ನವದೆಹಲಿ: ಭಾರತವನ್ನು ವಿಭಜಿಸಲು ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಪಿತೂರಿ ನಡೆಸಿದ್ದಾರೆ ಎಂದು ಸಣ್ಣ ಮತ್ತು ಮಧ್ಯಮ ಕೈಗಾರಿಕೆ ಸಚಿವ ಗಿರಿರಾಜ್ ಸಿಂಗ್ ಆರೋಪಿಸಿದ್ದಾರೆ,
ದೇಶವನ್ನು ವಿಭಜಿಸಲು ಪಿತೂರಿ ನಡೆಸಲಾಗುತ್ತದೆ. ರಾಹುಲ್ ಗಾಂಧಿ ಮುಸ್ಲಿಂ ಬುದ್ದಿಜೀವಿಗಳು ಜೊತೆ ಸಭೆ ನಡೆಸಿದ ನಂತರ ಅವರಿಂದ ಪ್ರೇರೇಪಣೆ ಗೊಂಡು ದೇಶವನ್ನು ನಾಶ ಮಾಡಲು ರಾಹುಲ್ ಗಾಂದಿ ಪ್ರಯತ್ನಿಸುತ್ತಿದ್ದಾರೆ. ಜೊತೆಗೆ ಅಂಬೇಡ್ಕರ್ ಅವರ ಸಂವಿಧಾನ ನಾಶಗೊಳಿಸಲು ಯತ್ನ ನಡೆ ಯುತ್ತಿದೆ ಎಂದು ದೂರಿದ್ದಾರೆ,
ಇದಕ್ಕಾಗಿ ರಾಹುಲ್ ಜನರ ಕ್ಷಣೆ ಕೇಳಬೇಕು, ಮತ್ತೆ ಈ ರೀತಿಯ ಪ್ರಯತ್ನ ಮಾಡುವುದಿಲ್ಲ ಎಂದು ಭರವಸೆ ನೀಡಬೇಕು, ಮುಸ್ಲಿಮರಿಗೆ ಬೇರೆ ಕಾನೂನು ಮಾಡುವ ಯತ್ನ ಕೈ ಬಿಡಬೇಕು ಎಂದು ಆಗ್ರಹಿಸಿದ್ದಾರೆ.