ಗ್ರೆನೇಡ್ ಎಸೆದು ಬ್ಯಾಂಕ್ ದರೋಡೆ ಮಾಡಿ 3 ಲಕ್ಷ ದೋಚಿದ ಖದೀಮರು; ಭೀಕರ ದೃಶ್ಯ ಸಿಸಿಟಿವಿಯಲ್ಲಿ ಸೆರೆ

ಉತ್ತರಪ್ರದೇಶದ ಬ್ಯಾಂಕ್ ವೊಂದರಲ್ಲಿ ಇಬ್ಬರು ದರೋಡೆಕೋರರು ಗ್ರೈನೇಡ್ ಎಸೆದು ಬ್ಯಾಂಕ್ ದರೋಡೆ ಮಾಡಿರುವ ಪ್ರಕರಣ ವರದಿಯಾಗಿದೆ...
ಗ್ರೈನೇಡ್ ದಾಳಿ
ಗ್ರೈನೇಡ್ ದಾಳಿ
ಜಲೌನ್: ಉತ್ತರಪ್ರದೇಶದ ಬ್ಯಾಂಕ್ ವೊಂದರಲ್ಲಿ ಇಬ್ಬರು ದರೋಡೆಕೋರರು ಗ್ರೈನೇಡ್ ಎಸೆದು ಬ್ಯಾಂಕ್ ದರೋಡೆ ಮಾಡಿರುವ ಪ್ರಕರಣ ವರದಿಯಾಗಿದೆ. 
ಗ್ರೈನೇಡ್ ಸ್ಫೋಟಗೊಳ್ಳುತ್ತಿದ್ದಂತೆ ಹೆದರಿದ ಬ್ಯಾಂಕ್ ಸಿಬ್ಬಂದಿ ದಿಕ್ಕಾಪಾಲಾಗಿ ಓಡಿ ಹೋಗಿದ್ದಾರೆ. ಈ ವೇಳೆ ದುಷ್ಕರ್ಮಿಗಳು ಮೂರು ಲಕ್ಷ ರುಪಾಯಿ ದೋಚಿ ಪರಾರಿಯಾಗಿದ್ದಾರೆ. ಈ ದೃಶ್ಯಗಳು ಸಿಸಿಟಿವಿಯಲ್ಲಿ ಸೆರೆಯಾಗಿದೆ. 
ಸಣ್ಣ ಪ್ರಮಾಣದ ಗ್ರೈನೇಡ್ ಸ್ಫೋಟಿಸಿದ್ದರಿಂದ ಬ್ಯಾಂಕ್ ಗೆ ಹಾನಿಯಾಗಿದ್ದು ಯಾವುದೇ ಪ್ರಾಣ ಹಾನಿ ಸಂಭವಿಸಿಲ್ಲ. ಸ್ಥಳಕ್ಕೆ ಆಗಮಿಸಿದ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಆರೋಪಿಗಳಿಗಾಗಿ ಬಲೆ ಬೀಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com