'ಮಹಾ' ಮೋಸ..: ಬೋಳು ತಲೆ ಮುಚ್ಚಿಟ್ಟ ಗಂಡನ ವಿರುದ್ಧ ಪತ್ನಿಯಿಂದಲೇ ದೂರು!

ತನ್ನ ಬೋಳು ತಲೆಯ ವಿಚಾರವನ್ನು ಮುಚ್ಚಿಟ್ಟ ವಿಚಾರಕ್ಕೆ ಸಂಬಂಧಿಸಿದಂತೆ ಪತ್ನಿಯೊಬ್ಬಳು ಪೊಲೀಸ್ ಠಾಣೆ ಮೆಟ್ಟಿಲೇರಿರುವ ಘಟನೆ ಮಹಾರಾಷ್ಟ್ರದಲ್ಲಿ ನಡೆದಿದೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
Updated on

ಥಾಣೆ: ತನ್ನ ಬೋಳು ತಲೆಯ ವಿಚಾರವನ್ನು ಮುಚ್ಚಿಟ್ಟ ವಿಚಾರಕ್ಕೆ ಸಂಬಂಧಿಸಿದಂತೆ ಪತ್ನಿಯೊಬ್ಬಳು ಪೊಲೀಸ್ ಠಾಣೆ ಮೆಟ್ಟಿಲೇರಿರುವ ಘಟನೆ ಮಹಾರಾಷ್ಟ್ರದಲ್ಲಿ ನಡೆದಿದೆ.

ಮಹಾರಾಷ್ಟ್ರದ ಥಾಣೆ ಗ್ರಾಮೀಣ ನಯಾ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದ್ದು ವೃತ್ತಿಯಲ್ಲಿ ಚಾರ್ಟೆಡ್ ಅಕೌಂಟೆಂಟ್ ಆಗಿರುವ 27 ವರ್ಷದ ಪತ್ನಿ ತನ್ನ ಪತಿಯ ವಿರುದ್ಧ ವಂಚನೆ ಮಾಡಿದ ಆರೋಪಕ್ಕೆ ಸಂಬಂಧಿಸಿದಂತೆ ದೂರು ದಾಖಲಿಸಿದ್ದಾಳೆ. ತನ್ನ ಪತಿ ತನಗೆ ಬೋಳು ತಲೆ ಇರುವ  ಕುರಿತು ಮಾಹಿತಿ ನೀಡದೇ ಮೊಸ ಮಾಡಿ ತನ್ನನ್ನು ವಿವಾಹವಾಗಿದ್ದಾನೆ ಎಂದು ಆರೋಪಿಸಿ ದೂರು ದಾಖಲಿಸಿದ್ದಾಳೆ.

ಮಹಿಳೆಯ ದೂರಿನ ಆಧಾರದ ಮೇಲೆ ಥಾಣೆ ಗ್ರಾಮೀಣ ನಯಾ ನಗರ ಪೊಲೀಸ್ ಠಾಣೆಯಲ್ಲಿ ಭಾರತೀಯ ದಂಡ ಸಂಹಿತೆಯ (ಐಪಿಸಿ) ಸೆಕ್ಷನ್ 406 ಮತ್ತು 500 ರ ಅಡಿಯಲ್ಲಿ ಪತಿಯ ವಿರುದ್ಧ ಪ್ರಕರಣ ದಾಖಲಿಸಲಾಗಿದೆ ಎಂದು ಹಿರಿಯ ಪೊಲೀಸ್ ಠಾಣೆ ಕೈಲಾಶ್ ಬಾರ್ವೆ ತಿಳಿಸಿದ್ದಾರೆ.

ತನಗೆ 2 ವರ್ಷದ ಹಿಂದೆ ಮದುವೆಯಾಗಿದ್ದು, ಗಂಡನ ಕುಟುಂಬವು ಬೋಳು ತಲೆ ಕುರಿತು ಮಾಹಿತಿಯನ್ನೇ ನೀಡಿಲ್ಲ. ವಿಗ್ ಧರಿಸಿ ಮೋಸ ಮಾಡಿ ನನ್ನನ್ನು ಮದುವೆಯಾಗಿದ್ದಾರೆ. ಒಂದು ವೇಳೆ ಬೋಳು ತಲೆ ವಿಚಾರ ತಿಳಿದಿದ್ದರೆ ತಾನು ಆತನನ್ನು ಮದುವೆಯೇ ಆಗುತ್ತಿರಲಿಲ್ಲ ಎಂದು ದೂರಿನಲ್ಲಿ ಹೇಳಿದ್ದಾರೆ.  ಅಂತೆಯೇ ತಾನು ಇತ್ತೀಚೆಗೆ ತನ್ನ ಮೈದುನರನ್ನು ಭೇಟಿ ಮಾಡಿದಾಗ ಅಚಾನಕ್ಕಾಗಿ ಈ ಬೋಳು ತಲೆಯ ವಿಚಾರ ಬಹಿರಂಗವಾಯಿತು. ಆದರೆ ಆಗ ಅವರು ಇದು ದೊಡ್ಡ ವಿಷಯವಲ್ಲ ಎಂದು ಹೇಳಿದ್ದರು ಎಂದು ಮಹಿಳೆ ಹೇಳಿದ್ದಾಳೆ.

ಇನ್ನು ಮಹಿಳೆ ನೀಡಿರುವ ದೂರಿನ ಅನ್ವಯ ದೂರು ದಾಖಲಿಸಿಕೊಂಡಿರುವ ಪೊಲೀಸರು ಕೋರ್ಟ್ ಗೆ ಅರ್ಜಿ ಸಲ್ಲಿಕೆ ಮಾಡಿದ್ದು, ಕೋರ್ಟ್ ಆತನಿಗೆ ಪೊಲೀಸರಿಗೆ ಶರಣಾಗುವಂತೆ ಸೂಚಿಸಿತ್ತು. ಇದೀಗ ಅದೇ ಕೋರ್ಟ್ ನಲ್ಲಿ ಪತಿ ಕೂಡ ಅರ್ಜಿ ಸಲ್ಲಿಕೆ ಮಾಡಿದ್ದಾನೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com