ಡಾರ್ಜಿಲಿಂಗ್: ಪೊಲೀಸರ ಗುಂಡಿಗೆ ಗೋರ್ಖಾಲ್ಯಾಂಡ್ ಹೋರಾಟಗಾರ ಬಲಿ, ಜೆಎಂಎಂ ಆರೋಪ

ಡಾರ್ಜಿಲಿಂಗ್ ನ ಹೊರವಲಯದ ಸೋನಾಡಾದಲ್ಲಿ ಗೋರ್ಖಾಲ್ಯಾಂಡ್ ಹೋರಾಟದ ಬೆಂಬಲಿಗನ ಶವ ಪತ್ತೆಯಾಗಿದ್ದು...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
ಸೋನಾಡಾ(ಡಾರ್ಜಿಲಿಂಗ್):  ಡಾರ್ಜಿಲಿಂಗ್ ನ ಹೊರವಲಯದ ಸೋನಾಡಾದಲ್ಲಿ ಗೋರ್ಖಾಲ್ಯಾಂಡ್ ಹೋರಾಟದ ಬೆಂಬಲಿಗನ ಶವ ಪತ್ತೆಯಾಗಿದ್ದು, ಪೊಲೀಸರೇ ಆತನನ್ನು ಕೊಂದಿದ್ದಾರೆ ಎಂದು ಗೊರ್ಖಾ ಜನಮುಕ್ತಿ ಮೋರ್ಚಾ ಆರೋಪಿಸಿದೆ. 
ಗೋರ್ಖಾಲ್ಯಾಂಡ್ ಬೆಂಬಲಿಗ ತಶಿ ಭೂಟಿಯಾ ನನ್ನ ಪೊಲೀಸರು ಗುಂಡಿಕ್ಕಿ ಹತ್ಯೆ ಮಾಡಿದ್ದಾರೆ ಎಂದು ಜಿಎನ್ ಎಲ್ ಎಫ್ ವಕ್ತಾರ ನೀರಜ್ ಜಿಂಬಾ ಆರೋಪಿಸಿದ್ದಾರೆ. ಆತನ ಕಿವಿ ಮತ್ತು ಹಣೆಯ ಭಾಗದಲ್ಲಿ ಬುಲೆಟ್ ಹೊಕ್ಕಿವೆ ಎಂದು ದೂರಿದ್ದಾರೆ. 
ಪ್ರತ್ಯೇಕ ಗೋರ್ಖಾಲ್ಯಾಂಡ್‌ ರಾಜ್ಯ ರಚನೆಯನ್ನು ಆಗ್ರಹಿಸಿ ನಡೆಯುತ್ತಿರುವ ಅನಿರ್ದಿಷ್ಟಾವಧಿ ಬಂದ್‌ ಮುಷ್ಕರ ಆಂದೋಲನ ಇಂದು 24ನೇ ದಿನವನ್ನು ಪ್ರವೇಶಿಸಿದೆ. ಅಂತೆಯೇ ಡಾರ್ಜಿಲಿಂಗ್‌ನಲ್ಲಿನ ಬಿಕ್ಕಟ್ಟು, ಉದ್ವಿಗ್ನತೆ ತೀವ್ರಗೊಂಡಿದೆ.
ಆದರೆ  ಈ ಆರೋಪವನ್ನು ಅಲ್ಲಗಳೆದಿರುವ ಪೊಲೀಸರು ಯಾವುದೇ ಗೋಲಿಬಾರ್‌ ನಡೆದಿಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com