ನವದೆಹಲಿ: ಮುಸ್ಲಿಂ ಯುವಕನ ಮೇಲೆ ಹಲ್ಲೆ ಶೋಚನೀಯ, ಭಾರತ ಜಾತ್ಯತೀತ ರಾಷ್ಟ್ರ ಎಂದು ಮಾಜಿ ಕ್ರಿಕೆಟಿಗ, ಸಂಸದ ಗೌತಮ್ ಗಂಭೀರ್ ತೀವ್ರವಾಗಿ ಖಂಡಿಸಿದ್ದಾರೆ.
ಗುರುಗ್ರಾಮದಲ್ಲಿ ಇತ್ತೀಚೆಗೆ ಮುಸ್ಲಿಂ ಯುವಕರ ಮೇಲೆ ನಡೆಸಿದ್ದ ಹಲ್ಲೆ ಮತ್ತು ಧರ್ಮ ನಿಂದನೆಯನ್ನು ಸಂಸದ ಗೌತಮ್ ಗಂಭೀರ್ ಟ್ವೀಟರ್ ನಲ್ಲಿ ಆಗ್ರಹಿಸಿದ್ದಾರೆ.
ಕಳೆದ ವಾರ ಪ್ರಾರ್ಥನೆ ಮುಗಿಸಿ ಮನೆ ತೆರಳುತ್ತಿದ್ದ 25 ವರ್ಷದ ಮೊಹಮ್ಮದ್ ಬರ್ಕತ್ ಎಂಬ ಮುಸ್ಲಿಂ ಯುವಕನನ್ನು ತಡೆದಿದ್ದ ಕೆಲ ಹಿಂದೂ ಬಲ ಪಂಥೀಯ ಕಾರ್ಯಕರ್ತರು ಬಲವಂತವಾಗಿ ಆತನ ಟೋಪಿ ತೆಗಿಸಿದ್ದು ಅಲ್ಲದೆ ಜೈ ಶ್ರೀರಾಮ್ ಎಂದು ಹೇಳುವಂತೆ ಒತ್ತಾಯಿಸಿದ್ದರು. ಜತೆಗೆ ಹಲ್ಲೆಯನ್ನೂ ನಡೆಸಿದ್ದರೆಂದು ವರದಿಯಾಗಿತ್ತು.
ಈ ಬಗ್ಗೆ ಟ್ವೀಟ್ ಮಾಡಿರುವ ಗಂಭೀರ್ ಗುರುಗ್ರಾಮದಲ್ಲಿ ಮುಸ್ಲಿಂ ಯುವಕನ ಮೇಲೆ ನಡೆದ ದಾಳಿ ಶೋಚನೀಯ. ಘಟನೆಯಲ್ಲಿ ಭಾಗಿಯಾದವರ ವಿರುದ್ದ ಕಾನೂನು ಕ್ರಮ ಕೈಗೊಳ್ಳಬೇಕು. ನಮ್ಮದು ಜಾತ್ಯತೀತ ರಾಷ್ಟ್ರ ಎಂದು ಬರೆದುಕೊಂಡಿದ್ದಾರೆ.
“In Gurugram Muslim man told to remove skullcap,chant Jai Shri Ram”. It is deplorable. Exemplary action needed by Gurugram authorities. We are a secular nation where @Javedakhtarjadu writes “ओ पालन हारे, निर्गुण और न्यारे” & @RakeyshOmMehra gave us d song “अर्ज़ियाँ” in Delhi 6.