ಅಮೆರಿಕಾ ಸೇನೆಯ ಅಪಾಚಿ ಚಾಪರ್ ಗಳಿಗೆ ಭಾರತದಿಂದ ಬಿಡಿಭಾಗಗಳ ಪೂರೈಕೆ

ಟಾಟಾ ಅಡ್ವಾನ್ಸ್ಡ್ ಸಿಸ್ಟಮ್ಸ್ ಹಾಗೂ ಬೋಯಿಂಗ್ ನ ಜಂಟಿ ಉದ್ಯಮ ಟಾಟಾ ಬೋಯಿಂಗ್ ಏರೋಸ್ಪೇಸ್,ಎಹೆಚ್ -264 ಅಪಾಚೆ ಹೆಲಿಕಾಪ್ಟರ್ ಗಾಗಿ ವಿಮಾನದ ಬಿಡಿ ಭಾಗಗಳನ್ನು...
ಹೈದರಾಬಾದ್: ಅಪಾಚಿ ಚಾಪರ್ ಬಿಡಿಭಾಗಗಳ ಉತ್ಪಾದನಾ ಘಟಕ ಉದ್ಘಾಟನೆ
ಹೈದರಾಬಾದ್: ಅಪಾಚಿ ಚಾಪರ್ ಬಿಡಿಭಾಗಗಳ ಉತ್ಪಾದನಾ ಘಟಕ ಉದ್ಘಾಟನೆ
Updated on: 
ಹೈದರಾಬಾದ್: ಟಾಟಾ ಅಡ್ವಾನ್ಸ್ಡ್ ಸಿಸ್ಟಮ್ಸ್ ಹಾಗೂ ಬೋಯಿಂಗ್ ನ ಜಂಟಿ ಉದ್ಯಮ ಟಾಟಾ ಬೋಯಿಂಗ್ ಏರೋಸ್ಪೇಸ್,ಎಹೆಚ್ -264 ಅಪಾಚೆ ಹೆಲಿಕಾಪ್ಟರ್ ಗಾಗಿ ವಿಮಾನದ ಬಿಡಿ ಭಾಗಗಳನ್ನು ಉತ್ಪಾದಿಸುವ ಘಟಕಕ್ಕೆ ಹೈದರಾಬಾದ್ ನಲ್ಲಿ ಚಾಲನೆ ನೀಡಿದೆ.
ಕೇಂದ್ರ ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ಹಾಗೂ ತೆಲಂಗಾಣದ ಕೈಗಾರಿಕೆ ಹಾಗೂ ಐಟಿ ಸಚಿವ ಕೆಟಿ ರಾಮರಾವ್ ಈ ಘಟಕ ಉದ್ಘಾಟನೆ ನೆರವೇರಿಸಿದ್ದಾರೆ.ಇದೇ ಘಟಕದಲ್ಲಿ ವಿಮಾನಕ್ಕೆ ಸಂಬಂಧಿಸಿ ವರ್ಟಿಕಲ್ ಸ್ಫೇರ್ ಬಾಕ್ಸ್ ಹಾಗೂ ಸೆಕೆಂಡರಿ ಸ್ಟ್ರಕ್ಚರ್ ಗಳನ್ನು ತಯಾರಿಸಲಾಗುತ್ತದೆ. ಈ ವರ್ಷಾಂತದ ವೇಳೆಗೆ ಘಟಕದಲ್ಲಿ ತಯಾರಾದ  ಮೊದಲ ಹಂತದ ಉತ್ಪಾದಕ ವಸ್ತುಗಳು ಮಾರುಕಟ್ಟೆಗೆ ಬಿಡುಗಡೆಯಾಗುವ ನಿರೀಕ್ಷೆ ಇದೆ.
ಘಟಕವನ್ನು ಉದ್ಘಾಟನೆ ಮಾಡಿ ಮಾತನಾಡಿದ ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್, ರಕ್ಷಣಾ ವಲಯದಲ್ಲಿ ಈ ಪ್ರಮಾಣದ ಹೂಡಿಕೆ ಮಾಡಿದ್ದ ಟಾಟಾ ಬೋಯಿಂಗ್ ಸಂಸ್ಥೆಯನ್ನು ನಾನು ಅಭಿನಂದಿಸುತ್ತೇನೆ ಎಂದರು.
ಇದು ಭಾರತದೊಡನೆ ಬೋಯಿಂಗ್ ಸಂಸ್ಥೆಯ ಸುದೀರ್ಘ ಪಯಣದ ಪ್ರಾರಂಭದ ಹಂತವಾಗಿದೆ ಎಂದು ಬೋಯಿಂಗ್ ಇಂಡಿಯಾ ಅಧ್ಯಕ್ಷ ಪ್ರತ್ಯೂಶ್ ಕುಮಾರ್ ಹೇಳಿದ್ದಾರೆ. "ಇದು ಅಂತರಿಕ್ಷ ಮತ್ತು ರಕ್ಷಣಾ ವ್ಯವಸ್ಥೆಗಳ ಅಭಿವೃದ್ಧಿಯನ್ನು ಸಾಧಿಸುವಲ್ಲಿ ಭವಿಷ್ಯದ ಅವಕಾಶಗಳ ಕಡೆಗೆ ಒಂದು ಪ್ರಮುಖ ಹೆಜ್ಜೆಯೆಂದು ನಾವು ಭಾವಿಸುತ್ತೇವೆ" ಅವರು ಹೇಳಿದ್ದಾರೆ.
ಇದು ಟಿಎಎಸ್ ಎಲ್ ನ ಜತೆಗೆ 2015ರಲ್ಲಿ ಮಾಡಿಕೊಂಡಿದ್ದ ಒಪ್ಪಂದದ ಮೊದಲ ಫಲಶ್ರುತಿಯಾಗಿದೆ. 2016ರಲ್ಲಿ ಪ್ರಾರಂಭಗೊಂಡ  ಈ ಘಟಕದ ನಿರ್ಮಾಣ ಕಾರ್ಯವು ನಿಗದಿತ ಅವಧಿಯೊಳಗೆ ಪೂರ್ಣಗೊಂಡಿದೆ. ಇದರೊಡನೆ ಕೌಶಲ್ಯ ಅಭಿವೃದ್ಧಿ ಉಪಕ್ರಮಗಳ ಮೂಲಕ ಹೆಚ್ಚು ಪರಿಣಿತ ಅಂತರಿಕ್ಷಯಾನ ಪ್ರತಿಭೆಗಳನ್ನು ತಯಾರು ಮಾಡುವುದರಲ್ಲಿ ಬೋಯಿಂಗ್ ಮತ್ತು ಟಿಎಎಸ್ಎಲ್ ಜಂಟಿಯಾಗಿ ಕಾರ್ಯ ನಿರ್ವಹಿಸಲಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com