ಲಖನೌ: ಉತ್ತರ ಪ್ರದೇಶದ ಲಖೌನನ ಕಕೋರಿಯಲ್ಲಿದ್ದ ಅಕ್ರಮ ಪಟಾಕಿ ಗೋಡೌನ್ ನಲ್ಲಿ ಸೋಮವಾರ ಬಾರಿ ಸ್ಫೋಟ ಸಂಭವಿಸಿದ್ದು, ಇಬ್ಬರು ದಂಪತಿಗಳು ಸಜೀವ ದಹನವಾಗಿದ್ದಾರೆ ಮತ್ತು ಹಲವರು ಗಂಭೀರವಾಗಿ ಗಾಯಗೊಂಡಿದ್ದಾರೆ.
ಜೆಹ್ತಾ ರಸ್ತೆಯಲ್ಲಿರುವ ಮೂರು ಮನೆಗಳಲ್ಲಿ ಬಾರಿ ಸ್ಫೋಟ ಸಂಭವಿಸಿದ್ದು, ಸ್ಫೋಟದ ತೀವ್ರತೆಗೆ ದೇಹ ಚಿದ್ರಚಿದ್ರವಾಗಿವೆ. ಅಲ್ಲದೆ ಅವಶೇಷಗಳಡಿ ಇನ್ನು ಹಲವರು ಸಿಲುಕಿರುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ.
ಇಂದು ಬೆಳಗ್ಗೆ 11 ಗಂಟೆ ಸುಮಾರಿಗೆ ಈ ಸ್ಫೋಟ ಸಂಭವಿಸಿದ್ದು, ಪೊಲೀಸರು, ವಿಧಿ ವಿಜ್ಞಾನ ತಂಡ ಹಾಗೂ ಹಿರಿಯ ಅಧಿಕಾರಿಗಳು ಸ್ಥಳಕ್ಕೆ ತೆರಳಿದ್ದು, ತನಿಖೆ ನಡೆಸುತ್ತಿದ್ದಾರೆ.
ಗೋಡೌನ್ ಸಂಜಯ್ ಲೋಧಿ ಎಂಬುವವರಿಗೆ ಸೇರಿದ್ದು, ಅದನ್ನು ಫರಿದ್ ಪುರದ ನಾಸಿರ್ ಎಂಬುವವರಿಗೆ ಬಾಡಿಗೆಗೆ ನೀಡಿದ್ದರು. ನಾಸಿರ್ ತನ್ನ ಪುತ್ರ ಮುಶೀರ್ ಜತೆ ಸೇರಿ ಅಕ್ರಮವಾಗಿ ಪಟಾಕಿ ಕಾರ್ಖಾನೆ ನಡೆಸುತ್ತಿದ್ದರು ಎಂದು ಹಿರಿಯ ಪೊಲೀಸ್ ಅಧೀಕ್ಷಕ ದೀಪಕ್ ಕುಮಾರ್ ಅವರು ತಿಳಿಸಿದ್ದಾರೆ.