ಲೋಕಸಭೆಯಲ್ಲಿ ಅವಿಶ್ವಾಸ ನಿರ್ಣಯ ಚರ್ಚೆ ವೇಳೆ ಮೋದಿ ಸರ್ಕಾರದ ವಿರುದ್ಧ ಟೀಕೆ, ಆರೋಪಗಳ ಸುರಿಮಳೆಗೆರೆದ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿಯವರು ಪ್ರಧಾನಮಂತ್ರಿಗಳತ್ತ ತೆರಳಿ ಹಸ್ತಲಾಘವ ನೀಡಿದರು. ನಂತರ ಎದ್ದು ನಿಲ್ಲುವಂತೆ ಕೋರಿದರು. ಮೋದಿ ಒಪ್ಪದಿದ್ದಾಗ ಅವರು ಕುಳಿತಿದ್ದಂತೆಯೇ ದಿಢೀರ್ ತಬ್ಬಿಕೊಂಡರು.
ಬಳಿಕ ಸ್ವಸ್ಥಾನಕ್ಕೆ ಮರಳಿದ ಬಳಿಕ ತಮ್ಮ ಸಹೋದ್ಯೋಗಿಯೊಬ್ಬರತ್ತ ನೋಡಿ ಕಣ್ಣು ಮಿಟುಕಿಸಿದರು. ಈ ನಾಟಕೀಯ ವಿದ್ಯಾಮಾನ ದೇಶದಾದ್ಯಂತ ಭಾರೀ ಚರ್ಚೆಗೆ ಗ್ರಾಸವಾಗಿದೆ.
ರಾತ್ರಿ ಅವಿಶ್ವಾಸ ಗೊತ್ತುವಳಿಗಳಿಗೆ ಉತ್ತರ ನೀಡಿದ ಮೋದಿಯವರು ರಾಹುಲ್ ಅವರನ್ನು ಟೀಕಿಸಿದರು. ಸದಸ್ಯರೊಬ್ಬರು ಅಧಿಕಾರಕ್ಕೆ ಎಷ್ಟು ಹಾತೊರೆಯುತ್ತಿದ್ದಾರೆಂದರೆ, ಗೆಲ್ಲುವ ಮುನ್ನವೇ ನನ್ನನ್ನು ಏಳು...ಏಳು... ಎಂದರು. ಅವರ ಕಣ್ಸನ್ನೆ ಮಕ್ಕಳಾಟ ಇಡೀ ದೇಶವೇ ನೋಡಿದೆ ಎಂದು ವ್ಯಂಗ್ಯವಾಡಿದರು.