ಚುನಾವಣಾ ಅಭ್ಯರ್ಥಿಗಳ ಆದಾಯದ ಮೂಲ ಕುರಿತ ಅರ್ಜಿ ವಿಚಾರಣೆಗೆ ನಿರಾಕರಿಸಿದ ಸುಪ್ರೀಂ

ಸಂಸತ್ತು ಮತ್ತು ವಿಧಾನ ಸಭೆ ಕ್ಷೇತ್ರಗಳ ಚುನಾವಣೆಗೆ ಸ್ಪರ್ಧಿಸುವ ಅಭ್ಯರ್ಥಿಗಳ ಆದಾಯದ ಮೂಲವನ್ನು...
ಸುಪ್ರೀಂ ಕೋರ್ಟ್
ಸುಪ್ರೀಂ ಕೋರ್ಟ್
Updated on: 
ನವದೆಹಲಿ:ಸಂಸತ್ತು ಮತ್ತು ವಿಧಾನ ಸಭೆ ಕ್ಷೇತ್ರಗಳ  ಚುನಾವಣೆಗೆ ಸ್ಪರ್ಧಿಸುವ ಅಭ್ಯರ್ಥಿಗಳ ಆದಾಯದ ಮೂಲವನ್ನು ಬಹಿರಂಗಪಡಿಸಬೇಕು ಎಂದು ಲಕ್ನೋ ಮೂಲದ ಸರ್ಕಾರೇತರ ಸಂಸ್ಥೆ ಲೋಕ್ ಪ್ರಹರಿ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಲು ಸುಪ್ರೀಂ ಕೋರ್ಟ್ ಸೋಮವಾರ ನಿರಾಕರಿಸಿದೆ.
ಅರ್ಜಿದಾರರು ಹೈಕೋರ್ಟ್ ನಲ್ಲಿ ಅರ್ಜಿ ಹಾಕುವಂತೆ ಸುಪ್ರೀಂ ಕೋರ್ಟ್ ಹೇಳಿದೆ.
ಸಂಸದರು ಮತ್ತು ಶಾಸಕರ ಆದಾಯ ಕೆಲವೇ ವರ್ಷಗಳಲ್ಲಿ ಗಣನೀಯವಾಗಿ ಏರಿಕೆಯಾಗುತ್ತಿದೆ ಎಂದು ಅರ್ಜಿದಾರರು ಹೇಳಿದ್ದು, ನಾಲ್ವರು ಲೋಕಸಭಾ ಸಂಸದರ ಆದಾಯ ಶೇಕಡಾ 1,200ರಷ್ಟು ಹೆಚ್ಚಳವಾಗಿದೆ. 22 ಲೋಕಸಭಾ ಸದಸ್ಯರ ಆಸ್ತಿ ಶೇಕಡಾ 500ರಷ್ಟು ಏರಿಕೆಯಾಗಿದೆ ಎಂದು ಹೇಳಿದ್ದಾರೆ.
ಚುನಾವಣೆಗೆ ನಿಂತ ಅಭ್ಯರ್ಥಿಗಳು ತಮ್ಮ ಆದಾಯವನ್ನು ಬಹಿರಂಗಪಡಿಸಬೇಕೆಂದು ಸುಪ್ರೀಂ ಕೋರ್ಟ್ ಕಳೆದ ವರ್ಷ ಜುಲೈ 19ರಂದು ಕೇಂದ್ರ ಮತ್ತು ಚುನಾವಣಾ ಆಯೋಗಗಳಿಗೆ ಲೋಕ್ ಪ್ರಹರಿ ಸಲ್ಲಿಸಿದ ಮನವಿ ಮೇರೆಗೆ ನೊಟೀಸ್ ಜಾರಿ ಮಾಡಿತ್ತು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com