂದಿದೆ.
ಫ್ರಾನ್ಸ್ ಸಚಿವ
ಫ್ರಾನ್ಸ್ ಸಚಿವ
Updated on: 
ನವದೆಹಲಿ: ಭಾರತದಲ್ಲಿ ಇತ್ತೀಚೆಗಷ್ಟೇ 500, 1000 ರೂ ಮುಖಬೆಲೆಯ ನೋಟುಗಳನ್ನು ಅಮಾನ್ಯಗೊಳಿಸಿದ ನಿರ್ಧಾರದ ಬಗ್ಗೆ ಫ್ರಾನ್ಸ್ ಮೆಚ್ಚುಗೆ ವ್ಯಕ್ತಪಡಿಸಿದ್ದು, ಪ್ರಧಾನಿ ನರೇಂದ್ರ ಮೋದಿ ಅವರ ದಿಟ್ಟತನವನ್ನು ತೋರುತ್ತದೆ ಎಂದಿದೆ. 
ನೋಟು ಅಮಾನ್ಯ ನಿರ್ಧಾರವನ್ನಷ್ಟೇ ಅಲ್ಲದೇ, ಭಾರತದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ವಿದೇಶಗಳಿಂದ ಹೂಡಿಕೆ ಆಕರ್ಷಿಸಲು ಕೈಗೊಂಡಿರುವ ಅನೇಕ ಸುಧಾರಣಾ ಕ್ರಮಗಳನ್ನೂ ಸಹ ಜಿಯನ್ ಮಾರ್ಕ್ ಅಯ್ರೌಲ್ಟ್ ಸ್ವಾಗತಿಸಿದ್ದು, ಸರಿಯಾದ ಪಥದಲ್ಲಿ ಸಾಗುತ್ತಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. 
ಪಿಟಿಐ ಗೆ ನೀಡಿರುವ ಸಂದರ್ಶನದಲ್ಲಿ ಮಾತನಾಡಿರುವ ಫ್ರಾನ್ಸ್ ಸಚಿವ ಮೇಕ್ ಇನ್ ಇಂಡಿಯಾ ಗೆ ಪ್ರಮುಖ ಪಾಲುದಾರನಾಗಿರುವುದಕ್ಕೆ ಫ್ರಾನ್ಸ್ ಬಯಸುತ್ತದೆ ಎಂದಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಅವರು ಕಪ್ಪು ಹಣ, ಭ್ರಷ್ಟಾಚಾರದ ವಿರುದ್ಧ ಕೈಗೊಂಡಿರುವ ಕ್ರಮಗಳಿಂದ ಸಂತಸಗೊಂಡಿರುವುದಾಗಿ ಹೇಳಿದ್ದಾರೆ. 
ಭಾರತದ ಆರ್ಥಿಕತೆ ಸದೃಢವಾಗಿದ್ದು, ಹೂಡಿಕೆದಾರರಲ್ಲಿ ಸಂಪೂರ್ಣ ವಿಶ್ವಾಸವಿದೆ. ಆರ್ಥಿಕ ಅಭಿವೃದ್ಧಿಗಾಗಿ ಕೈಗೊಂಡಿರುವ ಸರ್ಕಾರದ ನಿರ್ಧಾರಗಳ ಬಗ್ಗೆ ನಂಬಿಕೆ ಹೊಂದಿರುವುದಾಗಿ ಭಾರತ ಪ್ರವಾಸ ಕೈಗೊಂಡಿದ್ದ ಫ್ರಾನ್ಸ್ ಸಚಿವ ಜಿಯನ್ ಮಾರ್ಕ್ ಅಯ್ರೌಲ್ಟ್ ಹೇಳಿದ್ದಾರೆ.  

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com