5 ಮಂದಿ ಜೊತೆ ಸೇರಿ ಅಪ್ರಾಪ್ತ ಮಗಳ ಮೇಲೆ ಮದರಸಾ ಶಿಕ್ಷಕನಿಂದ ಅತ್ಯಾಚಾರ: ಮನೆ ಶೋಧ ವೇಳೆ ಬೆಚ್ಚಿಬಿದ್ದ ಪೊಲೀಸರು!

ಮಗಳ ಕಾಮುಕ ದೃಷ್ಟಿಯಿಂದ ನೋಡಿದ ತಂದೆಯೊಬ್ಬ ಇತರ ಐವರ ಜೊತೆ ಸೇರಿ 16 ವರ್ಷದ ಅಪ್ರಾಪ್ರ ಮಗಳ ಮೇಲೆ ಸಾಮೂಹಿಕ ಅತ್ಯಾಚಾರ ನಡೆಸಿದ್ದಾರೆ. 
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
Updated on

ಕಾಸರಗೋಡು(ಕೇರಳ): ಮಗಳ ಕಾಮುಕ ದೃಷ್ಟಿಯಿಂದ ನೋಡಿದ ತಂದೆಯೊಬ್ಬ ಇತರ ಐವರ ಜೊತೆ ಸೇರಿ 16 ವರ್ಷದ ಅಪ್ರಾಪ್ರ ಮಗಳ ಮೇಲೆ ಸಾಮೂಹಿಕ ಅತ್ಯಾಚಾರ ನಡೆಸಿದ್ದಾರೆ. 

ಅತ್ಯಾಚಾರ ಪ್ರಕರಣ ಸಂಬಂಧ ತನಿಖೆ ಕೈಗೊಂಡಿದ್ದ ಕಾಸರಗೋಡಿನ ನೀಲೆಶ್ವರ ಠಾಣೆಯ ಪೊಲೀಸರು ಅತ್ಯಾಚಾರ ಆರೋಪಿ ಮದರಸಾ ಶಿಕ್ಷಕನ ಮನೆಯನ್ನು ಪರಿಶೀಲಿಸಿದಾಗ ಮಾನವ ಭ್ರೂಣ ಪತ್ತೆಯಾಗಿದ್ದು ಪೊಲೀಸರೇ ದಂಗಾಗಿದ್ದಾರೆ. 

ಇನ್ನು ಈ ಬಗ್ಗೆ ತಪ್ಪೊಪ್ಪಿಕೊಂಡಿರುವ ಸಂತ್ರಸ್ತ ಬಾಲಕಿ ತಂದೆ ಮದರಸಾ ಶಿಕ್ಷಕ, ಗರ್ಭ ಧರಿಸಿದ್ದ ಹೆಣ್ಣು ಮಗಳ ಭ್ರೂಣ ಹತ್ಯೆಗೈದು ಅದನ್ನು ಮಣ್ಣಿನಡಿಯಲ್ಲಿ ಹೂತ್ತಿಟ್ಟಿದ್ದೇವು ಎಂದು ಹೇಳಿದ್ದಾರೆ. ಸದ್ಯ ಪತ್ತೆಯಾಗಿರುವ ಭ್ರೂಣವನ್ನು ವಿಧಿವಿಜ್ಞಾನ ಪರೀಕ್ಷೆಗೆ ಕಳುಹಿಸಲಾಗಿದೆ. 

ಸಂತ್ರಸ್ತ ಬಾಲಕಿಯ ಸೋದರ ಮಾವ ಅನುಮಾಗೊಂಡು ಪೊಲೀಸರಿಗೆ ದೂರು ನೀಡಿದ್ದು ಈ ದೂರಿನನ್ವಯ ತನಿಖೆ ಕೈಗೊಂಡಿದ್ದ ಪೊಲೀಸರಿಗೆ ಕಳೆದ ವರ್ಷಗಳಿಂದ ತಂದೆಯೇ ಮಗಳ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿದ್ದಾನೆ ಎಂಬುದು ತಿಳಿದುಬಂದಿದೆ. 

ಸದ್ಯ ಪೋಕ್ಸೊ ಕಾಯ್ದೆ, ಬಾಲಾಪರಾಧಿ ನ್ಯಾಯ ಕಾಯ್ದೆಯಡಿ 50 ವರ್ಷದ ಮದರಸಾ ಶಿಕ್ಷಕನ ವಿರುದ್ಧ ಪ್ರಕರಣ ದಾಖಲಿಸಾಗಿದ್ದು ಸಾಮೂಹಿಕ ಅತ್ಯಾಚಾರ ನಡೆಸಿದ್ದ ಆರೋಪ ಸಂಬಂಧ ಮೊಹಮ್ಮದ್ ರಿಯಾಸ್, ಮೊಹಮ್ಮದ್ ಶರೀಷ್, ಅಹ್ಮದ್, ಇಜಾಸ್ ಮತ್ತು ಮಹಮ್ಮದ್ ಅಲಿಯನ್ನು ಪೊಲೀಸರು ಬಂಧಿಸಿದ್ದಾರೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com