ಹಿಜ್ಬುಲ್ ಮುಜ್ಹಾಹಿದ್ದೀನ್ ಉಗ್ರ ಸಂಘಟನೆ ಸೇರಿದ ಸೈನಿಕ: ಜಮ್ಮು ಕಾಶ್ಮೀರ ಪೊಲೀಸರ ಹೇಳಿಕೆ

ಈ ತಿಂಗಳ ಆರಂಭದಿಂದಲೂ ದಕ್ಷಿಣ ಕಾಶ್ಮೀರದಿಂದ ನಾಪತ್ತೆಯಾಗಿದ್ದ ಸೈನಿಕರೊಬ್ಬರು ಹಿಜ್ಬುಲ್ ಮುಜ್ಹಾಹಿದ್ದೀನ್ ಉಗ್ರ ಸಂಘಟನೆ ಸೇರಿದ್ದಾರೆ ಎಂದು ಪೊಲೀಸ್ ಅಧಿಕಾರಿಗಳು ಇಂದು ಹೇಳಿದ್ದಾರೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಜಮ್ಮು-ಕಾಶ್ಮೀರ: ಈ ತಿಂಗಳ ಆರಂಭದಿಂದಲೂ ದಕ್ಷಿಣ ಕಾಶ್ಮೀರದಿಂದ ನಾಪತ್ತೆಯಾಗಿದ್ದ ಸೈನಿಕರೊಬ್ಬರು  ಹಿಜ್ಬುಲ್ ಮುಜ್ಹಾಹಿದ್ದೀನ್  ಉಗ್ರ ಸಂಘಟನೆ ಸೇರಿದ್ದಾರೆ ಎಂದು ಪೊಲೀಸ್ ಅಧಿಕಾರಿಗಳು ಇಂದು ಹೇಳಿದ್ದಾರೆ.

ಇದ್ರೇಶ್ ಮಿರ್  ಉಗ್ರ ಸಂಘಟನೆ ಸೇರಿದ ಸೈನಿಕ. ಈತನನ್ನು ಜಮ್ಮು-ಕಾಶ್ಮೀರದ ಲಘು ಕಾಲಾಳುಪಡೆಗೆ ನಿನ್ನೆಯಷ್ಟೇ ನಿಯೋಜಿಸಲಾಗಿತ್ತು. ಸೋಪಿಯಾನ್ ನಿಂದ ನಾಪತ್ತೆಯಾಗಿದ್ದ ಮೀರ್,  ಇಬ್ಬರು ಸ್ಥಳೀಯ ನಿವಾಸಿಯರೊಂದಿಗೆ ಉಗ್ರ ಸಂಘಟನೆ ಸೇರಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

ಇದ್ರೇಶ್ ಮಿರ್ ನಾಪತ್ತೆಯಾಗಿದ್ದಾನೆ, ಆದರೆ, ಉಗ್ರ ಸಂಘಟನೆಗೆ ಸೇರಿದ್ದಾನೆ ಎಂಬ ಬಗ್ಗೆ ಸ್ಪಷ್ಟನೆ ದೊರೆತಿಲ್ಲ.  ಮೀರ್ ಅವರನ್ನು ಜಾರ್ಖಂಡ್ ಗೆ  ನಿಯೋಜಿಸಲಾಗಿತ್ತು, ಇದರಿಂದ ಅಸಂತುಷ್ಟಗೊಂಡಿದ್ದ ಎಂದು ಪೊಲೀಸರು ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com