ನವದೆಹಲಿಯಲ್ಲಿ ಇಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕೇಜ್ರಿವಾಲ್, ಮತಗಳ ಎಣಿಕೆ ವೇಳೆ ಅನ್ಯಾಯ ನಡೆದಿದೆ ಎಂದು ಆರೋಪಿಸಿದ್ದಾರೆ. ಪಂಜಾಬ್ ನಲ್ಲಿ ಇವಿಎಂ ಯಂತ್ರಗಳು ದೋಷಪೂರಿತವಾಗಿವೆ ಎಂದು ದೂರಿರುವ ಅವರು ಶೇ.25 ರಿಂದ 30 ರಷ್ಟು ವೋಟುಗಳನ್ನು ಅಕಾಲಿದಳ-ಬಿಜೆಪಿಗಳಿಗೆ ವರ್ಗಾವಣೆ ಮಾಡಲಾಗಿದೆ ಎಂದು ಆಪಾದಿಸಿದ್ದಾರೆ.