ಉತ್ತರಾಯಣ: ಗಾಳಿಪಟ ಹಾರಿಸಲು ಅಮಿತ್ ಶಾ ಸಜ್ಜು

ಉತ್ತರಾಯಣ ಪುಣ್ಯಕಾಲ ಆರಂಭದ ಹಿನ್ನೆಲೆಯಲ್ಲಿ ಕೇಂದ್ರ ಗೃಹ ಸಚಿವ ಮತ್ತು ಬಿಜೆಪಿ ಅಧ್ಯಕ್ಷ ಅಮಿತ್ ಶಾ ಅವರು ಬಂಧು ಬಾಂಧವರು, ಗೆಳೆಯರ ಜತೆ ಕಾಲ ಕಳೆಯಲು ತವರು ರಾಜ್ಯ ಗುಜರಾತ್ ಗೆ ಆಗಮಿಸಿದ್ದಾರೆ.
ಉತ್ತರಾಯಣ: ಗಾಳಿಪಟ ಹಾರಿಸಲು ಅಮಿತ್ ಶಾ ಸಜ್ಜು
ಉತ್ತರಾಯಣ: ಗಾಳಿಪಟ ಹಾರಿಸಲು ಅಮಿತ್ ಶಾ ಸಜ್ಜು
Updated on

ಅಹಮದಾಬಾದ್: ಉತ್ತರಾಯಣ ಪುಣ್ಯಕಾಲ ಆರಂಭದ ಹಿನ್ನೆಲೆಯಲ್ಲಿ ಕೇಂದ್ರ ಗೃಹ ಸಚಿವ ಮತ್ತು ಬಿಜೆಪಿ ಅಧ್ಯಕ್ಷ ಅಮಿತ್ ಶಾ ಅವರು ಬಂಧು ಬಾಂಧವರು, ಗೆಳೆಯರ ಜತೆ ಕಾಲ ಕಳೆಯಲು ತವರು ರಾಜ್ಯ ಗುಜರಾತ್ ಗೆ ಆಗಮಿಸಿದ್ದಾರೆ.

ಈ ಸಂದರ್ಭದಲ್ಲಿ ಪ್ರತಿ ವರ್ಷದಂತೆ ಈ ಬಾರಿಯೂ ಅಮಿತ್ ಶಾ ಗಾಳಿಪಟ ಹಾರಿಸಲಿದ್ದಾರೆ. 

ತಮ್ಮ ಲೋಕಸಭಾ ಕ್ಷೇತ್ರದ ಗಾಂಧಿನಗರದ ವ್ಯಾಪ್ತಿಗೆ ಬರುವ ವೆಜಲ್ ಪುರ ವಿಧಾನಸಭಾ ವಿಭಾಗದ ಆನಂದಪುರ ಪ್ರದೇಶದ ಕಟ್ಟಡದ ಮೇಲ್ಛಾವಣಿಯಲ್ಲಿ ನಿಂತು ಅಮಿತ್ ಶಾ ಗಾಳಿಪಟವನ್ನು ಹಾರಿಸುವ ಸಾಧ್ಯತೆಯಿದೆ ಎಂದು ಪಕ್ಷದ ಮೂಲಗಳು ತಿಳಿಸಿವೆ. ಶಾ ಅವರು ಜನವರಿ 15 ರಂದು ನಡೆಯಲಿರುವ ಬಿಜೆಪಿ ನಾಯಕರ ಸಭೆಯಲ್ಲಿ ಭಾಗವಹಿಸಲಿದ್ದಾರೆ. ಹಾಗೂ  ರಾಜಧಾನಿಯಲ್ಲಿನ ಮಹಾತ್ಮ ಮಂದಿರದಲ್ಲಿ ಕೌಶಲ್ಯ ವಿಶ್ವವಿದ್ಯಾಲಯದ ಉದ್ಘಾಟನಾ ಕಾರ್ಯಕ್ರಮದಲ್ಲೂ ಭಾಗವಹಿಸಲಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com