ಉತ್ತರ ಪ್ರದೇಶ: ಶಾಲೆಯಲ್ಲಿ 1 ಲೀಟರ್ ಹಾಲನ್ನು 81 ವಿದ್ಯಾರ್ಥಿಗಳಿಗೆ ಹಂಚಿದ ಭೂಪರು!

ಮಕ್ಕಳಿಗೆ ನೀರು ಬೆರೆಸಿದ ಹಾಲು ನೀಡುತ್ತಿರುವುದು ವಿಷಾದನೀಯವಾಗಿದ್ದು, ಇದೀಗ ಇದರ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗುತ್ತಿದೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
Updated on: 

ಸೋನ್ಭದ್ರ : ಉತ್ತರಪ್ರದೇಶದಲ್ಲಿರುವ ಅಭಿವೃದ್ಧಿ ಕಾಣದ ಪ್ರದೇಶಗಳಲ್ಲಿ ಒಂದಾಗಿದೆ. ಜಿಲ್ಲೆಯಲ್ಲಿ ವಾಸವಿರುವ ಬಡ ಕುಟುಂಬಗಳ ಮಕ್ಕಳು ಸರ್ಕಾರಿ ಯೋಜನೆಗಳಲ್ಲಿ ಒಂದಾದ ಬಿಸಿಯೂಟವನ್ನು ನಂಬಿಕೊಂಡು ಬದುಕುತ್ತಿದ್ದಾರೆ . ಆದರೆ ಇಲ್ಲಿ ಮಕ್ಕಳಿಗೆ ನೀರು ಬೆರೆಸಿದ ಹಾಲು ನೀಡುತ್ತಿರುವುದು ವಿಷಾದನೀಯವಾಗಿದ್ದು, ಇದೀಗ ಇದರ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗುತ್ತಿದೆ.

ಅಡುಗೆ ಮಾಡುವವಳು ಒಂದು ದೊಡ್ಡ ಅಲ್ಯೂಮೀನಿಯಂ ಪಾತ್ರೆಯಲ್ಲಿ ನೀರು ಬಿಸಿ ಮಾಡಿ. ಇದೇ ನೀರನ್ನು ನಂತರ 1 ಲೀಟರ್ ಹಾಲಿಗೆ ಮಿಕ್ಸ್ ಮಾಡುತ್ತಾರೆ. ಬಳಿಕ ಹಾಲಿಗಾಗಿ ಸ್ಟೀಲ್ ಗ್ಲಾಸ್ ಹಿಡಿದುಕೊಂಡು ಸಾಲಾಗಿ ನಿಂತು ಕಾಯುತ್ತಿರುವ ಮಕ್ಕಳಿಗೆ ನೀಡುತ್ತಾರೆ. ಒಬ್ಬರಾದ ನಂತರ ಒಬ್ಬರಂತೆ ಮಕ್ಕಳು ಅರ್ಧ ಗ್ಲಾಸ್ ತೆಗೆದುಕೊಂಡು ಕುಡಿಯುತ್ತಾರೆ.

ಸೋನ್ಭದ್ರ ಜಿಲ್ಲೆಯ ಛೋಪಾನ್ ಸರ್ಕಾರಿ ಹಿರಿಯ ಪ್ರಾಥಮಿಕ 171 ಮಂದಿ ವಿದ್ಯಾರ್ಥಿಗಳಿದ್ದಾರೆ. ಇದರಲ್ಲಿ 81 ವಿದ್ಯಾರ್ಥಿಗಳಿಗೆ ಬುಧವಾರ ಹಾಲು ನೀಡಲಾಗುತ್ತಿದೆ. ವಿಡಿಯೋ ವೈರಲ್ ಆಗುತ್ತಿದ್ದಂತೆಯೇ ಎಚ್ಚೆತ್ತುಕೊಂಡ ಜಿಲ್ಲಾಧಿಕಾರಿ, ಕೂಡಲೇ ಆ ಶಾಲೆಗೆ ಹೆಚ್ಚಿನ ಪ್ರಮಾಣದಲ್ಲಿ ಹಾಲು ನೀಡಿದ್ದಾರೆ. ಅಲ್ಲದೆ ಹೆಚ್ಚಿನ ಹಾಲು ಇದ್ದರೂ ಮಕ್ಕಳಿಗೆ ಯಾಕೆ ಪೂರೈಕೆ ಮಾಡಿಲ್ಲ ಎಂಬುದರ ಬಗ್ಗೆ ತನಿಖೆ ನಡೆಸುತ್ತಿರುವುದಾಗಿ ಅವರು ತಿಳಿಸಿದ್ದಾರೆ.

ಈ ಬಗ್ಗೆ ತನಿಖೆ ಕೈಗೊಂಡಿದ್ದೇವೆ. ನಾವು ಪ್ಯಾಕೆಟ್ ಹಾಲು ಬಳಕೆ ಮಾಡುತ್ತಿರುವುದರಿಂದ ಎಮ್ಮೆ ಅಥವಾ ಹಸುವಿನ ಹಾಲೋ ಎಂಬುದರ ಬಗ್ಗೆ ನಮಗೆ ಯಾವುದೇ ಆಧಾರಗಳಿಲ್ಲ. ಆದರೆ ಶಾಲೆಯಲ್ಲಿ ಮಕ್ಕಳಿಗೆ ಸಾಕಾಗುವಷ್ಟು ಹಾಲು ಇತ್ತು. ಹೀಗಾಗಿ ಮತ್ತೆ ಮಕ್ಕಳಿಗೆ ಅದನ್ನು ನೀಡಿದ್ದೇವೆ. ಮೊದಲನೇ ಬಾರಿ ಇಂತಹ ತಪ್ಪಾಗಿದ್ದು, ಗಮನಕ್ಕೆ ಬಂದ ಕೂಡಲೇ ಸರಿಪಡಿಸಿದ್ದೇವೆ ಎಂದು ಬ್ಲಾಕ್ ಶಿಕ್ಷಣ ಅಧಿಕಾರಿ ಮುಕೇಶ್ ಕುಮಾರ್ ತಿಳಿಸಿದ್ದಾರೆ.
 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com